ರಾಯಚೂರಿಗೆ ಶೀಘ್ರದಲ್ಲಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲ್-ಸಂಸದರು,

 


ರಾಯಚೂರು, ಬಾಬುರಾವ್‌ ರೈಲ್ವೆ ಬೋರ್ಡ್‌ ಸದಸ್ಯರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮ ನಿರ್ಭರ್ ನ ಫಲಿತಾಂಶದ ಮೇರೆಗೆ ದೇಶೀಯವಾಗಿ ನಿರ್ಮಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್‌ನ್ನು ರಾಯಚೂರಿನಿಂದ ಬೆಂಗಳೂರಿಗೆ ಪ್ರಾರಂಭಿಸಲು ಹಲವಾರು ಸಾರಿ ವಿನಂತಿಸಿದ ಮೇರೆಗೆ ಶೀಘ್ರವಾಗಿ ಬೆಂಗಳೂರುನಿಂದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು- ಬೆಂಗಳೂರಿನ ಯಶವಂತಪುರ ಜಂಕ್ಷನ್ ಮತ್ತು ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣದ ನಡುವೆ ಪ್ರಾರಂಭವಾಗುತ್ತಿದ್ದು, ಇದು ಸೇಡಂ ಜಂಕ್ಷನ್, ರಾಯಚೂರು ಜಂಕ್ಷನ್ ಮತ್ತು ಗುಂತಕಲ್ ಜಂಕ್ಷನ್‌ನಲ್ಲಿ ನಿಲುಗಡೆಯಾಗಲಿದೆ.

ಈ ಮಾರ್ಗದಲ್ಲಿನ ಹೆಚ್ಚಿನ ನಿಲುಗಡೆಗಳು ಸಣ್ಣ ಸಣ್ಣ ಪಟ್ಟಣಗಳನ್ನು ಹೊಂದಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಈ ಭಾಗದ ಪ್ರಯಾಣಿಕರು ರಾಜಧಾನಿ ಬೆಂಗಳೂರಿನೊಂದಿಗೆ ವೇಗವಾಗಿ ಸಂಪರ್ಕವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹಾಗೂ ಈ ಟ್ರೇನ್‌ನ ಪ್ರಾರಂಭದ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುತ್ತದೆ ಎಂದು ಲೋಕಸಭಾ ಸದಸ್ಯರಾದ ಶ್ರೀ ರಾಜಾ ಅಮರೇಶ್ವರ ನಾಯಕ ಹಾಗೂ ರೈಲ್ವೆ ಬೋರ್ಡ್‌ ಸದಸ್ಯರಾದ ಶ್ರೀ ಬಾಬುರಾವ್‌ ರವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*