ಯೂಲು ಡೆಲಿವರಿ ರೈಡರ್ಗಳಿಗಾಗಿ ಭಾರತದ ಮೊದಲ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತಾ ಕಲಿಕಾ ಉಪಕ್ರಮ ಪ್ರಾರಂಭ
ಬೆಂಗಳೂರು, ಫೆ, 27; ಕಂಪನಿಯ ಉದ್ಯೋಗಿಯಲ್ಲದ, ಸ್ವತಂತ್ರವಾಗಿ ಹಾಗೂ ಒಪ್ಪಂದದ ಮೇಲೆ ಕೆಲಸ ಮಾಡುವವರಿಗಾಗಿ ಯುಲುಕಂಪೆನಿಯು ದೇಶದಲ್ಲೇ ಮೊದಲ ಬಾರಿ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತಾ ಕಲಿಕಾ ಮಾದರಿಯನ್ನು ಬಿಡುಗಡೆ ಮಾಡಿದೆ.
ಸಂಸ್ಥೆಯ ಮಾಹಿತಿ ಪ್ರಕಾರ 3600 ಯೂಲು ಚಾಲಕರು ಈಗಾಗಲೇ ಅಭಿಯಾನದ ಮೊದಲ ಹಂತದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣ ಹಾಗೂ ಕ್ವಿಜ್ ನ್ನು ಪೂರ್ಣಗೊಳಿಸಿದ್ದು ಯೂಲುವಿನಿಂದ ‘ ಸೇಫ್ ರೈಡರ್ ಬಿಗಿನರ್ ( ಸುರಕ್ಷಿತ ಚಾಲಕರು) ಎಂಬ ಬ್ಯಾಡ್ಜ್ ಪಡೆದುಕೊಂಡಿದ್ದಾರೆ. ಜತೆಗೆ 1200 ಚಾಲಕರು ವಿಡಿಯೋ ಮೂಲಕ ರಸ್ತೆ ಸುರಕ್ಷತೆಗೆ ಸಪಥ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮೂರು ವಿಷಯದ ಬಗ್ಗೆ ಯೂಲು ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಸಂಚಾರ ನಿಯಮದ ಬಗ್ಗೆ ಎಲ್ಲಾ ಚಾಲಕರಲ್ಲಿ ಅರಿವು ಮೂಡಿಸುವುದು, ಗೊಂದಲ ಪರಿಹರಿಸುವುದು ಮೊದಲ ಹೆಜ್ಜೆಯಾಗಿದೆ. ನಿರ್ಬಂಧಿತ ಹಾದಿಯಲ್ಲಿ ಸಂಚಾರ, ಪಾದಾಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಸಿಗ್ನಲ್ ಜಂಪ್ ಮಾಡುವುದು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಭಾರತದಲ್ಲಿ ಕಡಿಮೆ ವೇಗದ ವಾಹನಕ್ಕೆ ಹೆಲ್ಮೇಟ್ ಕಡ್ಡಾಯವಲ್ಲದಿದ್ದರೂ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಲು ಉತ್ತೇಜಿಸಲಾಗಿದೆ. ಜತೆಗೆ ನಿಯಮ ಉಲ್ಲಂಘಿಸಿದಲ್ಲಿ ಸಂಚಾರ ಅಧಿಕಾರಿಗಳು ಹಾಗೂ ಯೂಲು ಎರಡು ಕಡೆಯಿಂದ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಮಾನವ ಹಾಗೂ ತಂತ್ರಜ್ಞಾನ ಸಮ್ಮಿಶ್ರಣದಲ್ಲಿ ಸುರಕ್ಷತೆ ಕಾಪಾಡುವ ವಿಧಾನವನ್ನು ಯೂಲು ಪರಿಚಯಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬೈಕ್ ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಇವರು ಸ್ಥಳೀಯ ಸಮುದಾಯ ಹಾಗೂ ಅಧಿಕಾರಿಗಳ ಜತೆಗೂಡಿ ಯೂಲು ಚಾಲಕರ ಸಂಚಾರದ ಮೇಲೆ ನಿಗಾ ವಹಿಸುತ್ತಾರೆ. ನಿಯಮ ಉಲ್ಲಂಘನೆಗೆ ದಂಡ ಹಾಕುವ ಅಧಿಕಾರವನ್ನೂ ನೀಡಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ