ವಿಷಪೂರಿತ ಮೇವು ತಿಂದು 3 ಕುರಿ-ಮೇಕೆ ಸಾವು: ಚಿಕಿತ್ಸೆಯಿಂದ 13 ಕುರಿ ಚೇತರಿಕೆ

 

ಕಾನ ಹೊಸಹಳ್ಳಿ: ವಿಷಪೂರಿತ ಮೇವು ಸೇವಿಸಿ 3 ಕುರಿ-ಮೇಕೆ ದಾರುಣವಾಗಿ ಸತ್ತಿರುವ ಘಟನೆ ಕಾನಾ ಮಡುಗು ಗೊಲ್ಲರಹಟ್ಟಿಯ ನಾಗೇಂದ್ರಪ್ಪ ಎಂಬುವರಿಗೆ ಸೇರಿದ 20ಕ್ಕೂ ಹೆಚ್ಚು ಕುರಿ-ಮೇಕೆ ಹಿಂಡನ್ನು ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನ ಮೇಯಿಸಿಕೊಂಡು ಬರುವಾಗ ಕುರಿಗಳ ಹೊಟ್ಟೆ ಉಬ್ಬರದಿಂದ ಒದ್ದಾಡುತ್ತಿದ್ದಾಗ ತಕ್ಷಣ ಆಲೂರು ಪಶು ವೈದ್ಯರಿಗೆ ವಿಷಯ ತಿಳಿಸಲಾಗಿದೆ. ತಕ್ಷಣ ದಾವಿಸಿದ ಡಾ ವರ್ಷ ಎಂ.ಪಿ ಪರೀಕ್ಷಿಸಿ ಸೀರಿಯಸ್ ಇರುವ ಕುರಿಗಳಿಗೆ ಚಿಕಿತ್ಸೆ ನೀಡಲಾಯಿತು. ಅದರಲ್ಲಿ ಮೂರು ಕುರಿ-ಮೇಕೆಗಳ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದು ಉಳಿದ 13 ಕುರಿ-ಮೇಕೆಗಳು ನಿನ್ನೆ ಇಂದು ಕೊಟ್ಟ ಚಿಕಿತ್ಸೆಯಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ನಂತರ ಮಾತನಾಡಿ ವಿಷಪೂರಿತ ಸಸ್ಯಗಳ ಸೇವನೆಮಾಡಿ ಸತ್ತ ಕುರಿಗಳ ಪೋಸ್ಟ್‌ ಮಾರ್ಟಮ್‌ ಮಾಡಿದ್ದು, ಸಂಗ್ರಹಿಸಿದ ಕೆಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*