ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ 10ನೇ ವರ್ಷದ ಸ್ಮರಣೋತ್ಸವ


ಮಸ್ಕಿ, ಮಹಾಸಾದ್ವಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ 10ನೇ ವರ್ಷದ ಸ್ಮರಣೋತ್ಸವ ನಿಮಿತ್ತ ಪಟ್ಟಣದ ಬ್ರಮರಾಂಬ ದೇವಸ್ಥಾನ ದಿಂದ ಬೃಹತ್ ಗಾತ್ರದ ಬೆಳ್ಳಿ ರಥದಲ್ಲಿ ಹೇಮರಡ್ಡಿ ಮಲ್ಲಮ್ಮ ರವರ ಭಾವಚಿತ್ರವನ್ನು ವಿವಿಧ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದರು.

ಪಟ್ಟಣದ ಬ್ರಮರಾಂಬ ದೇವಸ್ಥಾನ ದಿಂದ ಬೃಹತ್ ಗಾತ್ರದ ಬೆಳ್ಳಿ ರಥದಲ್ಲಿ ಮಹಾಸಾದ್ವಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ರವರ ಭಾವಚಿತ್ರವನ್ನು ಬಸವೇಶವರ ವೃತ, ವಾಲ್ಮೀಕಿ ವೃತ್ತ,ಕನಕದಾಸ ವೃತ್ತ, ಹಿರೇ ಬಜಾರ,ದೈವದ ಕಟ್ಟೆ, ಗಾಡಿಭಾವಿ ಸರ್ಕಲ್, ಅಗಸಿ, ಅಶೋಕ ವೃತ್ತ, ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತ ದಿಂದ ಮಸ್ಕಿ ಪೊಲೀಸ್ ಠಾಣೆಯ ಸಹಾಯದೊಂದಿಗೆ ಬೃಹತ್ ಡಿ ಜೆ ಸೌಂಡ್ ಸಿಸ್ಟಮ್ ಹಾಡಿಗೆ ಕುಣಿದು ಕುಪ್ಪಳಿಸುತ್ತಾ ನೇರವಾಗಿ ಬ್ರಮರಾಂಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿಸುವ ಮೂಲಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ 10ನೇ ವರ್ಷದ ಸ್ಮರಣೋತ್ಸವವನ್ನು ಯಶಸ್ವಿಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಷ ಬ್ರ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಚ್ಚಿನ ಹಿರೇ ಮಠ, ಪ್ರತಾಪ ಗೌಡ ಪಾಟೀಲ್ ಮಾಜಿ ಶಾಸಕರು,ಮಲ್ಲಿಕಾರ್ಜುನ ಪಾಟೀಲ್ ಯದ್ದಲ ದಿನ್ನಿ,ಬಸನಗೌಡ ಬ್ಯಾಗವಾಟ್ ಸೇರಿದಂತೆ ರೆಡ್ಡಿ ಸಮಾಜದ ಹಿರಿಯ ಮುಖಂಡರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*