"ಅಂತರಾಷ್ಟ್ರೀಯ ನಾಯಿಗಳ ದಿನಾಚರಣೆ"


ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಸೈನ್ಸ್  ಪೋರಂ ವತಿಯಿಂದ ಶನಿವಾರ "ಅಂತರಾಷ್ಟ್ರೀಯ ನಾಯಿಗಳ" ದಿನಾಚರಣೆಯನ್ನು ಮಾನ್ಯ ಪ್ರಾಚಾರ್ಯರಾದ ಡಾ.ಎಂ.ರವಿಕುಮಾರ್ ನಾಯಿಗಳಿಗೆ ಸಿಹಿ ತಿನಿಸುವುದರ ಮೂಲಕ ಉದ್ಘಾಟಿಸಿದರು. 

ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಸಿದ್ದರಾಮ ಕಲ್ಮಠ ರವರು ನಾಯಿಗಳ ದಿನಾಚರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.

ನಾಯಿಯು ನಿಷ್ಠೆ ಮತ್ತು ಪ್ರಾಮಾಣಿಕತೆ ಹೆಸರುವಾಸಿ

ಇತ್ತೀಚಿನ ದಿನಗಳಲ್ಲಿ ಪ್ರಾಣಿ ಸಾಗಾಣಿಕೆ, ಪ್ರಾಣಿ ಸಾಕುವುದು, ವಂಶಾಭಿವೃದ್ಧಿ ಮಾಡುವುದು, ತಳಿ ಅಭಿವೃದ್ಧಿ ಮಾಡುವುದು ಇನ್ನಿತರ ಪ್ರಾಣಿ ಸಂಬಂಧಿತ  ವೃತ್ತಿಗಳು ಹೆಚ್ಚಾಗಿದ್ದು ಜನರು ತಮ್ಮ ಜೀವನೋಪಾಯವನ್ನು ನಡೆಸುತ್ತಿರುವುದರಿಂದ ಪ್ರಾಣಿಗಳ ಪಾತ್ರ ಬಹಳ ಪ್ರಮುಖವಾದದ್ದು. ಅಷ್ಟೇ ಅಲ್ಲದೆ ಬಾಹ್ಯಾಕಾಶದಲ್ಲಿ ಮೊಟ್ಟ ಮೊದಲನೇ ಬಾರಿ ಪ್ರವೇಶಿಸಿದ  ಪ್ರಾಣಿ ಎಂದರೆ ನಾಯಿ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ ವಾಗಿರುತ್ತದೆ.

ಚಂದ್ರಯಾನ ಮೂರರ

ಯಶಸ್ವಿ ವಿಜಯೋತ್ಸವವನ್ನು ಆಚರಿಸುತ್ತಿರುವ ನಾವು ಮೊಟ್ಟ ಮೊದಲನೇ ಬಾರಿಗೆ ಬಾಹ್ಯಾಕಾಶಕ್ಕೆ ಹೋಗಿರುವ ಪ್ರಾಣಿ ಎಂದರೆ ಅದು ನಾಯಿ ಅದರ ಹೆಸರು ಲೈಕಾ ಎಂಬುದನ್ನು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇನೆ ಎಂದು ಪ್ರಾಂಶುಪಾಲರು ಹೇಳಿದರು. ನಾಯಿಗಳ ಗ್ರಹಣ ಶಕ್ತಿಯನ್ನು ಉಪಯೋಗಿಸಿಕೊಂಡು ಪ್ರಮುಖ ಇಲಾಖೆಗಳಾದ ಪೋಲೀಸ್ ಇಲಾಖೆ , ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕ ಇಲಾಖೆಗಳು ಮತ್ತು ವಿಶೇಷ ಪ್ರಕರಣಗಳನ್ನು ಬೇಧಿಸುವ ಮೂಲಕ ನಾಯಿಗಳನ್ನು ಬಳಸಲಾಗುತ್ತದೆ.

ಶ್ವಾನಗಳು ಈ ಭೂಮಿಯ ಮೇಲಿನ ನಿಷ್ಠಾವಂತ ಪ್ರಾಣಿಗಳು. ಹಾಗಾಗಿ ಜನರು ತಮ್ಮ ಮನೆಗಳಲ್ಲಿ ನಾಯಿಯನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಹೆಚ್ಚಿನವರು ವಿಶೇಷವಾಗಿ ದುಬಾರಿ ಬೆಲೆಯ ನಾಯಿಗಳನ್ನು ಸಾಕುತ್ತಾರೆ. ಇದರೊಂದಿಗೆ ಸ್ಥಳೀಯ ಜಾತಿಯ ಶ್ವಾನಗಳನ್ನು ದತ್ತು ಪಡೆದು, ಅವುಗಳಿಗೆ ಒಂದು ಉತ್ತಮ ಜೀವನವನ್ನು ಕಲ್ಪಿಸಬೇಕು ಎಂದು ಜನರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. 


ಈ ದಿನದ ಆಚರಣೆಯ ಹಿಂದಿನ ಹಿನ್ನೆಲೆ ಏನೆಂಬುವುದನ್ನು ನೋಡೋಣ.

ಶ್ವಾನಗಳು ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವುಗಳು ಮನುಷ್ಯನ ಉತ್ತಮ ಸ್ನೇಹಿತ ಕೂಡ ಹೌದು. ಮನುಷ್ಯರಿಗಿಂತ ಹೆಚ್ಚಾಗಿ ಈ ಮೂಕ ಜೀವಿಗಳೇ ನಮ್ಮ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತವೆ. ಮಾತ್ರವಲ್ಲದೆ ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅವುಗಳು ನಿಮಗೆ ಜೀವನಪರ್ಯಂತ ಋಣಿಯಾಗಿರುತ್ತವೆ. ಜೊತೆಗೆ ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶ ಪ್ರೀತಿಯನ್ನು ನಿಮಗೆ ಧಾರೆಯೆರೆಯುತ್ತವೆ. ನಾಯಿಗಳ ನೀಯತ್ತು ಮತ್ತು ಅವುಗಳು ನಮ್ಮ ಮೇಲೆ ತೋರುವ ನಿಷ್ಕಲ್ಮಶ ಪ್ರೀತಿಯ ಕಾರಣಕ್ಕೆ ಹೆಚ್ಚಿನವರು ತಮ್ಮ ಮನೆಗಳಲ್ಲಿ  ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ. ಕೆಲವರು ಹವ್ಯಾಸಕ್ಕಾಗಿ ಮತ್ತು ಕೆಲವರು ತಮ್ಮ ಅಗತ್ಯಗಳಿಗೆ ಅಂದರೆ ಮನೆಗೆ ಕಾವಲುಗಾರನಾಗಿ ಅವುಗಳನ್ನು ಸಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಲೆಯ ವಿದೇಶಿ ತಳಿಯ ನಾಯಿಗಳನ್ನು ಸಾಕುವುದು ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಸ್ಥಳೀಯ ಜಾತಿಯ ನಾಯಿಗಳನ್ನು ಸಾಕಲು ಯಾರು ಇಷ್ಟಪಡುವುದಿಲ್ಲ. ಈ ಕಾರಣದಿಂದ ಅಂತಹ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಒಂದು ಉತ್ತಮ ನೆಲೆಯನ್ನು ಕಲ್ಪಿಸಬೇಕೆಂದು ಜನರಿಗೆ ಅರಿವು ಮೂಡಿಸಲು ಹಾಗೂ ನಾಯಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸಲು ಪ್ರತಿ ವರ್ಷ ಆಗಸ್ಟ್ 26 ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದಿನ ಇತಿಹಾಸ ಏನು ಎಂಬುದನ್ನು ನೋಡೋಣ.


2004 ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ( ಪೆಟ್ & ಫ್ಯಾಮಿಲಿ ಲೈಫ್ಸ್ಟೈಲ್ ಎಕ್ಸ್ಪರ್ಟ್, ಅನಿಮಲ್ ಅಡ್ವೊಕೇಟ್, ಕನ್ಸರ್ವೆಶನಿಸ್ಟ್, ಡಾಗ್ ಟ್ರೈನರ್) ಮತ್ತು ಲೇಖಕಿ ಕೋಲಿನ್ ಪೈಜ್ ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಸ್ಥಾಪಿಸಿದರು. ಕೋಲಿನ್ ಪೈಜ್ ಅವರು ಶ್ವಾನ ದಿನದ ಆಚರಣೆಗೆ ನಿರ್ಧಿಷ್ಟವಾಗಿ ಆಗಸ್ಟ್ 26 ನೇ ದಿನಾಂಕವನ್ನು ಏಕೆ ಆಯ್ಕೆ ಮಾಡಿದರು ಎಂದರೆ, ಪೈಜ್ ಅವರು ಹತ್ತು ವರ್ಷ ಪ್ರಾಯದವರಾಗಿದ್ದಾಗ, ಆಕೆಯ ಮನೆಯವರು ಆಗಸ್ಟ್ 26 ನೇ ತಾರೀಕಿನಂದು ಶೆಲ್ಟಿ ಎಂಬ ಹೆಸರಿನ ನಾಯಿಯನ್ನು ದತ್ತು ತೆಗೆದುಕೊಂಡು ಸಾಕಿದರು. ಹಾಗಾಗಿ ಇದೇ ದಿನದಂದು ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿದರು. ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಸಾರಲು ಮತ್ತು ಪ್ರಾಣಿಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಲು ಪೈಜ್ ಅವರು ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ಬೆಕ್ಕು ದಿನ, ವನ್ಯಜೀವಿ ದಿನದ ಆಚರಣೆಯನ್ನು ಕೂಡಾ ಸ್ಥಾಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೊಟ್ಟೂರಿನ ನಾಯಿಗಳ ಮಾಲೀಕರಾದ ಗಿರಿ (ಲ್ಯಾಬ್ರೊಡಾರ್ ತಳಿ)   ರಾಹುಲ್ ಮತ್ತು ಪೃಥ್ವಿ ( ರಾಟ್ ವೀಲರ್  ತಳಿ)  ಮತ್ತು ಪ್ರಮೋದ್ (ಪೊಮೇರಿಯನ್) ಜಾತಿಯ ನಾಯಿಗಳನ್ನ ಕಾರ್ಯಕ್ರಮದಲ್ಲಿ ತರುವ ಮುಖಾಂತರ ಕಾರ್ಯಕ್ರಮಕ್ಕೆ ಹೆಚ್ಚಿನ  ಮೆರಗನ್ನು ತಂದುಕೊಟ್ಟರು.

ಈ ಕಾರ್ಯಕ್ರಮದಲ್ಲಿ ಗಣಕಯಂತ್ರದ ಮುಖ್ಯಸ್ಥರಾದ ಸಿ. ಬಸವರಾಜ್ ಮತ್ತು ಉಪನ್ಯಾಸಕರುಗಳಾದ ಕೊಟ್ರೇಶ್ ಕೂಡ್ಲಿಗಿ. ಬಿ.ಎಸ್ ಪಾಟೀಲ್, ವಿಜಯಲಕ್ಷ್ಮಿ ,ನಾಗವೇಣಿ ಸದಾನಂದ, ಅನಿತಾ‌, ಚೇತನ್ ಎಸ್ .ಹಾದಿಮನಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಕುಮಾರ್ ಮತ್ತು  ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅರವಿಂದ್ ಬಸಾಪುರ ನಿರೂಪಿಸಿ, ಪೃಥ್ವಿರಾಜ್ ಸಿ. ಬೆಡ್ಜರ್ಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಸಂಗೀತ ಉತ್ತಂಗಿ ವಂದನಾರ್ಪಣೆ  ನೆರವೇರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ