ಪ್ರತಿಭೆಗಳನ್ನು ಅನಾವರಣಗೊಳಿಸಿ,ಪ್ರೊತ್ಸಾಹಿಸಿ : ಬಸಪ್ಪ ತನಿಖೆದಾರ
ಮಸ್ಕಿ, ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಜಂಗಮರಹಳ್ಳಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಹಾಲಾಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜಮ್ಮ ಗಂಡ ಮೌನೇಶ ಉದ್ಘಾಟಿಸಿದರು. ನಂತರ ಮಾತಮಾಡಿದ ಮಸ್ಕಿಯ ಪ್ರಭಾರಿ ಕ್ಷೇತ್ರ ಶಿಕ್ಷಣಾದಿಕಾರಿ ಬಸಪ್ಪ ತನಿಖೆದಾರ ಮಕ್ಕಳ ಪ್ರತಿಭೆ,ಕೌಶಲ್ಯಗಳನ್ನು ಗುರುತಿಸಲು ಸರಕಾರ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ, ಮತ್ತಿತರ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಸಿದ್ದಿ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಂಡಗುಂಡಪ್ಪ ತಾತ,ಚಂದ್ರಮೌನೇಶ ತಾತ,ದೊಡ್ಡ ಮಲ್ಲಯ್ಯ ತಾತ, ವೀರಭದ್ರಪ್ಪ ತಾತ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬಸಮ್ಮ ಗಂಡ ಬಸವರಾಜ,ನಾಗಪ್ಪ ಬಿ ಆರ್ ಸಿ, ಸುರೇಶ ಬಿ ಆರ್ ಸಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ತಿರುಪತಿ ರಾಮತ್ನಾಳ, ಉಪಾಧ್ಯಕ್ಷೆ ರೇಣುಕಾ ಗಂಡ ಬಸವರಾಜ, ಎರಿತಾತ ಪಾಟೀಲ್, ಬಸವರಾಜಗೌಡ ಮಾ.ಪಾ , ಲಿಂಗರಾಜ ಪಾಟೀಲ್, ಜಗದೀಶ್ ಚಂದ್ರಸ್ವಾಮಿ, ಮಹಾಂತೇಶ ಅಂಗಡಿ,ಪ್ರದೀಪ್ ಪಾಟೀಲ್, ಹುಚ್ಚರಡ್ಡಿ ನಾಯಕ,ಹನುಮಂತಪ್ಪ ಚಲವಾದಿ,ರಾಮಣ್ಣ ನಾಯಕ, ಸಿ ಆರ್ ಪಿ ಪ್ರಶಾಂತಗೌಡ, ಶಿಕ್ಷಕರಾದ ಅರವಿಂದ್ ಪಾಟೀಲ್, ಸುಭಾಷ್ ಸಿಂಗ್, ಶಂಕರಗೌಡ, ಬಾಲಸ್ವಾಮಿ, ಮಂಜುನಾಥ,ವೆಂಕೊಬ ದೇವಪೂರ,ಹನುಮಂತರಾಯ ದೇಸಾಯಿ,ಚನ್ನವೀರ ಜೊತನ್, ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ಯಂಕೊಬ, ವಿದ್ಯಾರ್ಥಿಗಳು ಇದ್ದರು.ನಂತರ ವಿವಿಧ ಶಾಲಾಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮೋಹಕವಾಗಿ ನಡೆದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ