ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಲಿಬರೇಷನ್ ಸಂಘಟನೆಯು ಹರಾಳು ಗ್ರಾಮ ಘಟಕಕ್ಕೆ ಅಧ್ಯಕ್ಷ ಮಾಳ್ಗಿ ಕರಿಯಪ್ಪ ಆಯ್ಕೆ



ಕೊಟ್ಟೂರು ತಾಲೂಕು ಸಹ ಕಾರ್ಯದರ್ಶಿ ಬಂಗಿ ದೊಡ್ಡಬಸಪ್ಪ,ಆಯ್ಕೆ

ಕೊಟ್ಟೂರು ತಾಲೂಕು ಹರಾಳು ಗ್ರಾಮ ಘಟಕ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಭಾನುವಾರದಂದು  ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಲಿಬರೇಷನ್ ಸಂಘಟನೆಯು ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಕಾರ್ಯದರ್ಶಿ ಗುಡಿಯರ್ ಮಲ್ಲಿಕಾರ್ಜುನ ಮಾತನಾಡಿ ತಾಲೂಕಿನಾದ್ಯಂತ ಪ್ರತಿಗ್ರಾಮಕ್ಕೂ ಹೋಬಳಿಗೂ ಅಧ್ಯಕ್ಷರು ಸದಸ್ಯರುಗಳನ್ನು ನೇಮಿಸಿ,  ಹೆಚ್ಚಿನ ಮಟ್ಟದಲ್ಲಿ  ಸಂಘಟನೆಯನ್ನು ಪ್ರಬಲಗೊಳಿಸುವುದು ನನ್ನ  ಉದ್ದೇಶ ಎಂದು ಹೇಳಿದರು.

ಕೊಟ್ಟೂರು ತಾಲೂಕು ಸಹ ಕಾರ್ಯದರ್ಶಿ ಬಂಗಿ ದೊಡ್ಡಬಸಪ್ಪ, ಮತ್ತು ಹರಾಳು ಘಟಕಕ್ಕೆ ಅಧ್ಯಕ್ಷರನ್ನಾಗಿ ಮಾಳ್ಗಿ ಕರಿಯಪ್ಪ, ಉಪಾಧ್ಯಕ್ಷ ಕೊಟ್ರೇಶ್, ಕಾರ್ಯದರ್ಶಿ ನಾಗರಾಜ್,ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಮ್ರೆಡ್ ರಾಜ್ಯ ಕಮಿಟಿ ಸದಸ್ಯ ಅಜ್ಜಪ್ಪ, ಜಿಲ್ಲಾ  ಸಹ ಕಾರ್ಯದರ್ಶಿ ಬಾಲ ಗಂಗಾಧರ,  ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ, ಹುಲಿಕಟ್ಟಿ ಮೈಲಪ್ಪ,ಪುತ್ತೇಶ್ವರ ದುರ್ಗಪ್ಪ ,ಹಿರಿಯ ಕಾಮ್ರೆಡ್ ಗಳಾದ ತಾಲೂಕು ಸದಸ್ಯ ಪರಸಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*