ಹಡಪದ ಅಪ್ಪಣ್ಣ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹಾಬಳೇಶ ರಾಜಿನಾಮೆ : ಪತ್ರಿಕಾ ಹೇಳಿಕೆ
ಮಸ್ಕಿ, ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ ಸಂಘದ ಜಿಲ್ಲಾಧ್ಯಕ್ಷರಾಗಿರುವ ಮಹಾಬಳೇಶ ಬಳಗಾನೂರು ರವರು ನನ್ನ ವೈಯಕ್ತಿಕ ಕಾರಣಗಳಿಗಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ, ಈಗಾಗಲೆ ರಾಜಿನಾಮೆ ಪತ್ರವನ್ನು ರಾಜ್ಯ ಹಡಪದ ಅಪ್ಪಣ್ಣ ಸಂಘ ಬೆಂಗಳೂರಿನ ಕೇಂದ್ರ ಕಛೇರಿಯ ಪ್ರಧಾನಕಾರ್ಯದರ್ಶಿಗಳಿಗೆ,ಅಧ್ಯಕ್ಷರಿಗೆ ರವಾನಿಸಿದ್ದೇನೆ. |
ಇದುವರೆಗೂ ಸಮಾಜದ ಕಾರ್ಯಗಳಲ್ಲಿ ನನ್ನೊಂದಿಗೆ ಸಹಕರಿಸಿದ ರಾಯಚೂರು ಜಿಲ್ಲಾ ಸಮಸ್ತ ಹಡಪದ ಬಂಧುಗಳಿಗೆ ಹಾಗೂ ಈ ಗುರುತರ ಜವಾಬ್ದಾರಿಯನ್ನು ನನಗೆ ನೀಡಿದ್ದ ರಾಜ್ಯಸಮಿತಿಯ ಸರ್ವ ಪದಾಧಿಕಾರಿಗಳಿಗೂ ನನ್ನ ಕೃತಜ್ಞತೆಗಳನ್ನು ತಿಳಿಸುತ್ತೇನೆಂಬ ಹೇಳಿಕೆಯಿರುವ ಪತ್ರಿಕಾ ಪ್ರಕಟಣೆಯೊಂದನ್ನು ಅವರು ಹೊರಡಿಸಿದ್ದಾರೆ.
ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ ಸಂಘದ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿ ಮೊದಲನೆ ಅವಧಿ ಪೂರ್ಣಗೊಳಿಸಿ, ಸಮಾಜದ ಜನರ ಒತ್ತಾಯದ ಮೇರೆಗೆ ಎರಡನೇ ಬಾರಿಗೂ ಅಧ್ಯಕ್ಷ ನಾಗಲು ಒಪ್ಪಿಕೊಂಡೆ.
ತಾವು ನನ್ನ ಮೇಲೆ ನಂಬಿಕೆಯಿಟ್ಟು ಸಮಾಜಕ್ಕಾಗಿ ದುಡಿಯುವ ಜವಬ್ದಾರಿಯನ್ನು ನೀಡಿದ್ದೀರಿ ಅದಕ್ಕೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ನೀವು ನನಗೆ ನೀಡಿದ ಜವಬ್ದಾರಿಯನ್ನು ನನ್ನ ಶಕ್ತ್ಯಾನುಸಾರ ನಿಭಾಯಿಸಿದ್ದೇನೆಂದು ನಾನು ಭಾವಿಸುತ್ತೇನೆ .
ಆದರೆ ಈಗ ನನ್ನ ಅನಾರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ನನ್ನ ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ.
ಮುಂದೆ ನಡೆಯುವ ನಮ್ಮ ಸಮಾಜದ ಕಾರ್ಯಗಳಿಗೆ ಪ್ರತ್ಯಕ್ಷ ವಾಗಿ,ಪರೋಕ್ಷವಾಗಿಯೂ ಸಹಕಾರ ನೀಡುತ್ತೇನೆಂದು ಈ ಮೂಲಕ ಬರವಸೆಯನ್ನು ನೀಡುತ್ತಿದ್ದೇನೆ.
ಎಂದು ಅವರು ರಾಜಿನಾಮೆಪತ್ರದಲ್ಲಿ ಸುದೀರ್ಘವಾಗಿ ಬರೆದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ