ಶಿವಗಂಗಾ ಹೇಳಿಕೆಗೆ ಅಹಿಂದ ಖಂಡನೆ
ದಾವಣಗೆರೆ: ಸಾಮಾಜಿ, ಶೈಕ್ಷಣಿಕ ಜಾತಿ ಗಣತಿ ಕುರಿತು ಅಪಸ್ವರ ಎತ್ತಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ವಿರುದ್ಧ ಅಹಿಂದ ಚೇತನ ಹಾಲುಮತ ಮಹಾಸಭಾ ಅಸಮಧಾನ ವ್ಯಕ್ತಪಡಿಸಿದೆ.
ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದು, ಎಲ್ಲರ ಅಭಿವೃದ್ಧಿ ನಮ್ಮ ಗುರಿ ಎಂದಿದ್ದ ಬಸವರಾಜ ಈಗ ಏಕಾಏಕಿ ಜಾತಿ ಗಣತಿ ವಿರುದ್ಧ ಅಪಸ್ವರ ಎತ್ತಿರುವುದು ಖಂಡನೀಯ ಎಂದು ಮಹಾಸಭಾದ ರಾಜು ಮೌರ್ಯ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಸಿ. ವೀರಣ್ಣ ಇತರರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಚನ್ನಗಿರಿಯಲ್ಲಿ ಶಿವಗಂಗಾ ಬಸವರಾಜ ಆಯ್ಕೆಯಾಗಿರುವುದೇ ಅಹಿಂದ ಮತಗಳಿಂದ. ಈಗ ಏಕಾಏಕಿ ಜಾತಿ ಗಣತಿ ಮಾಡಿದ್ದು ನಮಗೇ ತಿಳಿದೇ ಇಲ್ಲ. ಮನೆ ಮನೆಗೆ ಭೇಟಿನೀಡದೆ ಎಲ್ಲೋ ಕುಳಿತು ಮಾಡಿದಂತಿದೆ. ಯಾವುದೇ ಕಾರಣಕ್ಕೂ ಜಾತಿ ಗಣತಿ ಬಿಡುಗಡೆ ಮಾಡಲು ನಾನು ಬಿಡಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಅವರು ಅಹಿಂದ ವರ್ಗಕ್ಕೆ ಮಾಡುತ್ತಿರುವ ದ್ರೋಹ ಎಂದರು.
2015ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಯ್ಯ ನೇತೃತ್ವದ ಸರ್ಕಾರ 165 ಕೋಟಿ ರೂ. ಬಿಡುಗಡೆ ಮಾಡಿ, 55 ಪ್ರಶ್ನೆಗಳ ಮುಂದಿಟ್ಟು ಸಮೀಕ್ಷೆ ಮಾಡಿದೆ. ವಿದ್ಯಾವಂತ ತರಬೇತಿ ಪಡೆದ ಶಿಕ್ಷಕರು ತರಬೇತಿ ನೀಡಿದ್ದಾರೆ. ಅಂತಹ ಶಿಕ್ಷಕರು ಮಾಡಿದ ಸಮೀಕ್ಷೆಯನ್ನು ಈಗ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುವುದು ಸರಿಯಲ್ಲ. ಪಕ್ಷದ ನೇತಾರ ರಾಹುಲ್ ಗಾಂಧಿ ರಾಷ್ಟçಮಟ್ಟದಲ್ಲಿ ಜಾತಿ ಗಣತಿ ಮಾಡಲು ಆಗ್ರಹಿಸುತ್ತಿದ್ದಾರೆ. ಆದರೆ, ಇಲ್ಲಿ ಅದಾಗಲೇ ಆದ ಗಣತಿ ವರದಿ ಬಿಡುಗಡೆ ಮಾಡಲು ಅವರದ್ದೇ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.
ಮುಖ್ಯಮ0ತ್ರಿ ಆಗಿ 2 ವರ್ಷ ಕಳೆದಿರುವ ಸಿದ್ದರಾಮಯ್ಯ ತಮ್ಮದೇ ಸರ್ಕಾರ ಮಾಡಿದ ಗಣತಿಯನ್ನು ಒಪ್ಪಿಕೊಳ್ಳಲು ಧೈರ್ಯ ತೋರಬೇಕು. ವರದಿ ವಿರೋಧಿಸುವ ತಮ್ಮದೇ ಪಕ್ಷದ ಶಾಸಕರು, ಸಚಿವರಿಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಾಲುಮತ ಮಹಾಸಭಾದ ಚಂದ್ರ ದೀಟೂರು, ಅಹಿಂದ ಚೇನತದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಸಿದ್ಧಲಿಂಗಪ್ಪ, ಹಸನ್ ಬಾಬು, ಅಣ್ಣಪ್ಪ ಎಲ್. ಹೊಳೆಬಸಪ್ಪ ಎಸ್. ಅನಿಲ್, ಎಸ್. ಶೇಖರಪ್ಪ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ