*ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಕಾಕುಬಾಳು ಅವಿರೋಧ ಆಯ್ಕೆ.*

 *ವಿಜಯನಗರದಲ್ಲಿ ಉದ್ಘಾಟನೆಗೊಂಡ ಕರ್ನಾಟಕ ಪ್ರೆಸ್ ಕ್ಲಬ್.* 

"ಅನ್ಯಾಯ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದಾಗ ಮಾತ್ರ ಆಡಳಿತ ವ್ಯವಸ್ಥೆ ಸುಧಾರಿಸಲು ಸಾಧ್ಯ : ಕೆ ಕೊಟ್ರೇಶ್ "

ಕೊಟ್ಟೂರು : ಕರ್ನಾಟಕ ಪ್ರೆಸ್ ಕ್ಲಬ್ ನ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಕಾಕುಬಾಳು, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಕೆ.ಕೊಟ್ರೇಶ ಹಾಗು ರಾಜ್ಯ ಸಂಘಟನಾ ಕಾರ್ಯದರ್ಶಿ  ಡಾಕ್ಟರ್ ನಂದು ಪೂಜಾರಿ ಅವರು ಮಂಗಳವಾರ ಅಮರಾವತಿ ಪ್ರವಾಸಿ ಮಂದಿರದಲ್ಲಿ ಘೋಷಿಸಿದರು.

ಉಪಾಧ್ಯಕ್ಷರಾಗಿ ಅಂಬರೀಶ, ಉಮೇಶ ನೆಲ್ಕುದುರೆ, ಡಿ.ಮುಕುಂದಗೌಡ, ಖಜಾಂಚಿಯಾಗಿ  ಸುಗ್ಗೇನಹಳ್ಳಿ ವೆಂಕಟೇಶ, ಕಾರ್ಯದರ್ಶಿಗಳಾಗಿ ಸುರೇಶ ಯಳಕಪ್ಪನವರ, ಸತೀಶ ಗಜಾಪುರ, ಬಸವರಾಜಸ್ವಾಮಿ, ವೆಂಕಟೇಶ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ, ಗಣೇಶ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಕುಂಬಾರ , ಸಲಹಾ ಸಮಿತಿ ಸದಸ್ಯರಾಗಿ ಡಿ.ವಿಶ್ವನಾಥ, ಎ.ಕೆ.ಬಾಬಣ್ಣ ಸಲಹಾ ಸದಸ್ಯರಾಗಿ ಗಿರೀಶಕುಮಾರ, ಪ್ರಶಾಂತ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಬಳಿಕ ರಾಜ್ಯ ಉಪಾಧ್ಯಕ್ಷ ಕೆ.ಕೊಟ್ರೇಶ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದಾಗ ಮಾತ್ರ ಆಡಳಿತ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ಪ್ರೆಸ್ ಕ್ಲಬ್ ನಿಂದ ನಮ್ಮ ಸಂಘದ ಪತ್ರಕರ್ತರಿಗೆ ಸ್ಟಾರ್ ಹೆಲ್ತ್ ಇನ್ಸೂರೆನ್ಸ್, ಕನಿಷ್ಟ 3 ವರ್ಷ ಸಂಘದಲ್ಲಿ ಸೇವೆ ಸಲ್ಲಿಸಿದವರು ಮರಣ ಹೊಂದಿದಾಗ 2 ಲಕ್ಷ ಸಹಾಯಧನ ಸಿಗಲಿದೆ. ನಿಮ್ಮ ನ್ಯಾಯಯುತ ಹೋರಾಟಗಳಿಗೆ ಸಂಘ ಸದಾ ಬೆಂಬಲಕ್ಕೆ ನಿಲ್ಲಲಿದೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ನಂದು ಪೂಜಾರಿ ಮಾತನಾಡಿ, ಪತ್ರಕರ್ತರು ಸ್ವಾರ್ಥಕ್ಕಾಗಿ ಪತ್ರಿಕಾ ರಂಗಕ್ಕೆ ಬರದೇ, ಸಮಾಜದ ಒಳಿತಿಗಾಗಿ ಬರಬೇಕು. ಪತ್ರಕರ್ತನಿಗೆ ಸುದ್ದಿ ಬರೆಯುವಾಗ ಸತ್ಯಾ ಸತ್ಯತೆ ಇದ್ದರೆ ಎಷ್ಟೋ ರಾಜಕಾರಿಣಿಗಳು, ಸ್ವಾಮೀಜಿಗಳ ಬಣ್ಣ ಕಳಚಿದ ಉದಾಹರಣೆಗಳಿವೆ ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸೋಮಶೇಖರಯ್ಯ ಹಿರೇಮಠ ಮಾತನಾಡಿ, ಪತ್ರಿಕೆಗಳ ಜೀವಾಳವಾಗಿರುವ ಅರೆಕಾಲಿಕ ಪತ್ರಕರ್ತರ ಬದುಕಿನ ಬವಣೆಗಳನ್ನು ಯಾವ ಸಂಘಗಳು ಗಂಭೀರವಾಗಿ ಪರಿಗಣಿಸಿಲ್ಲ. ಪತ್ರಿಕಾ ರಂಗವನ್ನು 4 ನೇ ಅಂಗವೆಂದು ಹೇಳುವ ಮೂಲಕ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘಗಳು ಯೋಚಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ನ ವಿಜಯನಗರ ನೂತನ ಜಿಲ್ಲಾಧ್ಯಕ್ಷ ಪ್ರಕಾಶ್ ಕಾಕುಬಾಳು ಮಾತನಾಡಿ, ಪತ್ರಕರ್ತರಾದವರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಜನಪರ ಕಾಳಜಿ ಇದ್ದರೆ ಮಾತ್ರ ಜನರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ತಮ್ಮ ವೃತ್ತಿ ಧರ್ಮ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದರು.

ಸಂಘದಲ್ಲಿ ಪತ್ರಕರ್ತರು ಪರಸ್ಪರ ನಂಬಿಕೆ, ವಿಶ್ವಾಸದಿಂದ ನಡೆಯಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿದರೆ ಸಂಘದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಮಹೇಶ, ಹ.ಬೊ.ಹಳ್ಳಿ ತಾಲೂಕು ಅಧ್ಯಕ್ಷ ಶಿವಶಂಕರಸ್ವಾಮಿ  ಎಸ್ ಪ್ರಕಾಶ್ , ತೆಗ್ಗಿನಕೆರಿ ಕೊಟ್ರೇಶ್,ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*