ಸರ್ಕಾರದ ಆದೇಶ ಉಲ್ಲಂಘನೆ --- ಮಲ್ಲಿಕಾರ್ಜುನ್ ಪೂಜಾರ. ಕರ್ತವ್ಯ ನಿರ್ಲಕ್ಷತೆ : ಮುಖ್ಯ ಶಿಕ್ಷಕ ಅಮಾನತ್ತು
ಕೊಪ್ಪಳ ಆಗಸ್ಟ್ 20 : - ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಪಾಟೀಲ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಶಾಲಾ ಶಿಕ್ಷಣ ಇಲಾಖೆ ಶನಿವಾರ ದಂದು ಆದೇಶ ಹೊರಡಿಸಿದೆ . ಸ್ಪಷ್ಟವಾಗಿ ಹೈಕೋರ್ಟಿನ ಹಾಗೂ ರಾಜ್ಯಸರ್ಕಾರದ ಆದೇಶ , ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ಉಲ್ಲಂಘಿ ಅಗಸ್ಟ್ 15 ರಂದು 77ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಕೋಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ , ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷತೆ ವಹಿಸಿ ಅವರು ಧ್ವಜಾರೋಹಣ ಮಾಡಿದ್ದರು .
ಈ ಕುರಿತು ದಲಿತ ವಿಮೋಚನ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ್ ಪೂಜಾರ ಹಾಗೂ ಕೆಲವು ಸಂಘಟನೆಗಳು ಅಕ್ಷೆಪ ವ್ಯಕ್ತಪಡಿಸಿದ್ದವು. ಜಗದೀಶ್ ಪಾಟೀಲ್ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮಗಳು 1966 ಹಾಗೂ2021 ನಿಯಮ 3ರ(1),(2)&(5) ನಿಯಮಗಳನ್ನು , ಉಲ್ಲಂಘಿಸಿ ಕರ್ತವ್ಯ ನಿರ್ಲಕ್ಷತನ ತೋರಿರುವದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ & ಮೇಲ್ಮನವಿ) 1957ರ 10(1) ನಿಯಮ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಆದೇಶಿಸಿ
ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ . ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ . ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಹಾಗೂ ಸದರಿ ಆದೇಶವನ್ನು ಅವರ ಮೂಲ ಸೇವಾ ಪುಸ್ತಕದಲ್ಲಿ ನಮೂದಿಸಿ ಅದರ ದೃಢೀಕೃತ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ( ಆಡಳಿತ) ಶ್ರೀಶೈಲ್ ಎಸ್. ಬಿರಾದರ್ ಆದೇಶದಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ