ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚನೆಯಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯ ಸರಿ ಪಡಿಸುವಂತೆ : ಆನಂದ ವೀರಾಪುರ ಒತ್ತಾಯ

 

ಮಸ್ಕಿ : ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚನೆಯಲ್ಲಿ ಕಲ್ಬುರ್ಗಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ 

ಕೂಡಲೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಪಡಿಸುವಂತೆ ವಿಜ್ಞಾನ ಪರಿಷತ್ ಸದಸ್ಯ ಆನಂದ ಕುಮಾರ್ ವೀರಾಪುರ ಒತ್ತಾಯಿಸಿ ದ್ದಾರೆ. 

ಅವರು ಗುರುವಾರ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶ ಮಂಡಳಿಯ ಶೈಕ್ಷಣಿಕ ಸಮಿತಿ ರಚನೆಯಲ್ಲಿ ಕಲಬುರಗಿ ಯವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಉಳಿದ ಈ ಭಾಗದ ಸಮಗ್ರ ಶೈಕ್ಷಣೀಕ ಅಭಿವೃದ್ಧಿಯ ಜಿಲ್ಲೆಗಳಿಗೆ ಎಂದಿನಂತೆ ಅವಕಾಶ ನೀಡದೇ ವಂಚಿಸಲಾಗಿದೆ ಎಂದು ದೂರಿದರು.

ಕಲ್ಯಾಣ ಕರ್ನಾಟಕ ಮಂಡಳಿಯ ಅಧೀನದಲ್ಲಿ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚಿಸಿದ್ದು ರಾಯಚೂರು ಸೇರಿದಂತೆ ಈ ಭಾಗದ ಇನ್ನುಳಿದ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ.ಕೆಕೆಆರ್‌ಡಿಬಿಯಡಿ ರಚನೆಗೊಂಡಿರುವ ಶೈಕ್ಷಣಿಕ ಸಮಿತಿಯಲ್ಲಿ ಬಹುಪಾಲು ಕಲಬುರಗಿ, ಬೀದರ್,ಬಳ್ಳಾರಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರೂಪುಗೊಂಡಿರುವ ಕೆಕೆಆರ್‌ಡಿಬಿಯಿಂದಲೇ ಅನುದಾನ ಹಂಚಿಕೆ ಸೇರಿ ಇತರೆ ಎಲ್ಲ ವಿಷಯಗಳಲ್ಲಿಯೂ

ಅನ್ಯಾಯವಾಗುತ್ತಿದ್ದು, ಕೂಡಲೇ ಸರ್ಕಾರ ಗಮನ ಹರಿಸಿ ಅನ್ಯಾಯ ಸರಿ ಪಡಿಸಬೇಕು ಎಂದು ವಿಜ್ಞಾನ ಪರಿಷತ್ ಸದಸ್ಯ ಆನಂದ ವೀರಾಪುರ ಪತ್ರಿಕೆ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*