ಹಕ್ಕುಪತ್ರ ಕೊಡಿ ಇಲ್ಲ ರೈತರಗೆ ಭೂಮಿ ನೀಡಿ ; ಸಿದ್ದನಗೌಡ ತುರುವಿಹಾಳ

 

ಮಸ್ಕಿ : ಪಟ್ಟಣದ ಪರಾಪುರ ರಸ್ತೆ ಯಲ್ಲಿನ ಪುರಸಭೆ ವತಿಯಿಂದ ಜನವಸತಿಗಾಗಿ ಖರೀದಿಸಿದ ಭೂಮಿಯು ರಸ್ತೆ ಇಲ್ಲದೇ ಅವೈಜ್ಞಾನಿಕವಾಗಿದ್ದು,

 ಸರಿ ಸುಮಾರು ಮೂರನಾಲ್ಕು ವರ್ಷಗಳೇ ಗತಿಸಿದರೂ ಇಲ್ಲಿಯವರೆಗೆ ಪುರಸಭೆ ಚುಕ್ಕಾಣಿ ಹಿಡಿದವರು ಹಾಗೂ ಅಧಿಕಾರಿಗಳು ವಸತಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡದೇ ಬೇರೆಯವರ ಬಗ್ಗೆ ಮಾತನಾಡುತ್ತಾ ಇರುವುದು ಎಷ್ಟರ ಮಟ್ಟಿಗೆ ಸರಿ..! ಎಂದು ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ತುರುವಿಹಾಳ ರವರು ಖಡಕ್ ಎಚ್ಚರಿಕೆ ನೀಡಿದರು.

ಗುರುವಾರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಮನೆಗಳ ಹಂಚಿಕೆಯನ್ನು ತಾಲೂಕು ಪಂಚಾಯತ್ ಇಒ ಅವರು ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಜನರಿಗೆ ದಾರಿ ತಪ್ಪಿಸುವ ಕೆಲಸ ಬಿಟ್ಟು ಪುರಸಭೆಯಲ್ಲಿ ಆಡಳಿ ವಹಿಸಿಕೊಂಡವರು ಸರಕಾರಕ್ಕೆ ಹಾಗೂ ಜನರಿಗೆ ಮೋಸ ಮಾಡಿದ್ದೀರಿ ಎಂದು ಆರೋಪಿಸಿದರು.

ಫಲಾನುಭವಿಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಆದಷ್ಟೂ ಬೇಗನೆ ಹಕ್ಕು ಪತ್ರವನ್ನು ನೀಡಬೇಕು ಇಲ್ಲವಾದರೆ ರೈತರಿಂದ ಪಡೆದುಕೊಂಡ ಭೂಮಿಯನ್ನು ಮರಳಿ ಕೊಡಿ ಎಂದು ಪತ್ರಿಕಾ ಹೇಳಿಕೆ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ, ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ,ನಾರಾಯಣಪ್ಪ ಕಾಸ್ಲಿ, ಮಲ್ಲಯ್ಯ ಮುರಾರಿ,ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ, ರವಿಕುಮಾರ್ ಮಡಿವಾಳ, ಶಿವರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*