ಧರ್ಮಸ್ಥಳ ಧರ್ಮಾಧಿಕಾರಿ ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಜ್ಯಾಧ್ಯಕ್ಷೆ ವಿಜಯರಾಣಿ ಸಿರವಾರ ಆಗ್ರಹ

 

ಮಸ್ಕಿ : ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಧರ್ಮಸ್ಥಳ ಫೈಲ್ಸ್ ವಿಷಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅನುಮಾನಾಸ್ಪದ ನಡೆಯನ್ನು ಖಂಡಿಸುತ್ತೇವೆ. ಕಳೆದ ಮೂವತ್ತು ವರ್ಷಗಳಿಂದ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ಹಾಗೂ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದ ಜನರೇ ಭಯಭೀತರಾಗಿದ್ದಾರೆ. ದಿನಕ್ಕೊಂದು ಮಾಹಿತಿಗಳು ಮತ್ತು ತಿರುವುಗಳನ್ನು ಪಡೆದುಕೊಂಡು ಜನರಲ್ಲಿ ಆತಂಕ ಉಂಟು ಮಾಡಿದೆ. ಧಾರ್ಮಿಕ ಸ್ಥಳಗಳಲ್ಲಿ ಕೊಲೆ ಅತ್ಯಾಚಾರ ಹೆಚ್ಚುತ್ತಲೇ ಇರುವುದು ಭಕ್ತರನ್ನು ದಿಕ್ಕು ತಪ್ಪಿಸಿದೆ ಇದಕ್ಕೆಲ್ಲ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಇನ್ನಿತರ ಕುಟುಂಬಸ್ಥರು ಎಂಬ ನೇರ ಆರೋಪಕ್ಕೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗೂ ಅವರ ವಿರುದ್ಧ ಆರೋಪಗಳು ಇದ್ದಾಗ್ಯೂ ಅವರ ನಡೆ ಅನುಮಾನಾಸ್ಪದವಾಗಿದೆ ಮತ್ತು ಪ್ರಸ್ತುತ ಮಾಡಿರುವ ಆರೋಪಗಳಿಗೆ ಪುಷ್ಟಿ ನೀಡುವಂತಹದ್ದಾಗಿದೆ. ಇದು ಧಾರ್ಮಿಕ ಸ್ಥಳಗಳಲ್ಲಿ ಅಪವಿತ್ರ ಆನೈತಿಕ ಕಾರ್ಯಗಳನ್ನು ನಡೆಸಿದ್ದು ಮೇಲ್ನೋಟಕ್ಕೆ ನಿಜವೆಂದು ಕಂಡು ಬರುತ್ತಿದೆ. ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರ ಸಾಲು ಸಾಲು ಸರಣಿ ಪ್ರಕರಣವನ್ನು ಎಸ್ ಐಟಿ ಗೆ ವಹಿಸಿ "నివి ತಂಡವನ್ನು ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಹಾಗೆಯೇ ಸೌಜನ್ಯ ಪ್ರಕರಣವನ್ನು ಕೂಡಾ ಎಸ್. ಐ.ಟಿ ಗೆ ವಹಿಸಿ ಆದರೆ ಪ್ರಕರಣದಲ್ಲಿ ಎಷ್ಟೇ ಬಲಾಢ್ಯ ವ್ಯಕ್ತಿ ಇದ್ದರೂ, ಎಷ್ಟು ಗೂಂಡಾ ವರ್ತನೆ ತೋರಿದರೂ, ಹಣ ಮತ್ತು ಅಧಿಕಾರದ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕು.


ಅಪರಾಧಿಗಳ ಅಪರಾಧವನ್ನು ಮುಚ್ಚಿ ಹಾಕದ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯಾಲಯದಿಂದ ಕಠಿಣ ಶಿಕ್ಷೆಗೆ ಗುರಿಪಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ.

 ಎಲ್ಲಾ ದೋಷ ಆರೋಪಗಳನ್ನು ಹೊತ್ತುಕೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪೀಠದಲ್ಲಿ ಮುಂದುವರೆಯಲು ಯಾವುದೇ ಅರ್ಹತೆ ಇರುವುದಿಲ್ಲ ತಕ್ಷಣ ಪೀಠವನ್ನು ತೊರೆಯಬೇಕು ಹಾಗೇ ಧರ್ಮಸ್ಥಳದ ಧಾರ್ಮಿಕ ಕೇಂದ್ರವನ್ನು ರಾಜ್ಯ ಸರಕಾರವೇ ವಶಕ್ಕೆ ಪಡೆದು ತಾವೇ ಮುಂದುವರೆಸಬೇಕು ಹಾಗೆಯೇ ಅಲ್ಲಿ ಶಾಂತಿ ಸ್ಥಾಪನೆ ಮಾಡಬೇಕು ಆರೋಪಿ ಪಟ್ಟ ಹೊತ್ತಿರುವ ವೀರೇಂದ್ರ ಹೆಗ್ಗಡೆಯನ್ನು ಕೇಂದ್ರ ಸರ್ಕಾರದಲ್ಲಿ ನಾಮ ನಿರ್ದೇಶಿತ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡಿದ್ದು ಅತ್ಯಂತ ಖಂಡನೀಯ. ತತ್ ಕ್ಷಣವೇ ರಾಜೀನಾಮೆ ಪಡೆದು ಭಕ್ತಾದಿಗಳ ಆತಂಕ ದೂರ ಮಾಡಬೇಕೆಂದು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ ರಾಜ್ಯ ಸಮಿತಿ ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿಜಯರಾಣಿ ಸಿರವಾರ ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*