ದಿನನಿತ್ಯ ಪತ್ರಿಕೆ ಓದುವ ಹವಾಸ್ಯ ರೂಢಿಸಿಕೊಳ್ಳಿ : ಶಾಸಕ ಜೆ.ಎನ್.ಗಣೇಶ್



ಕಂಪ್ಲಿ:ಪಟ್ಟಣದ ಬಾಲಕಿಯರ ಸರ್ಕಾರಿ ಪಿ.ಯೂ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಂಪ್ಲಿ ತಾಲೂಕು ಘಟಕ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅತ್ಯಂತ ವಿಜೃಂಭಣೆಯಿಂದ ಶನಿವಾರ ಜರುಗಿತು. 

ನಂತರ ಸಸಿಗೆ ನೀರೆರೆಯುವ ಮೂಲಕ ಸಮಾರಂಭ ಉದ್ಘಾಟಿಸಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಓದುವ ಹವ್ಯಾಸವನ್ನು ವಿದ್ಯಾರ್ಥಿನಿಯರು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೆಡಿಪಿ ಸಭೆ, ಪತ್ರಿಕೆ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವಾಸ್ತವ ರೂಪದಲ್ಲಿ ತಿಳಿಸಿಕೊಡುವ ಕಾರ್ಯವಾಗಬೇಕು. ಯಾವುದೇ ಕೇತ್ರದಲ್ಲಿ ಸಾಧನೆ ಮಾಡಬೇಕೆಂದರೆ, ಶ್ರಮ, ಪ್ರಾಮಾಣಿಕತೆ ಮುಖ್ಯವಾಗಿದೆ. ಮಾಧ್ಯಮಗಳು ಸಮಾಜದ ಮುಖವಾಣಿಯಾಗಿ ದಿನನಿತ್ಯದ ಆಗುಹೋಗುಗಳನ್ನು ತಿಳಿಸುವ ಸಾಧನಗಳಾಗಿವೆ. ಇಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ ಪತ್ರಕರ್ತರಿಗೆ ಸಾಕಷ್ಟು ಸಮಸ್ಯೆಗಳಿದ್ದು, ಅದರ ಅರಿವು ನನಗಿದೆ. ಪತ್ರಿಕಾ ಭವನ ನಿರ್ಮಾಣಕ್ಕೆ ಸಿಎ ಸೈಟ್ ನೀಡುವ ಭರವಸೆ ಈ ವರ್ಷ ಗ್ಯಾರಂಟಿ. ಈಗಾಗಲೇ ನೀಡಿರುವ ಪತ್ರಕರ್ತರನ್ನು ಬಿಟ್ಟು, ಉಳಿದ ಪತ್ರಕರ್ತರಿಗೆ ನಿವೇಶನ ನೀಡುವ ಭರವಸೆ ನೀಡಿದರು. 

ಕ.ಕಾ.ಪ.ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಮಾತನಾಡಿ, ತಾಲೂಕು ಮತ್ತು ಗ್ರಾಮೀಣ ಪತ್ರಕರ್ತರಿಗೆ ಬಹುತೇಕರಿಗೆ ವೇತನ ಇಲ್ಲ. ಜಾಹಿರಾತನ್ನೇ ಅವಲಂಬಿಸಬೇಕಾಗಿದೆ. ಸುದ್ದಿ ಸಂಗ್ರಹಕ್ಕೆ ಅನುಕೂಲವಾಗಲು, ಉಚಿತ ಬಸ್ ಪಾಸ್ ಮತ್ತು ಆರೋಗ್ಯಕ್ಕಾಗಿ ಆರೋಗ್ಯ ಸಂಜೀವಿನಿ ಕಾರ್ಡ್ ಅನ್ನು ನೀಡುವ ವ್ಯವಸ್ಥೆ ಸರ್ಕಾರ ಮಾಡಬೇಕಾಗಿದ್ದು, ಇದಕ್ಕೆ ಶಾಸಕ ಗಣೇಶ್ ಅವರು ಸದನದಲ್ಲಿ ಧ್ವನಿ ಎತ್ತಬೇಕು ಎಂದರು. 

ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷಾ ಮಾತನಾಡಿ, ಪತ್ರಕರ್ತರ ಬದುಕು ಸಮಸ್ಯೆಯಲ್ಲಿ ದೂಡುವಂತಾಗಿದೆ. ಕಂಪ್ಲಿಯಲ್ಲಿ ಪತ್ರಕರ್ತರ ಭವನ ನಿರ್ಮಿಸಿಕೊಡುವ ಮೂಲಕ ಅನುವು ಮಾಡಿಕೊಡಬೇಕಾಗಿದೆ. ಮತ್ತು ಪತ್ರಕರ್ತರ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಧ್ವನಿಯಾಗಬೇಕು ಎಂದರು. 

ಹಿರಿಯ ಪತ್ರಕರ್ತ ವಿರೂಪಾಕ್ಷಯ್ಯಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪ್ಲಿ ತಾಲೂಕು ಘಟಕ ಅಧ್ಯಕ್ಷ ಪಿ.ವಿರೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 

ನಂತರ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಸಾಕ್ಷಿಗೌಡ, ದಿವ್ಯಶ್ರೀ, ಎಸ್.ಪೂಜಾ, ಹಾಜಿರಾಭೀ ಎ, ನಾನಾ ಕ್ಷೇತ್ರದ ಸಾಧಕರಾದ ಟಿ.ಕೆ.ಶಿವಶಂಕ್ರಪ್ಪ, ನಾಯಕರ ದುರುಗಪ್ಪ, ಲಕ್ಷ್ಮಣ ಮಳೆಕರ್ ಇವರಿಗೆ ಪ್ರಶಸ್ತಿ ಪ್ರಮಾಣ ಪತ್ರ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಗಣೇಶ್ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತರಾದ ಚಂದ್ರಶೇಖರಗೌಡ ನಿರೂಪಣೆ ಮಾಡಿದರು. ಬಂಗಿ ಮಂಜುನಾಥ ಸ್ವಾಗತಿಸಿದರು. ಎಚ್.ಎಂ.ಪಂಡಿತಾರಾಧ್ಯ ಅವರು ವಂದಿಸಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಗೌಸಿಯಾಬೇಗಂ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಮಹ್ಮದ್ ಶಫಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಬಸವರಾಜ ಪಾಟೀಲ್. ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಆರ್.ಕೆ.ಶ್ರೀಕುಮಾರ್, ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಮುಖ್ಯಾಧಿಕಾರಿ ಕೆ.ದುರುಗಣ್ಣ, ಕ.ಕಾ.ಪ.ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ದ್ಯಾಮನಗೌಡ ಪಾಟೀಲ್, ಬಿ.ರಸೂಲ್, ಪತ್ರಕರ್ತರಾದ ಜಿ.ಚಂದ್ರಶೇಖರಗೌಡ, ಎಚ್.ಎಂ.ಪಂಡಿತಾರಾಧ್ಯ, ಬಂಗಿ ಮಂಜುನಾಥ, ಕರಿ ವಿರೂಪಾಕ್ಷಿ, ಎಸ್.ಯಮನಪ್ಪ, ಗಾದಿಲಿಂಗ, ಅಮರನಾಥಶಾಸ್ತ್ರಿ, ಇಂದ್ರಜಿತ್‌ ಸಿಂಗ್, ಚನ್ನಕೇಶವ, ಬಸವರಾಜ್ ಸೇರಿದಂತೆ ಕಾಲೇಜು ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*