ಜಗಳೂರು ಮೂಲ ನಿವಾಸಿಗಳ ಸಾವು:ಡಬಲ್ ಮರ್ಡರ್ ಆತ್ಮಹತ್ಯೆ ಪ್ರಕರಣ?
#DAVANAGERE #davangerepeopleatus #hmjagalurnews #indiandiedatusa
ಬ್ಯುರೋ:ಅಮೆರಿಕಾದ ಮೇರಿಲ್ಯಾಂಡ್ ಬಾಲ್ಟಿಮೋರ್ ನ towson ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟಿಸಿದ ಮೂವರು ಭಾರತೀಯರ(ಜಗಳೂರು ಮೂಲದವರ) ಸಾವಿನ ಪ್ರಕರಣ ಡಬಲ್ ಮರ್ಡರ್, ಆತ್ಮಹತ್ಯೆ ಅಂದರೆ ಇಬ್ಬರನ್ನೂ ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಂತೆ ಇದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ಈ ಮೂವರು ವಾಸಮದುತ್ತಿದ್ದ ಪ್ರದೇಶದ ಬಾಲ್ಟಿಮೋರ್ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲಿನ ಮಾಧ್ಯಮಗಳು ಮಾಡಿದ ವರದಿ ಅನ್ವಯ ಯೋಗೇಶ್ ಹೊನ್ನಾಳ, ಪ್ರತಿಭಾ, ಯಶ್ ಎಂಬುವವರು ಆ.15ರ ರಾತ್ರಿ ತನಕ ಸಾರ್ವಜನಿಕ ಸಂಪರ್ಕದಲ್ಲಿ ಇದ್ದದ್ದನ್ನು ಕಂಡವರು ಇದ್ದಾರೆ. ಅದಾದ ಬಳಿಕ ಯಾರೂ ಸಹ ಅವರನ್ನು ಕಂಡಿರಲಿಲ್ಲ. ಇದೆ ಕಾರಣಕ್ಕೆ ಅವರ ಸ್ನೇಹಿತರೊಬ್ಬರು ಕರೆಮಾಡಿ ಸ್ಥಳೀಯರು ಏಕಾಏಕಿ ನಾಪತ್ತೆ ಆದರೆ ಕಾನೂನು ಪ್ರಕಾರ ಕೈಗೊಳ್ಳುವ welfare check ಮಾಡಲು ಕೋರಿದ್ದರು. ಅದರ ಅನ್ವಯ ಪೊಲೀಸರು ಕೈಗೊಂಡ ಕಾರ್ಯಾಚರಣೆ ವೇಳೆ ಮೂವರು ಮರಣ ಹೊಂದಿರುವುದು ಪತ್ತೆಯಾಗಿದೆ. ಶುಕ್ರವಾರ ಈ ವರದಿ ಬಂದಿದೆ.
ಇನ್ನು ಶನಿವಾರ ಬಂದ ವರದಿ ಅನ್ವಯ ಪೊಲೀಸರು ನಾಗರಾಜ್ ತನ್ನ ಹೆಂಡತಿ, ಮಗುವನ್ನು ಗುಂಡಿಟ್ಟು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಂತರ ಈ ಕುರಿತು ಸ್ಪಷ್ಟನೆ ಸಿಗಲಿದೆ ಎಂದು ಹೇಳಿರುವ ಪೊಲೀಸರು ಸಾವು ಒಂದು ಕೊಲೆ ಇರಬಹುದಾ ಎಂಬ ಅನುಮಾನ ಖಂಡಿತಾ ನಮಗೆ ಇಲ್ಲ ಎಂದು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ