ವಕೀಲರ ಕ್ರಿಕೆಟ್ ಟೂರ್ನಮೆಂಟ್‌ನ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಯುವ ವಕೀಲ ಉತ್ಸಾಹಿ ಕ್ರಿಕೆಟಿಗ ವಿರೇಶ್ ಪವ್ಹಾರ್...!
ಲಿಂಗಸೂಗೂರು ಜ.31: ಲಿಂಗಸೂಗೂರು ನೂತನ ನ್ಯಾಯಾಲಯದ ಕಟ್ಟಡದ ಉದ್ಘಾಟನೆಯ ಅಂಗವಾಗಿ ಲಿಂಗಸುಗೂರು ತಾಲೂಕು ವಕೀಲರ ಸಂಘ ಆಯೋಜಿಸಿದ ಮೂರು ದಿನದ(ಜ.31, ಫೆ.1 ಮತ್ತು 2) ರಾಯಚೂರು ಜಿಲ್ಲಾಮಟ್ಟದ ವಕೀಲರ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ದಿನದಲ್ಲಿ ಅತಿಹೆಚ್ಚು ರನ್‌ಗಳನ್ನು ದಾಖಲಿಸಿ ಸೆಮಿಫೈನಲ್ ಮುನ್ನುಗ್ಗಿದ ಲಿಂಗಸುಗೂರಿನ ಖ್ಯಾತ ಹಿರಿಯ ನ್ಯಾಯವಾದಿ ಅಮರೇಶ ಸಿ ಪಾಟೀಲ್ ಅವರ ಸಹಾಯಕ ವಕೀಲ ವಿರೇಶ್ ಪವ್ಹಾರ್ ಅವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿ ವಕೀಲರ ಸಂಘ ಅಭಿನಂದಿಸಿತು.
ಪ್ರತಿಸ್ಪರ್ಧಿ ಲಿಂಗಸುಗೂರು ಬಿ ತಂಡ ಎಂಟು ಓವರ್‌ಗಳಲ್ಲಿ 86 ರನ್ ಗಳಿಸಿತು. ಆ ತಂಡವನ್ನು ಹಿಂದಿಕ್ಕಿ ಅಷ್ಟೇ ಓವರ್‌ಗಳಲ್ಲಿ 87 ರನ್ ಗಳಿಸಿ ಲಿಂಗಸೂಗೂರು ಸಿ ತಂಡ ನಿರೀಕ್ಷಿಸದ ಗೆಲುವು ಸಾಧಿಸಿ ನಗೆಯಬೀರಿತು. ಆ ತಂಡದ ಗೆಲುವಿಗೆ ಕಾರಣವಾಗಿದ್ದೆ ಬಹುಮುಖ್ಯ ವೀರೇಶ ಪವ್ಹಾರ್ ವಕೀಲರು ಅನ್ನುವುದು ನೆರೆದ ವಕೀಲ ಬಾಂಧವರಲ್ಲಿ ಗಮನಾರ್ಹವಾಗಿ ಸೆಳೆಯಿತು.
ಈ ಸಂದರ್ಭದಲ್ಲಿ ಹಿರಿಯ ಪ್ರಮುಖ ವಕೀಲರುಗಳಾದ ಮುದುಕಪ್ಪ, ನಾಗರಾಜ ಗಸ್ತಿ, ಬಾಷುಮಿಯಾ, ಕುಪ್ಪಣ್ಣ ಸೇರಿದಂತೆ ಸಹ-ಕ್ರಿಕೆಟಿಗ ವಿನಯಕುಮಾರ ಅನೇಕ ವಕೀಲ ಕ್ರೀಡಾಪಟುಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ