ರಾಷ್ಟ್ರಪತಿಗೆ ಗಡುವು ಸರಿ ಅಲ್ಲ

 ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರಾಜ್ಯಪಾಲರ ಮೂಲಕ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ವಿರೋಧ ಪಕ್ಷಗಳು ಆಳ್ವಿಕೆ ನಡೆಸುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಿರುಕುಳ ಕೊಡುವ ಸಮಸ್ಯೆಗೆ ಪರಿಹಾರ ಸಿಕ್ಕಬಹುದು ಎಂಬ ಆಶಯ ಹುಸಿ ಆಗಿದೆ.



ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಈ ಏಪ್ರಿಲ್ 8, 2025ರಂದು ಜಸ್ಟೀಸ್ ಜಿ. ಬಿ. ಪರ್ದಿವಾಲ, ಜಸ್ಟೀಸ್ ಆರ್ ಲ್. ಮಹಾದೇವನ್ ಮಹತ್ವದ ತೀರ್ಪು ನೀಡಿ, ರಾಜ್ಯಪಾಲರು ಅಂಕಿತ ಹಾಕಲು ಹಾಡುವ ವಿಧಿಸಿದ್ದರು. ಅಷ್ಟರ ಒಳಗಾಗಿ ರಾಜ್ಯಪಾಲರು ಸಹಿ ಹಾಕಬೇಕು. ಗಡುನಿನ ಒಳಗೆ ಸಹಿ ಹಾಕದೆ ಇದ್ದರೆ ಮಸೂದೆ ಅಂಗೀಕೃತ ಎಂದು ಭಾವಿಸಬಹುದು ಎಂದು ತೀರ್ಪು ನೀಡಲಾಗಿತ್ತು.
ಇದು ಪರೋಕ್ಷವಾಗಿ ರಾಷ್ಟ್ರಪತಿ ಅವರ ವಿವೇಚನಾ ಅಧಿಕಾರ ಮೊಟಕುಗೊಳಿಸುವ ರೀತಿ ಇತ್ತು. ತಮಿಳುನಾಡಿನ 10 ಮಸೂದೆಗಳು ರಾಷ್ಟ್ರಪತಿ ಅವರ ಬಳಿ ಅಂಕಿತಕ್ಕೆ ಹಲವಾರು ವರ್ಷ ಕಾದುಕೊಂಡು ಇದ್ದವು. ಸುಪ್ರೀಂ ತೀರ್ಮಾನದಿಂದ ಈ 10 ಮಸೂದೆಗಳು ಅಂಗೀಕಾರ ಆದಂತೆ ಆಗಿತ್ತು.
ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಎಡೆಮಾಡಿಕೊಟ್ಟಿತ್ತು.
ತೀರ್ಪಿನಲ್ಲಿ ನ್ಯಾಯಾಲಯ ರಾಷ್ಟ್ರಪತಿಗಳು ಅಗತ್ಯ ಎನ್ನಿಸಿದಾಗ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಬೇಕು ಎಂದು ಸಹ ಹೇಳಿತ್ತು.
ಇದೀಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಬಿ.ಆರ್. ಗವಾಯ್ ಅವರ ಐದು ಜನರ ಪೀಠ ಇದು ಸಂವಿಧಾನಕ್ಕೆ ವಿರೋಧವಾದ ತೀರ್ಪು ಎಂದು ಪ್ರಕಟಿಸಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*