ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ - ಆರ್ ಬಸನಗೌಡ

 

ಸಿಂಧನೂರು 01 ಸೆ.ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರ ಹೊಮ್ಮುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ ಎಂದು ಮಸ್ಕಿಯ ಶಾಸಕ ಆರ್ ಬಸವಗೌಡ ತುರ್ವಿಹಾಳ ಹೇಳಿದರು.

    ತಾಲ್ಲೂಕಿನ ಕುರುಕುಂದಾ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಶಾಲೆಯಲ್ಲಿ ತಿಡಿಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ನಡೆಯಿತು.    

    ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರದಂದು ಏರ್ಪಡಿಸಿದ್ದ 2023 - 24 ನೇ ಸಾಲಿನ ತಿಡಿಗೋಳ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು

    ಸರಕಾರ ಶಾಲೆಯ ಮಕ್ಕಳ ಅವರ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಹಾಗೂ  

ಮಕ್ಕಳು ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಮಾತನಾಡಿದರು.

ದಿವ್ಯ ಸಾನಿಧ್ಯವನ್ನು ಶ್ರೀ ಶೇಖರಯ್ಯ ಸ್ವಾಮಿ ಹಾಗೂ ಶ್ರೀ ಸಿದ್ದಮಲ್ಲಯ್ಯ ಸ್ವಾಮಿ ಕಾರ್ಯಕ್ರಮದ

ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಯ ಅಧ್ಯಕ್ಷರಾದ ಫಕೀರಪ್ಪ ಗಿಣಿವಾರ ಮುಖ್ಯ ಅತಿಥಿಗಳಾಗಿ ವಿರುಪಣ್ಣ ಸಾಹುಕಾರ,ಬಸವರಾಜ ಪಗಡದಿನ್ನಿ,ಗುಡದನಗೌಡ ಪೊ.ಪಾ ,ಸೋಮಶೇಖರ್ ,ಅಮರೇಗೌಡ ಹೊಸಮನಿ,ಬಿ.ಹೆಚ್.ಚಿರತನಾಳ,ಶ್ಯಾಮಣ್ಣ,ಗ್ರಾ ಪಂ ಸದಸ್ಯರುಗಳಾದ ಅಂಬಣ್ಣ ಬಳಗಾನೂರು,ಅಂಬಣ್ಣ ಕಾನಿಹಾಳ,ಲಕ್ಷ್ಮಣ ವಕೀಲರು,ಪಂಪಣ್ಣ ಹಲಗಿ,ಮುಖ್ಯಗುರುಗಳಾದ ವಿರಣ್ಣ,ಸಿದ್ದಪ್ಪ ಬರಡಿ,ವೀರಪ್ಪ ಸಾಲಗುಂದಾ,ಮಲ್ಲಿಕಾರ್ಜುನ ,ಕೃಷ್ಣಚಾರ್ಯ,ಕುಮಾರ ,ಬಸವರಾಜ ,ಕಾವೇರಿ,ಕೆಂಪೆಗೌಡ,ಕುಮಾರೇಶ,ರಂಗನಾಥ,ಉಮಾಪತಿ,ಕಳಕಪ್ಪ,ಮಂಜುನಾಥ ,ಕ್ಲಸ್ಟರ್ ಅಧಿಕಾರಗಳಾದ ಶಾಂತಯ್ಯಸ್ವಾಮಿ ಬಿ.ಆರ್.ಪಿ ಗಳಾದ ಪಂಪಾಪತಿ ಚಿರತನಾಳ ,ಹರಿಜನವಾಡ ಶಾಲೆಯ ಶಾಲಾಭಿವೃದ್ದಿಯ ಸರ್ವ ಪದಾಧಿಕಾರಿಗಳು ಹಾಗೂ ಊರಿನ ಸಮಸ್ತ ಗುರು- ಹಿರಿಯರು ,ಯವಕರು ಮತ್ತು ಬೇರೆ ಸಿ.ಆರ್.ಸಿ.ಯ ಶಿಕ್ಷಕರು ನಿರ್ಣಾಯಕರಾಗಿ ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳು,ಎಸ್.ಡಿ.ಎಮ್.ಸಿ. ಹಾಗೂ ಶಾಲಾ ಸಿಬ್ಬಂದಿ ವರ್ಗ, ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

  1. ಕಾರ್ಯಕ್ರಮ ಉತ್ತಮವಾಗಿ ನಡೆಯಿತು.....ತಾವೆಲ್ಲರೂ ಕಾರ್ಯಕ್ರಮ ‌ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ