ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಯಶಸ್ಸು

 

ವರದಿ ಮಂಜುನಾಥ್ ಕೋಳೂರು ಕೊಪ್ಪಳ

ಕೊಪ್ಪಳ ಆಗಸ್ಟ್ 20 : -- ತಾಲೂಕಿನ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಕ್ತದಾನಿಗಳ ಬಳಗ, ಗುಲಾಬ ಹುಸೇನ್ ಫೌಂಡೇಷನ್, ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಲಿಂಗರಾಜ, ರೋಗಿಗಳಿಗೆ, ಅಪಘಾತ ಹೊಂದಿರುವವರಿಗೆ ಅವಶ್ಯವಿರುವ ರಕ್ತವನ್ನು ನೀಡುವ ಮೂಲಕ ಎಲ್ಲರೂ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು .

ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯ ಕರ್ತರು, . ಡಾ" ಕೆ ಎಚ್ ತೊಗರಿ, ಡಾ" ವೆಂಕಟೇಶ್, ಡಾ"ಕನಕಪ್ಪ, ಡಾ" ಪ್ರಕಾಶ ರವರು " ರಕ್ತದಾನ '" ಮಾಡುವ ಮುಖಾಂತರ ರಕ್ತಧಾನಿಗಳಾದರು. ರಕ್ತದಾನ ಶಿಬಿರದಲ್ಲಿ ಒಂದು ವಿಶೇಷತೆಯಾಗಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಜಿ ಸೈನಿಕರಾದ ಸಂಜಿವ್ ತೋಟಗಂಟಿ, ಬಸಯ್ಯ ಹಿರೆಮಠ ಅವರಿಗೆ ಸನ್ಮಾನಿಸಲಾಯಿತು.


ವಿಶೇಷವಾಗಿ ಮುನಿರಾಬಾದ್‌ ಪೋಲಿಸ್ ಠಾಣೆ ಪಿಎಸ್‌ಐ ಅಮರೇಗೌಡ ರಕ್ತದಾನ ಮಾಡುವ ಮೂಲಕ ಯುವಕರಿಗೆ ಸ್ಪೂರ್ತಿಯಾದರು. ಈ ರಕ್ತದಾನ ಶಿಬಿರದಲ್ಲಿ ಸುಮಾರು 105 ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು.


ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಕೆ. ಎಚ್.ತೊಗರಿ, ಮಾಜಿ ತಾಪಂ ಅಧ್ಯಕ್ಷರಾದ ಬಾಲಚಂದ್ರ , ಕರ್ನಾಟಕ ರಕ್ತದಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಅಬ್ದುಲ್‌ ವಹೀದ್‌, ಉತ್ತರ ಕರ್ನಾಟಕ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ದಿನಾಕರ್ , ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ದೇವೇಂದ್ರಪ್ಪ , ಮುನಿರಾಬಾದ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಸದಸ್ಯರು-- ಸಿಬ್ಬಂದಿಗಳು ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿಗಳು -- ವೈದ್ಯಕೀಯ ಸಿಬ್ಬಂದಿಗಳು , ರಕ್ತದಾನಿಗಳು , ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*