ಬದಲಾದ ಶೈಕ್ಷಣಿಕ ವ್ಯವಸ್ಥೆಗೆ ಗುಣಾತ್ಮಕ ಶಿಕ್ಷಣ ಸ್ಪರ್ಧ ಸೇವೆ ನಿಮ್ಮದಾಗಲಿ-- ಶ್ರೀಶೈಲ ಎಂ ಬಿರಾದರ್.

 


 ವರದಿ - ಮಂಜುನಾಥ್ ಕೋಳೂರು ಕೊಪ್ಪಳ. 

 ಕೊಪ್ಪಳ ಆಗಸ್ಟ್ 26 : - ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಕೊಪ್ಪಳ ಸಹಯೋಗದಲ್ಲಿ ನಗರದ ನೌಕರರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಸುಧಾರಣೆ ಕಾರ್ಯಗಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಎಂ ಬಿರಾದಾರ್ ರವರು ಮಾತನಾಡುತ್ತಾ ಕೊಪ್ಪಳ ಜಿಲ್ಲೆಯನ್ನು ಫಲಿತಾಂಶ ಪಟ್ಟಿಯಲ್ಲಿ ಈ ಬಾರಿ 15ರಿಂದ ಮೇಲಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಜಿಲ್ಲೆಯ ಶಿಕ್ಷಕರ ಕೈಯಲ್ಲಿದೆ ಬದಲಾದ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಂಡು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸ್ಪರ್ಧಾ ಸೇವೆ ಮನೋಭಾವ ನಿಮ್ಮದಾಗಲಿ ಎಂದು ಹೇಳಿದರು . ಡಯಟ್ ಪ್ರಾಚಾರ್ಯ ಬಾಳಪ್ಪ ಬಡಿಗೇರ್ ರವರು ಗುರುವಿನ ಮಹತ್ವ ಮತ್ತು ತಿರುಗನ್ನಡ ಕವಿರಾಜಮಾರ್ಗ ಉಲ್ಲೇಖಿಸಿ ಮಾತನಾಡಿ ನೀವೆಲ್ಲರೂ ಧ್ಯಾನ ಮತ್ತು ಅನ್ನದಾಸೋಹದ ಗಮಾತಿನವರು ನಿಮ್ಮ ಪ್ರಾಮಾಣಿಕ, ತ್ಯಾಗ , ತೃಪ್ತಿಯ ಮೂಲವಾಗಲಿ ಎಂದು ಆಶಯ ನುಡಿಗಳನ್ನು ಹೇಳಿದರು. ವೇದಿಕೆಯಲ್ಲಿ ಇನ್ನರ್ವ ನಿಕಟಪೂರ್ವ ಉಪನಿರ್ದೇಶಕರು ಹಾಗೂ ಗದುಗಿನ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಉಪನ್ಯಾಸ ನೀಡುತ್ತಾ ಶಿಕ್ಷಕರು ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಸಂಸ್ಕರಣೆ ಮಾಡಬೇಕಾದ ಅಂಶಗಳನ್ನು ನೀಡಿ, ಪೂರಕ ಉದಾಹರಣೆಗಳನ್ನು ನೀಡಿ ಮಕ್ಕಳೊಂದಿಗೆ ಮಕ್ಕಳ ಮನಸ್ಸನ್ನು ಅರಿತು ವಿಷಯಜ್ಞಾನ ಉಣಬಡಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಸ್ವಾಗತವನ್ನು ಈರಣ್ಣ ಹೆಬ್ಬಾಳ ಜಿಲ್ಲಾ ಕೋಶಾಧ್ಯಕ್ಷರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೈಲಾರ ಗೌಡ ಹೊಸಮನಿ ಕಾರ್ಯದರ್ಶಿ ತಾಲೂಕು ಘಟಕ ಕೊಪ್ಪಳ ರವರು ನೆರವೇರಿಸಿದರು . ಕೊನೆಯಲ್ಲಿ ಕೋಟೆಪ್ಪ ಮೇಟಿ ಶಿಕ್ಷಕರು ವಂದನಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಾಗರಾಜ್ ಜುಮನವರ್ ರಾಜ್ಯ ಉಪಾಧ್ಯಕ್ಷರು ಎನ್‌ಜಿಓ , ಸೋಮಶೇಖರ್ ಹರ್ತಿ ಜಿಲ್ಲಾ ಅಧ್ಯಕ್ಷರು ಕರಾ ಪ್ರೌಶಾಶಿಸಂ ಕೊಪ್ಪಳ , ಶ್ರೀಶೈಲ್ ಬಿರಾದರ್ ಉಪ ನಿರ್ದೇಶಕರು ಕೊಪ್ಪಳ , ಎಂ ಎ ರೆಡ್ಡೇರ ಉಪ ನಿರ್ದೇಶಕರು ಗದಗ , ಜಾಕಿರ್ ಹುಸೇನ್ ರಾಜ್ಯ ಉಪಾಧ್ಯಕ್ಷರು, ಕೆ.ಡಿ ಬಡಿಗೇರ್ ಡಯಟ್ ಕೊಪ್ಪಳ, ಶಂಕರ ಗೌಡ ಮಾಲಿಪಾಟೀಲ್ ಪ್ರಕಾ ಏನ್‌ಜಿಒ ಕೊಪ್ಪಳ, ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಶರಣಪ್ಪ ಸುಂಕದ್ , ಮಾರ್ತಾಂಡ ರಾವ್ ದೇಸಾಯಿ, ಗವಿಸಿದ್ದಯ್ಯ ಬೆನಕಲ್ ಮಠ,‌ ವೆಂಕಟೇಶ್ ಗೌಡರ್, ಎಸ್ ಬಿ ಕುರಿ, ವಿಠಲ ಎಂ , ಅರುಂಧತಿಹಿರೆಮಠ್, ತಾಲೂಕು ಅಧ್ಯಕ್ಷರುಗಳಾದ ಶಿವನಂದಯ್ಯ ಕುಣಿಕೇರಿ ಮಠ ಕೊಪ್ಪಳ, ಮಂಜುನಾಥ ದರೋಜಿ ಗಂಗಾವತಿ, ಅನಿಲ್ ಕುಮಾರ್ ಕನಕಗಿರಿ, ಮಂಜುನಾಥ್ ವಾಲ್ಮೀಕಿ ಕಾರಟಗಿ , ಬಸವರಾಜ್ ಮೋಚಿ ಕುಕುನೂರ್, ಅಶೋಕ್ ಮಾಲಿಪಾಟೀಲ್ ಯಲಬುರ್ಗಾ , ನೀಲನ್ ಗೌಡ ಹೊಸ ಗೌಡ ಕುಷ್ಟಗಿ, ನೌಕರರ ಸಂಘದ ವ್ಯವಸ್ಥಾಪಕ ಯಶವಂತ್ ಕುಮಾರ್ ಜಿ ಮೇತ್ರಿ ಹಾಗೂ ಕೊಪ್ಪಳ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ