*ಪತ್ರಿಕೋದ್ಯಮ ರತ್ನ ಸೇವಾ ಪ್ರಶಸ್ತಿ ಚಿಗಟೇರಿ ಜಯಪ್ಪ*
ಸುವರ್ಣ ಕರ್ನಾಟಕ ಮಾನಹಕ್ಕುಗಳ ಸಂರಕ್ಷಣಾ ವಿಜಯನಗರ ಜಿಲ್ಲಾಧ್ಯಕ್ಷರಿಗೆ : ಪತ್ರಿಕೋದ್ಯಮ ರತ್ನ ಸೇವಾ ಪ್ರಶಸ್ತಿ ಚಿಗಟೇರಿ ಜಯಪ್ಪ
ಕೊಟ್ಟೂರು: 77 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸುವರ್ಣ ಕರ್ನಾಟಕ ಮಾನಹಕ್ಕುಗಳ ಸಂರಕ್ಷಣಾ ಸಂಸ್ಥೆಯ ನೇತೃತ್ವದಲ್ಲಿ ಮೂರನೇ ವರ್ಷದ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುವರ್ಣ ಕರ್ನಾಟಕ ಮಾನಹಕ್ಕುಗಳ ಸಂರಕ್ಷಣಾ ಸಂಸ್ಥೆಯ ವತಿಯಿಂದ ವಿಜಯನಗರ ಜಿಲ್ಲಾಧ್ಯಕ್ಷರಾದ ಕೊಟ್ಟೂರು ತಾಲೂಕಿನ ಚಿಗಟೇರಿ ಜಯಪ್ಪ ಅವರಿಗೆ ಪತ್ರಿಕಾರಂಗದಲ್ಲಿ ಅವರ ಸೇವೆಯನ್ನು ಗುರುತಿಸಿ ಪತ್ರಿಕೋದ್ಯಮ ರತ್ನ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನೋಟ್ ಬುಕ್ ವಿತರಣೆ, ಮತ್ತು ಪಟ್ಟಣದಲ್ಲಿ ಸ್ವಛತೆ ಕಾರ್ಯ ಮಾಡುತ್ತಿರುವ ಬಿ ಬಿ ಎಂ.ಪಿ ಪೌರಕಾರ್ಮಿಕರಿಗೆ ಮಹಿಳೆಯರಿಗೆ ಸನ್ಮಾನ, ಹಾಗೂ 300 ಕಡುಬಡವ ಕುಟುಂಬದವರಿಗೆ ಅಕ್ಕಿ ವಿತರಣೆ ಮಾಡಲಾಯಿತು.
ನಂತರ ಸುವರ್ಣ ಕರ್ನಾಟಕ ಮಾನಹಕ್ಕುಗಳ ಸಂರಕ್ಷಣಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ,ಜಿಲ್ಲೆ,ತಾಲೂಕು,ಪದಾಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಅನ್ಯಾಯದ ವಿರುದ್ಧ ಸಂಘಟನೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಸಂಸ್ತಾಪಕರಾದ ರಾಜ್ಯದ್ಯಕ್ಷರಿಗೆ ಸಿ.ಎಂ.ಗಣೇಶ್.ಗೌಡರಿಗೆ ಸಂಸ್ಥೆಯ ಎಲ್ಲಾ ಪಧಾದಿಕಾರಿಗಳು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಹನುಮಂತಪ್ಪ .ಕಾಂಗ್ರೆಸ್ ಮುಖಂಡರಾದ ರಘು ಗೌಡ.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಪ್ರಕಾಶ ಮೂರ್ತಿ. ಮಾರುತಿ ಮೆಡಿಕಲ್ ಮಾಲಿಕರು.ಮಹೇಂದ್ರ ಮನ್ನತ್ .ರಾಜ್ಯಪ್ಪ. ಸಿ.ಎಂ.ದ್ಯಾವಪ್ಪ. ಮಂಜುಳ ರಘು. ಸಂಸ್ಥೆಯ ರಾಜ್ಯದ ಜಿಲ್ಲೆ ಹಾಗು ತಾಲೂಕು ಗ್ರಾಮೀಣ ಭಾಗದ ಪಧಾದಿಕಾರಿಗಳು.ಇನ್ನಿತರರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ