*🪔ನಿಧನ ವಾರ್ತೆ:ಸಿ.ಕರಿಯಪ್ಪ_ನಿವೃತ್ತ ಎಎಸ್ಐ, ಎಂಬಿ ಅಯ್ಯನಹಳ್ಳಿ🪔*-
ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ MBಅಯ್ಯನಹಳ್ಳಿವಾಸಿಗಳು ಚಲುವಾದಿ ಸಮಾಜದ ಹಿರಿಯರು,ನಿವೃತ್ತASI ಆದ ಸಿ.ಕರಿಯಪ್ಪ(73)ರವರು. ಆ25ರಂದು ಬೆಳಿಗ್ಗೆ, ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ, ಹಾಸಿಗೆ ವಿಶ್ರಾಂತಿಯಲ್ಲಿದ್ದರು. ಅವರು ಪತ್ನಿ ಹಾಗೂ ಎಂಟು ಜನ ಮಕ್ಕಳು ಮೊಮ್ಮಕ್ಕಳು, ಹಾಗೂ ಅಪಾರ ಬಂಧು- ಬಳಗವನ್ನು ಬಿಟ್ಟಗಲಿದ್ದಾರೆ. ಅವರು 1976ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ನೇಮಕಗೊಂಡು, ವಿವಿದ ಪದೋನ್ನತಿಗಳನ್ನು ಹೊಂದಿ 2006ರವರೆಗೆ ತಮ್ಮ ಕರ್ಥವ್ಯ ನಿರ್ವಹಿಸಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ಹಾಗೂ ಕೆಲ ಸಮಯದಲ್ಲಿ ನೆರೆ ಜಿಲ್ಲೆಗಳಲ್ಲಿ, ಪೊಲೀಸ್ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕರ್ಥವ್ಯ ನಿರ್ವಹಿಸಿದ್ದಾರೆ. ಬಳ್ಳಾರಿ ನಗರ ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಅಚ್ಚೋಳಿ, ಹರಪನಹಳ್ಳಿ, ಹರಸಿಕೇರಿ, ತೋರಣಗಲ್ಲು, ಸಂಡೂರು, ಹೊಸಪೇಟೆ, ಸೇರಿದಂತೆ ಹಲವೆಡೆಗಳಲ್ಲಿೢನ ಪೊಲೀಸ್ ಠಾಣೆಗಳಲ್ಲಿ. ನಿಯೋಜಿತ ವಿವಿದ ಹುದ್ದೆಗಳಲ್ಲಿ, ಕರ್ಥವ್ಯ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ಥವ್ಯ ನಿರ್ವಹಿಸಿದ್ದಾರೆ. ಕೂಡ್ಲಿಗಿ ಪೋಲೀಸ್ ಠಾಣೆಯಲ್ಲಿ,ಹಲವು ವರ್ಷಗಳ ಕಾಲ ಕರ್ಥವ್ಯ ನಿರ್ವಹಿಸಿದ್ದಾರೆ. ಅಂತಿಮವಾಗಿ ಅವರು 2006ರಲ್ಲಿ ಅನಾರೋಗ್ಯ ಕಾರಣದಿಂದಾಗಿ, ASI ಹುದ್ದೆಯಲ್ಲಿದ್ದಾಗ ಸ್ವಯಂ ನಿವೃತ್ತಿ ಹೊಂದಿದ್ದರು. ಸ್ವಯಂ ನಿವೃತ್ತಿ ಹೊಂದಿದ ನಂತರ ಅವರು, ಸ್ವಗ್ರಾಮ ಎಂ.ಬಿ.ಅಯ್ಯನಹಳ್ಳಿಯಲ್ಲಿ. ಸಾಮಜಿಕ ಸೇವೆ ಹಾಗೂ ಗ್ರಾಮದ ಪ್ರಮುಖ ಚಟುವಟಿಕೆಗಳಲ್ಲಿ, ತಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕೆಲ ವರ್ಷಗಳಿಂದ ಅವರು, ವಯೋಸಹಜ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿರುತಿದ್ದರು.
*ಅಂತ್ಯ ಕ್ರಿಯೆ*-ದಿವಂಗತ ಸಿ.ಕರಿಯಪ್ಪರವರ ಅಂತ್ಯ ಸಂಸ್ಕಾರ, ಎಂ.ಬಿ.ಅಯ್ಯನಹಳ್ಳಿ ಗ್ರಾಮದಲ್ಲಿ ಆ25ರಂದು ಮಧ್ಯಾಹ್ನ 4ಗಂಟೆಗೆ ಜರುಗಲಿದೆ. *ಸಂತಾಪ* ಹಲವು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕರ್ಥವ್ಯ ನಿರ್ವಹಿಸಿ, ಇಹಲೋಕ ತ್ಯಜಿಸಿದ ಸಿ.ಕರಿಯಪ್ಪರವರ ಅಗಲಿಕೆಗೆ. ಜಿಲ್ಲೆಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು, ವಿವಿದ ಠಾಣೆಗಳ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯವರು. ಕೂಡ್ಲಿಗಿ ಪೊಲೀಸ್ ಉಪವಿಭಾಗದ ಅಧಿಕಾರಿಗಳು, ಹಾಗೂ ಎಲ್ಲಾ ಠಾಣೆಗಳ ಅಧಿಕಾರಿಗಳು, ಮತ್ತು ಸಿಬ್ಬಂದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಚಲುವಾದಿ ಸಮಾಜ ಸಮಸ್ತ ಜನರು ಹಾಗೂ ವಿವಿದ ಸಮಾಜಗಳ ಪ್ರಮುಖರು. ಎಂ.ಬಿ.ಅಯ್ಯನಹಳ್ಳಿ ಸಮಸ್ತ ಗ್ರಾಮಸ್ಥರು, ರೈತ ಕಾರ್ಮಿಕ ದಲಿತ ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿದ ಜನಪ್ರತಿನಿಧಿಗಳು, ಹಿರಿಯ ನಾಗರೀಕರು, ಗಣ್ಯರು. ವಿವಿದ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು, ಸಿ.ಕರಿಯಪ್ಪರವರ ಅಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ