ರಾಹುಲ್ ಗಾಂಧಿ ಪರ ಶೇ.62 ಜನರ ಒಲವಿದೆ!

 


ಬ್ಯುರೊ:ಭಾರತೀಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಪರ ಅದೆಷ್ಟು ಬ್ಯಾಟಿಂಗ್ ಮಾಡುತ್ತವೆ ಮತ್ತು ಉಳಿದ ನಾಯಕರ ಪರ ಕಿಂಚಿತ್ತೂ ಪ್ರಚಾರ ಮಾಡಬಯಸುವುದಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.


www.pewresearch.org

 ಮಾಡಿದ ಸಮೀಕ್ಷೆ ಪ್ರಕಾರ ಮೋದಿ ಪರ ಶೇ.80ರಷ್ಟು ಜನ ಇದ್ದಾರೆ ಎಂದು ಹೇಳಿವೆ. ಆದರೆ, ಇದುವರೆಗೆ ಮಾಧ್ಯಮಗಳು ಪಪ್ಪು ಎಂದು ಹೇಳುತ್ತಿದ್ದ ರಾಹುಲ್ ಗಾಂಧಿ ಪರ ಶೇ.62ರಷ್ಟು ಜನ ಇದ್ದಾರೆ ಎಂಬುದನ್ನು ಮಾತ್ರ ಹೇಳಿಲ್ಲ!

ಹೌದು ಇದು ನಿಜ ಅಮೇರಿಕಾ ಮೂಲದ ಸಂಸ್ಥೆಯೊಂದು ಕೈಗೊಂಡ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಹುದೆ? ಎಂಬ ಪ್ರಶ್ನೆಗೆ ಶೇ.55ರಷ್ಟು ಜನ ಅತಿ ಅವಶ್ಯ ಎಂದಿದ್ದಾರೆ. ಶೇ.20ರಷ್ಟು ಜನ ಬೇಡವೇ ಬೇಡ ಎಂದಿದ್ದಾರೆ. ಶೇ.24 ಜನ ಪರವಾಗಿಲ್ಲ ಆದರೆ ಎಂದಿದ್ದಾರೆ.

ಇನ್ನು ರಾಹುಲ್ ಗಾಂಧಿ ಪರ ಶೇ.62ರಷ್ಟು ಮತ ಬಂದಿವೆ ಎಂದು ಇದೇ ಸಂಸ್ಥೆ ವರದಿ ಮಾಡಿದೆ. ಆದರೆ, ಬಹಳ ಮಾಧ್ಯಮಗಳು ಇದನ್ನು ಮರೆಮಾಚಿವೆ. ಸಂಶೋಧನಾ ಸಂಸ್ಥೆ ಮಾಡಿರುವ ಸಮೀಕ್ಷೆ ಪ್ರಕಾರ 100 ಜನರ ಪೈಕಿ 26 ಜನ ರಾಹುಲ್ ಗಾಂಧಿ ಪ್ರಧಾನಿ ಆಗಲೇಬೇಕು ಎಂದಿದ್ದಾರೆ. ಆದರೆ ತಪ್ಪಿಲ್ಲ ಎಂದು ಶೇ.36ರಷ್ಟು ಜನ ಒಪ್ಪಿದ್ದಾರೆ. ಶೇ.34ರಷ್ಟು ಜನ ಬೇಡವೇ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಲವು ಜನ ಇಬ್ಬರ ಪರ ಒಲವು ತೋರಿದ್ದಾರೆ ಪರಿಣಾಮ ಶೇಕಡಾವಾರು ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ.

ಮಲ್ಲಿಕಾರ್ಜುನ್ ಖರ್ಗೆ ಪರ ಶೆ.46ರಷ್ಟು ಜನ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಬಿರಂಜನ್ ಚೌದರಿ ಪರ ಶೇ.4ರಷ್ಟು ಒಲವು ವ್ಯಕ್ತ ಆಗಿದೆ.

ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ ಓದಿ, ನೋಡಿ!

https://www.pewresearch.org/global/2023/08/29/indians-views-of-modi-and-other-national-leaders/pg_2023-08-29_views-of-india_02-01/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ