ಹುಚ್ಚು ನಾಯಿ ಹಾವಳಿ: ಭಯಬೀತರಾದ ಜನತೆ. ಒಂದೇ ದಿನ 11 ಜನರಿಗೆ ಕಚ್ಚಿದ ಹುಚ್ಚು ನಾಯಿ, ಹಿಡಿಯಲು ಹರಸಾಹಸ.

 


ಹುಚ್ಚು ನಾಯಿ ಹಾವಳಿ: ಭಯಬೀತರಾದ ಜನತೆ. ಒಂದೇ ದಿನ 11 ಜನರಿಗೆ ಕಚ್ಚಿದ ಹುಚ್ಚು ನಾಯಿ, ಹಿಡಿಯಲು ಹರಸಾಹಸ.   

ಹಟ್ಟಿ ಚಿನ್ನದ ಗಣಿ. 30.08.

ಹಟ್ಟಿ ಪಟ್ಟಣ ಕಾಮನ ಕಲ್ಲೂರ್ ಕ್ರಾಸ್ನಿಂದ ಹಳೆ ಪಂಚಾಯಿತಿ ಮಾರ್ಗವಾಗಿ ಓಡಾಡುತ್ತಿರುವ ಸಾರ್ವಜನಿಕರ ಮೇಲೆ ಹೆಚ್ಚಿನ ಸುಮಾರು 11ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು ಉಳಿದ ಏಳು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಗಾಯಗೊಂಡ ನಾಲ್ವರು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಸ್ಥಳ ಪರಿಶೀಲಿಸಿದ ಹಟ್ಟಿ ಪೊಲೀಸ್ ಸಿಬ್ಬಂದಿಗಳು.

ಹುಚ್ಚುನಾಯಿ ಹಾವಳಿ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಾವಿಸಿದ ಹೊಟ್ಟೆ ಠಾಣೆಯ ಪೊಲೀಸ್ ಅಧಿಕಾರಿ ಪ್ರಕಾಶ್ ಮಳೆ ಮತ್ತು ಸಂಗಡಿಗರು ಸ್ಥಳ ಪರಿಶೀಲಿಸಿ ಹುಚ್ಚು ನಾಯಿ ಇರುವುದನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಜಾಗೃತಿ ಮೂಡಿಸಿ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವವರು ಬಹಳ ಎಚ್ಚರದಿಂದಿರಬೇಕು ಕಾರಣ ಹುಚ್ಚುನಾಯಿ ಇನ್ನೂ ಸಿಕ್ಕಿರುವುದಿಲ್ಲ, ಇರುವುದರಿಂದ ಹುಡುಕುವ ಪ್ರಯತ್ನಗಳು ನಡೆಯುತ್ತಿದೆ ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ಸಂದೇಶ ನೀಡುವ ಮೂಲಕ ಜಾಗ್ರುತ ಗೊಳಿಸುತ್ತಿದ್ದಾರೆ, ಇದೇ ವೇಳೆ ಪೊಲೀಸ್ ಅಧಿಕಾರಿ ಶೇಖ ರಹಿಮಾನ್ ಸೇರಿದಂತೆ ಅನೇಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ