ಮಸ್ಕಿ : 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ
ಮಸ್ಕಿ : ಶಾಲೆ ಮತ್ತು ಮನೆ ಇವೆರಡಕ್ಕೂ ಮಕ್ಕಳು ಚಿರಋಣಿಯಾಗಿರಬೇಕು’ ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ರವರು ಹೇಳಿದರು.
ಪಟ್ಟಣದ ಧನಗರವಾಡಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶಾಲೆಯು ಹಲವಾರು ವರ್ಷಗಳಿಂದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ವಿದ್ಯಾದೇಗುಲ ಎನಿಸಿಕೊಂಡಿದೆ. ಶೈಕ್ಷಣಿಕ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟಿವಟಿಕೆಗಳಲ್ಲೂ ಶಾಲೆ ಗಮನಾರ್ಹ ಸಾಧನೆ ಮಾಡಿದೆ’ ಎಂದರು.
ಅದೇ ರೀತಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಮತಿ ಈರಮ್ಮ ರವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಶಾಲೆ ಭದ್ರ ತಳಹದಿ. ವಿದ್ಯಾರ್ಥಿಗಳು ಇತರೆ ವಿಚಾರಗಳತ್ತ ಗಮನ ಹರಿಸದೆ ಓದಿನತ್ತ ಹೆಚ್ಚಿನ ಗಮನ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿಸಿಆರ್ ಪಿ ರಾಮಸ್ವಾಮಿ,ಬಾಲಸ್ವಾಮಿ ಹಂಪನಾಳ,ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಕಾಂತಮ್ಮ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ವೇಳೆ, ಶಾಲಾ ಭೂದಾನಿಗಳಾದ ಅರ್ಜುನ್ ಮಾಲಿ ಪಾಟೀಲ್, ಸಿಆರ್ ಪಿ ರಾಮಸ್ವಾಮಿ,ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಶಾಲೆಯ ಮುಖ್ಯ ಗುರುಗಳಾದ ಶ್ರಿಕಾಂತಮ್ಮ, ನಿ.ಶಿಕ್ಷಕರಾದ ಬಾಲಸ್ವಾಮಿ ಹಂಪನಾಳ,ಸಹ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿದಂತೆ ಇನ್ನಿತರರು ಸಾರ್ವಜನಿಕರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ