*ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ*

ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ ರವರು ರಂಗಭೂಮಿ ಸೇವೆ ಕರ್ನಾಟಕದ ಬಳ್ಳಾರಿ ನಗರದದಿಂದಲೇ ಆರಂಭವಾಗಿದೆ. ರಾಘವರ ಅಭಿನಯ ಪ್ರತಿಭೆಯಿಂದ ನಾಟಕ ಕಲೆಯ ಬಗ್ಗೆ ಅವರಿಗಿದ್ದ ಅಪಾರ ಜ್ಞಾನ, ಪ್ರಖ್ಯಾತ ನ್ಯಾಯವಾದಿಯಾಗಿ ಅಗ್ರ ನಟರಾಗಿ ನಾಟಕಗ್ರೇಸರ ಚಕ್ರವರ್ತಿಯೆಂದು ಹೆಸರು ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.ಅವರ ಪ್ರತಿಭೆ ಬೆಂಗಳೂರು, ಮದ್ರಾಸ್,ಮುಂಬಯಿಗಳಲ್ಲಿ ವಿಕಾಸಗೊಂಡು ಆಂಧ್ರ, ಬಂಗಾಳಿ, ಬರ್ಮಾದ ವರೆಗೆ ತಮ್ಮ ನಟನೆಯನ್ನು ಪ್ರದರ್ಶಿಸಿ ಕರ್ನಾಟಕ ಮತ್ತು ಬಳ್ಳಾರಿ ಕೀರ್ತಿಯನ್ನು ಪ್ರಸಿದ್ದಿ ಗೊಳಿಸಿದ್ದಾರೆ.ರಾಘವರವರು ಯುರೋಪ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಇನ್ನೂ ಮುಂತಾದ ದೇಶಗಳಲ್ಲಿ ನಟನೆಯನ್ನು ಪ್ರದರ್ಶಿಸಿ ಅಂತರಾಷ್ಟ್ರೀಯ ಕೀರ್ತಿಯನ್ನು ಪಡೆದಿದ್ದಾರೆ. ಬಳ್ಳಾರಿ ರಾಘವ ಕನ್ನಡ, ತೆಲುಗು,ಹಿಂದಿ, ಇಂಗ್ಲಿಷ್, ಮರಾಠಿ, ಭಾಷೆಗಳಲ್ಲಿ ನಟನೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.ರಾಘವರವರು *ಸರಿಪಡನಿ ಸಂಗತಲು* ಎಂಬ ನಾಟಕವನ್ನು ರಚಿಸಿದ್ದಾರೆ. *ಬಳ್ಳಾರಿ ರಾಘವ ರವರು ರೈತು ಬಿಡ್ಡ* ಚಲನಚಿತ್ರದಲ್ಲಿ ನಟಿಸಿದ್ದಾರೆ. ಈ ರಂಗಭೂಮಿ ಸೇವೆ ಸಲ್ಲಿಸಿದ ಬಳ್ಳಾರಿ ರಾಘವ ಹೆಸರಿನಲ್ಲಿ ಸಂಸ್ಥೆ ವತಿಯಿಂದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಗಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಒಬ್ಬರಿಗೆ ರಂಗಭೂಮಿ ಕಲಾವಿದರಿಗೆ ರಾಜ್ಯ ಪ್ರಶಸ್ತಿಗೆ ರೂ 21100/-ಗಳು ನಗದು ಮತ್ತು ರಾಘವರ ಬೆಳ್ಳಿ ಪದಕ ನೆನಪಿನ ಕಾಣಿಕೆ ನೀಡಲಾಗುತ್ತಿದೆ.

ಈ ಎರಡು ಭಾಷೆಗಳಲ್ಲಿ ರಂಗಭೂಮಿ ಸೇವೆ ಸಲ್ಲಿಸುತ್ತಿರುವವರಿಗೆ ಸುಮಾರು ಹದಿನೇಳು ವರ್ಷಗಳಿಂದ ಅಂದರೆ 2009ರಿಂದ ಪ್ರಶಸ್ತಿ ಪ್ರದಾನ ನೀಡುತ್ತಾ ಬಂದಿದ್ದೇವೆ.

*ನಾಟ್ಯ ಕಲಾ ಪ್ರಪೂರ್ಣ* *ಬಳ್ಳಾರಿ ರಾಘವರ 145ನೇ ಜಯಂತಿ*

*ರಾಜ್ಯ ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಾಟಕೋತ್ಸವ*

02-08-2025 ಶನಿವಾರ ಸಂಜೆ 5ಗಂಟೆಗೆ ರಾಘವ ಕಲಾ ಮಂದಿರದಿಂದ ಗಡಿಗಿ ಚನ್ನಪ್ಪ ವೃತ್ತದವರೆಗೆ ನೇರವಾಗಿ ಹೋಗಿ ರಾಘವ ಪುತ್ಥಳಿ ಮಾಲಾರ್ಪಣೆ ಮಾಡುವುದು.ನಂತರ 6-00ಕ್ಕೆ ರಾಘವ ಕಲಾ ಮಂದಿರದಲ್ಲಿ 

*ಉದ್ಘಾಟಕರು*

ಶ್ರೀ ಸಿ ನಾಗರಾಜ್ 

ಕುಲಸಚಿವರು 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ 

*ಮುಖ್ಯ ಅತಿಥಿಗಳಾಗಿ*

ಶ್ರೀ ಪಿಚ್ಚಳ್ಳಿ ಶ್ರೀನಿವಾಸ ಜನಪರ ಜನಪದ ಗಾಯಕರು ಮಾಜಿ ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು 

*ಅಧ್ಯಕ್ಷತೆ*

ಶ್ರೀ ಕೆ ಚನ್ನಪ್ಪ

ಗೌರವಾಧ್ಯಕ್ಷರು

ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ

 ಇವರುಗಳು ಆಗಮಿಸಿ

ಬಳ್ಳಾರಿ ರಾಘವ ರಾಜ್ಯ *ಪ್ರಶಸ್ತಿ ಪುರಸ್ಕೃತರಾದ*

*ಶ್ರೀ ಡಿಂಗ್ರಿ ನಾಗರಾಜ್, ಬೆಂಗಳೂರು* 

 ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

 ತದನಂತರ

ಕಲಾ ಸಂಗಮ ಸಂಸ್ಥೆ ಧಾರವಾಡ ಕಲಾ ತಂಡದಿಂದ

*ಸಮರ ಸಿಂಹ ಸಂಗೊಳ್ಳಿ ರಾಯಣ್ಣ*

ಕನ್ನಡ ಐತಿಹಾಸಿಕ ನಾಟಕ

ರಚನೆ: ಶ್ರೀ ವೀರೇಶ ಬಳಗಾಲಪೆಟ್ 

ನಿರ್ದೇಶನ: ಶ್ರೀ ಪ್ರಭು ಹಂಚಿನಾಳ ಇವರ ನೇತೃತ್ವದಲ್ಲಿ 

ನಾಟಕ ಪ್ರದರ್ಶನಗೊಳ್ಳಲಿದೆ.

03-08-2025

ಭಾನುವಾರ ಸಂಜೆ 6-00ಕ್ಕೆ

*ಅಧ್ಯಕ್ಷತೆ*

ಶ್ರೀ ಕೆ ಕೋಟೆಶ್ವರ ರಾವ್

ಅಧ್ಯಕ್ಷರು, ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ

*ಮುಖ್ಯ ಅತಿಥಿಗಳು*

ಶ್ರೀ ಆಚಾರ್ಯ ವೆಲಿದಂಡ ನಿತ್ಯಾನಂದ ರಾವು 

ಉಪಕುಲಪತಿಗಳು

ಸುರವರಂ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯ, ಹೈದರಾಬಾದ್ 

ಶ್ರೀ ಗುಮ್ಮಡಿ ಗೋಪಾಲ ಕೃಷ್ಣ 

ಅಧ್ಯಕ್ಷರು, ತೆಲುಗು ನಾಟಕ ಅಕಾಡಮಿ, ಆಂಧ್ರಪ್ರದೇಶ 

 *ಬಳ್ಳಾರಿ ರಾಘವ ತೆಲುಗು ರಾಜ್ಯ ಪ್ರಶಸ್ತಿ ಪುರಸ್ಕೃತರು*

*ಶ್ರೀ ಗುಮ್ಮಡಿ ಗೋಪಾಲ ಕೃಷ್ಣ* 

*ಮೇಡೂರು ಗ್ರಾಮ, ಕೃಷ್ಣ ಜಿಲ್ಲೆ*

ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ತದನಂತರ ಡಾಕ್ಟರ್ ರಾಮನ್ ಫೌಂಡೇಶನ್ ಶ್ರೀ ಸಾಯಿಬಾಬಾ ನಾಟ್ಯ ಮಂಡಳಿ,ವಿಜಯವಾಡ ಇವರಿಂದ 

*ಜಯಹೋ ಶ್ರೀ ಛತ್ರಪತಿ ಶಿವಾಜಿ ಮಹಾರಾಜ*

ತೆಲುಗು ಐತಿಹಾಸಿಕ ಸಾಮಾಜಿಕ ನಾಟಕ ರಚನೆ ಹಾಗೂ ಡಾ.ಪಿ.ವಿ.ಎನ್. ಕೃಷ್ಣ , ಅಧ್ಯಕ್ಷರು ಸಂಸ್ಕಾರ ಭಾರತಿ ವಿಜಯವಾಡ ಇವರ ನೇತೃತ್ವದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ಈ ಎರಡು ದಿನಗಳ ಕಾಲ ನಡೆಯುವ ನಿರಂತರ ಕಾರ್ಯಕ್ರಮಗಳಿಗೆ ಆಗಮಿಸಿ ಎಲ್ಲಾ ಸುದ್ದಿ ಮಾಧ್ಯಮದವರು ತಮ್ಮ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಚಾರ ಮಾಡಿ ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ.

ತಮ್ಮ ತಮ್ಮ ಇ-ಮೇಲ್ ಗೆ ಭಾವಚಿತ್ರ ಮತ್ತು ಸುದ್ದಿಯನ್ನು ಕಳುಹಿಸಿಕೊಡಲಾಗಿದೆ.ಇಂತಿ ನಿಮ್ಮಅಧ್ಯಕ್ಷರು ಕಾರ್ಯದರ್ಶಿ/ಸದಸ್ಯರು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*