*ಮಸ್ಕಿಯಲ್ಲಿ ಮಲ್ಲಿಕಾರ್ಜುನ ರಥೋತ್ಸವ ಅದ್ಧೂರಿ*
ಮಸ್ಕಿ: ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವರ ರಥೋತ್ಸವ ಬುಧವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು.
ಗುರು ಪರಂಪರೆಯ ಗಚ್ಚಿನ ಹಿರೇ ಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಇಂದು ಸಂಜೆ 4: 45 ಕ್ಕೆ 5:10 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ಫೆ.8 ರಂದು ಧ್ವಜಾರೋಹಣ,ಪಲ್ಲಕ್ಕಿ ಸೇವಾ ಕಳಸದ ಮೆರವಣಿಗೆ ಕಾರ್ಯಕ್ರಮ ಜರುಗಿದೆ.ಇಂದು ಕಳಸಾರೋಹಣ ಸಂಜೆ 4:10 ರಿಂದ 5 ಗಂಟೆವರೆಗೆ ಜರುಗಿದವು ನಂತರ ಅಮೃತ ಘಳಿಗೆಯಲ್ಲಿ ಮಹಾ ರಥೋತ್ಸವ ಜರುಗಿತು.
ಮಸ್ಕಿ ಸೇರಿ ರಾಯಚೂರು ನೆರೆ ಜಿಲ್ಲೆಗಳ ಭಕ್ತರು ಭಾಗಿಯಾಗಿದ್ದರು ನೂತನ ರಥವನ್ನು ದೈವದ ಕಟ್ಟೆಯವರೆಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಾಯಿತು. ಫೆ. 13 ರಂದು ಪಲ್ಲಕ್ಕಿ ಸೇವಾ ಹಾಗೂ14 ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ರಥೋತ್ಸವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವ ಮೂಲಕ ಜಾತ್ರಾ ಮಹೋತ್ಸವವು ಶಾಂತಿಯುತವಾಗಿ ಹಾಗೂ ಅದ್ಧೂರಿಯಾಗಿ ಜರುಗಿತು.
ಇದೇ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ತುರುವಿಹಾಳ,ಮಹದೇವಪ್ಪ ಗೌಡ ಪೋಲೀಸ್ ಪಾಟೀಲ್,ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್,ಅಂದಾನಪ್ಪ ಗುಂಡಳ್ಳಿ,ದೊಡ್ಡಪ್ಪ ಕಡಬೂರು,ಹನುಮಂತಪ್ಪ ಮುದ್ದಾಪುರ,ಡಾಕ್ಟರ್ ಶಿವಶರಣಪ್ಪ ಇತ್ಲಿ,ನಾಗಭೂಷಣ ಬಾರಿಕೇರ್ ಮಸ್ಕಿ ಸಹಕಾರಿ ಸಂಘದ ನೂತನ ಅಧ್ಯಕ್ಷರು,ಮಲ್ಲಯ್ಯ ಬಳ್ಳಾ,ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು,ನರಸರೆಡ್ಡಿ ಮುಖ್ಯಾಧಿಕಾರಿ ಪುರಸಭೆ ಮಸ್ಕಿ,ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಿರಿಯರು,ಯುವಕ ಯುವತಿಯರು ಹಾಗೂ ಪುಟಾಣಿ ಮಕ್ಕಳು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ