"ಸುದೀರ್ಘ ೩೨ ವರ್ಷಗಳ ಶಿಕ್ಷಕವೃತ್ತಿಗೆ ವಿದಾಯ ಹೇಳಿದ ಎಚ್ ಕುಲುಸಂಬಿ"

*ವಿದ್ಯಾರ್ಥಿಯ ಅಚ್ಚು ಮೆಚ್ಚಿನ ಶಿಕ್ಷಕಿ ಎಚ್ ಕುಲುಸಂಬಿ *

ಕೊಟ್ಟೂರು: ಸುದೀರ್ಘವಾಗಿ ೩೨ ವರ್ಷಗಳ ಪವಿತ್ರವಾದ ಶಿಕ್ಷಕ ವೃತ್ತಿಗೆ ಕೊಟ್ಟೂರಿನ ಕುಲುಸಂಬಿ ಅವರು ಸಾಕ್ಷಿಯಾಗಿದ್ದಾರೆ. ಶಿಕ್ಷಕ ವೃತ್ತಿಯೇ ಪವಿತ್ರವಾದದ್ದು ಎಂಬುದು ಜನರ ಅಭಿಮತ. ಅಂತಹ ಶಿಕ್ಷಕ ವೃತ್ತಿಯಲ್ಲಿ ಸುದೀರ್ಘವಾಗಿ ೩೨ ವರ್ಷಗಳನ್ನು ನಿರಂತರವಾಗಿ ಯಶಸ್ವಿಯಾಗಿ ನಿರ್ವಹಿಸಿ, ನಿವೃತ್ತಿಯಾಗಿದ್ದಾರೆ. ಕುಲುಸಂಬಿಯವರು ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯಲ್ಲಿ ೪ ವರ್ಷ ಶಿಕ್ಷಕಿಯಾಗಿ ನಂತರ 

ಕೊಟ್ಟೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವನಗರದಲ್ಲಿ ೨೮ ವರ್ಷಗಳ ಕಾಲ ಶಿಕ್ಷಕರಾಗಿ, ಮಕ್ಕಳಿಗೆ, ಪೋಷಕರಿಗೆ ಅಚ್ಚು ಮೆಚ್ಚಿನವರಾಗಿದ್ದು, 30.06.2025 ಸೋಮವಾರ ದಂದು ವಯೋ ನಿವೃತ್ತಿ ಹೊಂದಿದ್ದು ಅವರ ಜೀವನ ಯಶಸ್ಸಿನಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳು ,ಪೋಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*