ವಿದ್ಯಾ ದೇಗುಲದಲ್ಲಿ ,ಪ್ರತಿಭಾ ಕಾರಂಜಿ ,ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾಭಾರತಿ ಶಾಲಾ ಮಕ್ಕಳು
ಕೊಟ್ಟೂರು: ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ನ್ಯೂ ವಿದ್ಯಾಭಾರತಿ ಶಾಲೆಯ ಮಕ್ಕಳು ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಪ್ರಯುಕ್ತ ಆಯ್ಕೆಯಾದ ಮಕ್ಕಳನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಶುಕ್ರವಾರ ಮಾಡಲಾಯಿತು.
ನ್ಯೂ ವಿದ್ಯಾಭಾರತಿ ಶಾಲೆಯಿಂದ ಸರ್ಕಾರಿ ಆಸ್ಪತ್ರೆಯ ಮುಂಭಾಗದಿಂದ ಮರಿಕೊಟ್ಟೂರೇಶ್ವರ ದೇವಸ್ಥಾನದ ಮೂಲಕ ಬಸ್ ನಿಲ್ದಾಣ, ಜವಳಿ ಸರ್ಕಲ್, ಬನಶಂಕರಿ ದೇವಸ್ಥಾನದ ಮಾರ್ಗವಾಗಿ ಮತ್ತೇ ಶಾಲೆಯನ್ನು ತಲುಪಿತು.
ನ್ಯೂ ವಿದ್ಯಾಭಾರತಿ ಶಾಲೆಯ ವ್ಯವಸ್ಥಾಪಕರು, ಶಿಕ್ಷಕರು ಭಾಗವಹಿಸಿದ್ದರು. ಮಕ್ಕಳು ಬೆಳ್ಳಿ ರಥೋತ್ಸವದಲ್ಲಿ ತೆರಳುತ್ತಿರುವುದನ್ನು ನೋಡಿ ಸಾರ್ವಜನಿಕರು ಸಂತಸ ಪಟ್ಟರು. ಆ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ ಎಂದರು. ಅಲ್ಲದೇ ಈ ವಿದ್ಯಾಸಂಸ್ಥೆಯು ೨೫ ವರ್ಷಗಳನ್ನು ಪೂರೈಸಿ ೨೬ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತಸ ತಂದಿದೆ. ಅಲ್ಲದೇ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ, ಎಲ್.ಕೆ.ಜಿ. ಯಿಂದ ೧೦ನೇ ತರಗತಿಯವರೆಗಿನ ಮಕ್ಕಳಿಗೆ ನೂತನ ತಂತ್ರಜ್ಞಾನಗಳನ್ನು, ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಶಾಲೆಯಲ್ಲಿ ಒದಗಿಸಲಾಗುತ್ತಿದೆ ಎಂದು ಶಾಲೆಯ ವ್ಯವಸ್ಥಾಪಕರಾದ ಹರ್ಷ ಪತ್ರಿಕೆಗೆ ತಿಳಿಸಿದರು.
ಕುಮಾರಸ್ವಾಮಿ ಮಾತನಾಡುತ್ತಾ ಮಕ್ಕಳ ಕಲಿಕೆ, ಶಾಲಾ ವಾತಾವರಣ, ಮಕ್ಕಳ ಶಿಸ್ತಿನ ಬಗ್ಗೆ ಮಾತನಾಡಿದರು. ಜೆ.ಕೊಟ್ರೇಶ್, ರೈತ ಸಂಘದ ಅಧ್ಯಕ್ಷರಾದ ಮರುಳಸಿದ್ದಪ್ಪ, ರೇವಂತ್ ಇತರರು ಉಪಸ್ಥಿತರಿದ್ದರು. ಶನಿವಾರ ಸಂಜೆ ಶಾಲಾ ಮಕ್ಕಳಿಂದ ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಂದು ಹೇಳಿದರು




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ