ಬಹು ಭಾರತೀಯರಿಗೆ ವೇದಗಳ ಕುರಿತು ಯಾಕೆ ತಿಳಿದಿಲ್ಲ!?
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
ಹೀಗೆ ವೇದಗಳ ಕುರಿತು ತುಂಬಾ ಪಂಡಿತರು ಮಾತನಾಡುತ್ತಾರೆ. ಅದರಲ್ಲೂ ಬ್ರಾಹ್ಮಣರು, ಕಟ್ಟರ್ ಹಿಂದುವಾದಿಗಳು ಇದರ ವಿಷಯದಲ್ಲಿ ಪುಂಖಾನುಪುಂಖ ಭಾಷಣ ಬಿಗಿಯುತ್ತಾರೆ. ಹಾಗಿದ್ದರೆ ಯಾಕೆ ಭಾರತೀಯರಿಗೆ ವೇದದ ಕುರಿತು ಅರಿವಿಲ್ಲಎಂಬ ಪ್ರಶ್ನೆ ಸಹಜ ಅಲ್ಲವೇ?
ಇದಕ್ಕೆ ಉತ್ತರವನ್ನು ಅಂಬೇಡ್ಕರ್ ಹೇಳುತ್ತಾರೆ. ಅಂಬೇಡ್ಕರ್ ಹೇಳುವ ಹಾಗೆ ಹಿಂದೂ ಧಾರ್ಮ ಶಾಸ್ತ್ರಗಳು, ಮನು ಸ್ಮೃತಿ ಮತ್ತು ಗೌತಮ ಮುನಿಗಳ ಬರಹದ ಅನ್ವಯ ವೇಗಳಗ ಅಧ್ಯಯನ ಮತ್ತು ಭೋಧನೆಯನ್ನು ಹಿಂದೆ ಬರೀ ಬ್ರಾಹ್ಮಣರೇ ಮಾಡಬೇಕಿತ್ತು. ಕಲಿಕೆಯನ್ನು ಕ್ಷತ್ರಿಯ ಮತ್ತು ವೈಶ್ಯ ಮಾತ್ರ ಮಾಡಬೇಕಿತ್ತು. ಶೂದ್ರ ಮಾಡುವ ಹಾಗೆ ಇರಲಿಲ್ಲ. ಶೂದ್ರರಿಗೆ ಶಿಕ್ಷಣ ಕೊಡುವ ಹಾಗೆ ಇರಲಿಲ್ಲ. ಇದೇ ಕಾರಣಕ್ಕೆ ವೇದಗಳ ಅಧ್ಯಯನ ಬಹು ಭಾರತೀಯರಿಗೆ ಗೊತ್ತಿಲ್ಲ.
ಒಂದು ವೇಳೆ ಶೂದ್ರ ಕದ್ದು ಮುಚ್ಚಿ ವೇದ ಅಧ್ಯಯನ ಮಾಡಿದ್ದರೆ ಏನಾಗುತ್ತಿತ್ತು? ಹ್ಞಾಂ ಖಂಡಿತಾ ಅದು ದೊಡ್ಡ ಸಾಹಸ, ಮರಣ ಕಂಟಕವಾಗಿತ್ತು.
ಅಂ ಬೇಡ್ಕರ್ ಅವರ ಬರೆಹ ಮತ್ತು ಭಾಷಣದ ಸಂಪುಟಗಳಲ್ಲಿ ಪ್ರಸ್ತಾಪ ಮಾಡಿದ ಹಾಗೆ ಒಂದು ವೇಳೆ ಶೂದ್ರ ಏನಾದರೂ ವೇದ ಅಳಿಸಿದ್ದೇ ಆದರೆ ಆತನ ಕಿವಿಯಲ್ಲಿ ಕಾದ ಸೀಸ ಮತ್ತು ಅರಗನ್ನು ಹಾಕಬೇಕು. ಒಂದು ವೇಳೆ ಶೂದ್ರನೇನಾದರೂ ವೇದವನ್ನು ಉಚ್ಛರಿಸಿದರೆ ಆತನ ನಾಲಿಗೆ ಕತ್ತರಿಸಿ ಹಾಕಬೇಕು. ವೇದದಲ್ಲಿ ಪರಿಣಿತಿ ಸಂಪಾದಿಸಿದರೆ ದೇಹವನ್ನೇ ತುಂಡು ತುಂಡಾಗಿ ಕತ್ತರಿಸಿ ಹಾಕಬೇಕು ಎಂದು ಗೌತಮ ಮುನಿ ಕಟ್ಟಪ್ಪಣೆ ವಿಧಿಸಿದ್ದರು ಎಂಬುದನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದನ್ನು ಅಂಬೇಡ್ಕರ್ ಬರಹ ಮತ್ತು ಭಾಷಣದ ಮೂರನೆಯ ಸಂಪುಟದ ಪಿಡಿಎಫ್ ಆವೃತ್ತಿಯ 69ನೆಯ ಪುಟದಲ್ಲಿ ನೀವು ಇದನ್ನು ಕಾಣಬಹುದು.
ಅಂಬೇಡ್ಕರ್ ಇದನ್ನು ಕಟುವಾಗಿ ಟೀಕಿಸುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯ ಜ್ಞಾನ ಸಂಪಾದನೆ ಮಾಡುವುದು ಅಪರಾಧ ಎಂದು ಶಿಕ್ಷಿಸಿದ್ದು ಇಡೀ ಜಗತ್ತಿನಲ್ಲಿ ಯಾವುದೇ ಸಮಾಜ ಮಾಡಿಲಾರದು ಎಂದು ಅಂಬೇಡ್ಕರ್ ಜರಿಯುತ್ತಾರೆ.
ಸುಮಾರು ತಲೆಮಾರುಗಳ ಕಾಲ ಅಂದರೆ ಬ್ರಿಟಿಷ್ ಆಗಮನದ ತನಕವೂ ಶೂದ್ರರು ಶಿಕ್ಷಣ ವಂಚಿತರಾಗಿದ್ದರು. ನಾವು ಇದನ್ನು ನಂಬಬೇಕಾದರೆ ಯಾವುದೋ ಸಾಕ್ಷö್ಯ ಹುಡುಕಿಕೊಂಡು ಹೋಗಬೇಕಿಲ್ಲ. ಕೇವಲ ನಮ್ಮ ತಂದೆ, ತಾಯಿ, ಅವರ ತಂದೆ ತಾಯಿಗಳ ವಿದ್ಯಾಭ್ಯಾಸದ ಮಟ್ಟ ನೋಡಿದರೆ ತಿಳಿಯುತ್ತದೆ. ನಮ್ಮದೇ ತಲೆಮಾರಿನ ಮೂರು ಅಥವಾ ನಾಲ್ಕನೆಯ ಹಂತದ ನಮ್ಮ ಜನಕ್ಕೆ ಖಂಡಿತಾ ಅಕ್ಷರ ಜ್ಞಾನವೇ ಇರಲಿಲ್ಲ ಎಂಬುದನ್ನು ಅರಿತರೆ ಸಾಕು. ಸ್ನೇಹಿತರೆ, ಇದೇ ಕಾರಣಕ್ಕೆ ಅಂಬೇಡ್ಕರ್ ಅವರು ಮೂರು ಘೋಷಣೆ ಕೊಟ್ಟಿದ್ದು ಶಿಕ್ಷಣ, ಸಂಘಟನೆ, ಹೋರಾಟ ಎಂದು.
ಪ್ರತೀ ಸಮಾಜ ಸಾಕ್ಷರತೆ ಪಡೆಯಬೇಕು. ಸಂಘಟಿತ ಆಗಬೇಕು. ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬುದು ಅವರು ವಿಚಾರ ಧಾರೆ ಆಗಿತ್ತು.
ನೀವು ಓದಬಾಯಿಸಿದ್ರೆ ಕೆಳಗೆ ಇರುವ ಲಿಂಕ್ ಮೇಲೆ ಒಮ್ಮೆ ಕ್ಲಿಕ್ ಮಾಡಿ;
https://kanaja.karnataka.gov.in/ebook/wp-content/uploads/2020/PDF/10.pdf
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ