ಮುಖ್ಯಮಂತ್ರಿ ಪದಕ ವಿಜೇತೆ ಕುಮಾರಿ ಕಲ್ಪನಾ ಕಾರಾಗೃಹದಲ್ಲಿ ಸಸಿ ಹಚ್ಚುವ ಮೂಲಕ ಹುಟ್ಟು ಹಬ್ಬ ಆಚರಣೆ

 


ರಾಯಚೂರು.ಆ.20

ರಾಯಚೂರು. ಜಿಲ್ಲಾ ಕಾರಗೃಹದಲ್ಲಿ ತನ್ನ ಹುಟ್ಟು ಹಬ್ಬ ಆಚರಿಸುವುದರ ಜೊತೆಗೆ 50 ಸಸಿಗಳನ್ನು ಜೈಲಿನ ಆವರಣದಲ್ಲಿ ನೆಟ್ಟು ಹಸಿರು ಕಾರಗೃಹ ನಿರ್ಮಿಸುವ ಪಣ ದೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಕಲ್ಪನಾ ಸುಕಾಲಪೇಟ ಆಚರಿಸಿಕೊಂಡರು,

ಈ ಹಿಂದೆ ಕು// ಕಲ್ಪನಾ (all India prision sports meet) ಅಖಿಲ ಭಾರತ ಕಾರಗೃಹಗಳ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಗುಜರಾತಿನ "ಅಹಮದ್ ಬಾದ್" ನಲ್ಲಿ ಜರುಗಿತು. ಆ ಸ್ಪರ್ಧೆಯಲ್ಲಿ ಸಿಂಧನೂರು ನಗರದ ಸುಕಾಲಪೇಟೆ ಕುಮಾರಿ ಕಲ್ಪನಾ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 3 ಚಿನ್ನದ ಪದಕ ಮತ್ತು 2 ಚಾಂಪಿಯನ್ ಟ್ರೋಫಿಯನ್ನು ಗೆದ್ದು ಪ್ರಥಮ ಬಾರಿಗೆ ಕರ್ನಾಟಕ ಕಾರಗೃಹ ಇಲಾಖೆಗೆ ಕೀರ್ತಿ ತಂದುಕೊಡುವುದರ ಮೂಲಕ ಕೇವಲ ಎರಡು ವರ್ಷದ ಸೇವಾ ಅವಧಿಯಲ್ಲಿ, ಚಿಕ್ಕ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಮಾನ್ಯ ಮುಖ್ಯಮಂತ್ರಿ ಪದಕ ಕ್ಕೆ ಆಯ್ಕೆಯಾಗಿ ಕಾರಾಗೃಹ ಇಲಾಖೆಗೆ ಕೀರ್ತಿ ತಂದುಕೊಟಿದ್ದಾರೆ ಇಂತಹ ಕಾರ್ಯದಲ್ಲಿ ನಮ್ಮ ಇಲಾಖೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೀರ್ತಿ ತರಬೇಕು ಎಂದು ರಾಯಚೂರು ಜಿಲ್ಲಾ ಕಾರಗೃಹದ ಅಧೀಕ್ಷಕರಾದ ಬಿ ಆರ್ ಅಂದಾನಿಯವರು ಹರ್ಷ ವ್ಯಕ್ತಪಡಿಸಿದರು,

ನಂತರ ಬ್ರಹ್ಮಕುಮಾರಿ ಯ ಮುಖ್ಯಸ್ಥರಾದ ಸ್ಮಿತಾ ಅಮ್ಮನವರು, ಮತ್ತು ಮಾನಸಿಕ ತಜ್ಞ ಡಾಕ್ಟರ್ ಮನೋಹರ್ ಪತ್ತಾರ್ ಇವರುಗಳ ನೇತೃತ್ವದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಕುಮಾರಿ ಕಲ್ಪನಾ ಅವರನ್ನು ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*