"ಎಲ್ಲರಿಗೂ ಪ್ರೀತಿಯ ಆಹ್ವಾನ ಕರ್ನಾಟಕ ಪ್ರಸ್ ಕ್ಲಬ್ ಕೊಟ್ಟೂರು ತಾಲೂಕು ಪತ್ರಿಕಾ ದಿನಾಚರಣೆ-2025"
ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷ ನೇತೃತ್ವದಲ್ಲಿ ಹಾಗೂ ವಿಜಯನಗರ ಜಿಲ್ಲಾ ತಾಲೂಕು ಘಟಕಗಳ ಪದಗ್ರಹಣ ಕಾರ್ಯಕ್ರಮ ಕೊಟ್ಟೂರು ತಾಲೂಕು ವತಿಯಿಂದ ಮೊದಲನೇ ಪತ್ರಿಕಾ ದಿನಾಚರಣೆ-2025 ಜುಲೈ 13 ಭಾನುವಾರ ರಂದು ನೆಡೆಯುವ ಕಾರ್ಯಕ್ರಮ
ಕೊಟ್ಟೂರು: ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಅಧ್ಯಕ್ಷರು ದಯಾನಂದ , ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಜಿ , ಮತ್ತು ಹಗರಿ ಬೊಮ್ಮನಹಳ್ಳಿಯ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯಕ್ , ಮಾಜಿ ಸಚಿವರು ಶ್ರೀರಾಮುಲು ,ಕೆಎಂಎಫ್ ರಾಜ್ಯಾಧ್ಯಕ್ಷರು ಎಸ್ ಭೀಮ ನಾಯಕ್, ಜೆಡಿಎಸ್ ರಾಜ್ಯ ವಕ್ತಾರರು ರಾಜುಗೌಡ್ರು,ಬೆಂಗಳೂರು ಇವರುಗಳು ಆಗಮಿಸಲಿದ್ದು. ಕರ್ನಾಟಕ ಪ್ರಸ್ ಕ್ಲಬ್ ಕೊಟ್ಟೂರು ಘಟಕದ ವತಿಯಿಂದ ಬಾಲಾಜಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ವಿಜಯನಗರ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಗ್ರಹಣ ಸಮಾರಂಭ ಮತ್ತು ಪತ್ರಿಕಾ ದಿನಾಚರಣೆ 13.07.2025 ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ವಿತರಕರು, ಸೈನಿಕರು, ಶಿಕ್ಷಕರು, ಆರೋಗ್ಯ ಇಲಾಖೆ, ಹಿರಿಯ ಪತ್ರಕರ್ತರಿಗೆ ಸನ್ಮಾನ,ಪ್ರತಿಭಾವಂತ ವಿದ್ಯಾರ್ಥಿಗಳು, ಜೆಸ್ಕಾಂ ಸಿಬ್ಬಂದಿಯವರಿಗೆ ಸನ್ಮಾನ, ಅಂಗನವಾಡಿ ಕಾರ್ಯಕರ್ತರಿಗೆ, ಬಿಸಿ ಊಟ ಮಹಿಳಾ ಕಾರ್ಯಕರ್ತರಿಗೆ ,ಚೌರಿಕರು,ಆಟೋ ಚಾಲಕರು, ಪೌರಕಾರ್ಮಿಕರು, ರೈತ ಸಂಘಟನೆ ಹಾಗೂ ಕೃಷಿಕ ರೈತ ಮಿತ್ರರು ಸಂಘಟನೆಗಳು ,ವಿವಿಧ ಸಮಾಜ ಸೇವಕರು,
ಈ ಕಾರ್ಯಕ್ರಮವನ್ನು ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಉಪಾಧ್ಯಕ್ಷ ಕೆ ಕೊಟ್ರೇಶ್ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷ ಡಿ ಸಿದ್ದಪ್ಪ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ ಪ್ರಕಾಶ್ ಕರ್ನಾಟಕ ಪ್ರಸ್ ಕ್ಲಬ್ ನಾ ಸರ್ವ ಸದಸ್ಯರು ಕುಟುಂಬ ಸಮೇತವಾಗಿ ಆಗಮಿಸುವಂತೆ ಕೋರಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ