*ಕಟ್ಟಡ ಕಾರ್ಮಿಕರ ಮಂಡಳಿಯ ಹಣ ದುರುಪಯೋಗ ವಾಗದಂತೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಹೊತ್ತಾಯಿಸಿ ಪ್ರತಿಭಟನೆ*
ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ರಿ) ವತಿಯಿಂದ ನೂರಾರು ಹೋರಾಟಗಾರರು ಶ್ರೀ ಕೊತ್ತಲ ಆಂಜನೇಯನ ದೇವಸ್ಥಾನದಿಂದ ಪ್ರತಿಭಟನೆ ರ್ಯಾಲಿಯ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಮಾನ್ಯ ತಾಲೂಕು ದಂಡಾಧಿಕಾರಿ ಗಳ ಮುಖೇನ ಶ್ರೀ ಸಂತೋಷ್ ಲಾಡ್ ಮಾನ್ಯ ಕಾರ್ಮಿಕ ಸಚಿವರು ಕರ್ನಾಟಕ ಸರ್ಕಾರ ಇವರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆಗಳ ಕುರಿತು ಮನವಿ ಪತ್ರವನ್ನು ಸಲ್ಲಿಸಿದರು. ಕಾರ್ಮಿಕ ಸಂಘಟನೆಯ ಮುಖ್ಯ ಉದ್ದೇಶ ಇಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಘೋಷಣೆ ಮಾಡುತ್ತಾ ನೂರಾರು ಕೋಟಿ ಕಲ್ಯಾಣ ಮಂಡಳಿ ನಿಧಿಯನ್ನು ದುರುಪಯೋಗ ಮಾಡಿದ್ದಾರೆ,ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಅವರು ದುರುಪಯೋಗದ ಬಗ್ಗೆ ನಮ್ಮ ಸಿಐಟಿಯು ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಹಲವು ಬಾರಿ ಚಳುವಳಿಯ ಹೋರಾಟಗಳು ಮಾಡಿ ಸರ್ಕಾರವನ್ನು ಕಣ್ಣು ತೆರೆಸುವ ಹೋರಾಟಗಳು ಮಾಡಿದರು ಎಚ್ಚೆತ್ತುಕೊಳ್ಳದೆ ಕಾರ್ಮಿಕರ ನೂರಾರು ಸಮಸ್ಯೆಗಳ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕಾರ್ಮಿಕರ ಗೋಳು ಬಿಜೆಪಿ ಸರ್ಕಾರ ಕೇಳಿಸಿಕೊಳ್ಳದೆ ಕಾರ್ಮಿಕರ ಸಮಸ್ಯೆಗಳ ಬೇಡಿಕೆಗಳ ಗಂಟು ಬಿಚ್ಚದೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೊರಿಯಾಗುವ ರೀತಿಯಲ್ಲಿ ಬಿಜೆಪಿ ಸಚಿವರು ನೂರಾರು ಕೋಟಿ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿಯಾದರೂ ಮಾನ್ಯ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯಕ್ಕೆ ಐದು ಒಳ್ಳೆಯ ಜನಪರ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಹೆಣ್ಣು ಮಕ್ಕಳಿಗೂ ಮಧ್ಯಮ ವರ್ಗದ ಕುಟುಂಬದವರಿಗೂ ಜನರಿಗೆ ತುಂಬಾ ಉಪಯುಕ್ತವಾದಂತ ಯೋಜನೆಗಳನ್ನು ಜಾರಿ ಮಾಡಿರುತ್ತೀರಿ ಆದರೆ ನಮ್ಮ ಕಟ್ಟಡ ಕಾರ್ಮಿಕರ ಹಲವು ಬೇಡಿಕೆಗಳನ್ನು ಈ ಮನವಿ ಪತ್ರದಲ್ಲಿ ಸಲ್ಲಿಸಿರುತ್ತೇವೆ,ಮಾನ್ಯ ಸಿದ್ದರಾಮಯ್ಯನವರೇ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರೆ ನಮ್ಮ ಬೇಡಿಕೆಯ ಮನವಿ ಪತ್ರವನ್ನು ಒಮ್ಮೆ ನೋಡಿ, ರಾಜ್ಯದ ಎಲ್ಲಾ ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಮುಂದಿನ ದಿನಮಾನದಲ್ಲಿ ನಿಮ್ಮ ಸರ್ಕಾರವು ಜಾರಿಗೊಳಿಸುತ್ತೀರಿ ಅನ್ನುವ ಮಹದಾದಾ ನಂಬಿಕೆ ನಮಗಿದೆ. ನಿಮ್ಮ ಸರ್ಕಾರವು ಕಾರ್ಮಿಕರ ಬೇಡಿಕೆಗಳನ್ನು ಮನಘಂಡು ಕಟ್ಟಡ ಕಾರ್ಮಿಕರ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಕೂಡ್ಲಿಯಲ್ಲಿ ಗುರುವಾರ ದಂದು ಹತ್ತಾರು ಹೋರಾಟಗಾರರು ಮಹಿಳಾ ಹೋರಾಟಗಾರರ ಸಮ್ಮುಖದಲ್ಲಿ ಆಡಳಿತ ಸೌದದ ಮುಂದೆ ಸೇರಿದ ಹೋರಾಟಗಾರರ ಮನವಿ ಪತ್ರವನ್ನು ತಹಶೀಲ್ದಾರ ನೇತೃತ್ವ ವನ್ನು ವಹಿಸಿಕೊಂಡು ಕುಮಾರಸ್ವಾಮಿ ಇವರು ಮನವಿ ಪತ್ರವನ್ನು ಸ್ವೀಕರಿಸಿದರು ಕಾರ್ಮಿಕರ ಬೇಡಿಕೆಗಳು:1. ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ ಆಗಬೇಕು 2. ಆರೋಗ್ಯ ಸಂಜೀವಿನಿ ಜಾರಿಗೆ ಆಗ್ರಹ 3. ಹೊಸ ತಂತ್ರಾಂಶ ಕುರಿತು ತರಬೇತಿ 4. ಅರ್ಜಿಗಳ ವಿಲೇವಾರಿ ವಿಳಂಬ ಕುರಿತು 5. ಕಲ್ಯಾಣ ಮಂಡಳಿಯಿಂದ ಶಿಶುವಿಹಾರ ಗಳ ಆರಂಭ ಬೇಡ 6. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಿ 7. ಸ್ಲಂ ಬೋರ್ಡಿಗೆ ನೀಡಿದ ಹಣ ಮಂಡಳಿಗೆ ಮರುಪಾವತಿ ಆಗಬೇಕು 8. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕರ ಪ್ರಾತಿನಿಧ್ಯ ಸಿಗಬೇಕು 9. ಕಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು 10. ಎಲ್ಲಾ ಖರೀದಿಗಳನ್ನು ನಿಲ್ಲಿಸಬೇಕು ನೇರಹಣ ವರ್ಗಾವಣೆ ಮಾಡಿ 11. ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ತೊಂದರೆಗಳ ಕುರಿತು ಹೀಗೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಗುರುವಾರ ರಂದು ಕೇಂದ್ರ ಸಂಘಟನೆಯ ಆದೇಶದ ಮೇರೆಗೆ ಕಟ್ಟಡ ಮತ್ತು ಕಾರ್ಮಿಕ ಸಂಘಟನೆಗಳಿಂದ ದೇಶಾಧ್ಯಾoಥ ಏಕಕಾಲದಲ್ಲಿ ಹೋರಾಟ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಕರಿಯಣ್ಣ, ಜಿಲ್ಲಾ ಕಾರ್ಯದರ್ಶಿಯಾದ ಗುನ್ನಳ್ಳಿ ರಾಘವೇಂದ್ರ, ಮುಗಪ್ಪ, ಬಾಲಚಂದ್ರ, ಕಡಲೆ ಕೊಟ್ರೇಶಿ, ಲೋಕೇಶ್, ಮಂಜುನಾಥ್, ಷಣ್ಮುಖ, ಬಸವರಾಜ,ಓವಕ್ಕ, ಬಸಕ್ಕ,ಶರಣಮ್ಮ, ಚೌಡಮ್ಮ,ರತ್ನಮ್ಮ, ಶಾಂತಮ್ಮ, ಕವಿತಮ್ಮ, ಸಿದ್ದಪ್ಪ,ಚೆನ್ನಪ್ಪ,ಚೌಡಪ್ಪ, ಇನ್ನು ಅನೇಕ ಹೋರಾಟಗಾರರು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ