ಮಹಿಳೆಯರ ಪೇಟ ಧರಿಸಿ ಮೆರವಣಿಗೆಗೆ ಮೆರಗು ತಂದ ಬಳ್ಳಾರಿ ಘಟಕದ ನುಲಿಯ ಚಂದಯ್ಯ ಜಯಂತಿಯ ಆಚರಣೆ
ಪೇಟ ಧರಿಸಿ ಮೆರವಣಿಗೆಗೆ ಮೆರಗು ತಂದ ಮಹಿಳೆಯರಿಗೆ ಅಭಿನಂದನೆ
ಅಖಿಲ ಕರ್ನಾಟಕ ಕುಳವ ಮಹಾಸಂಘ (ರಿ)ಮಹಿಳೆಯರಿಗೆ ಪ್ರೋತ್ಸಾಹಿಸಿದ ಬಳ್ಳಾರಿ ನಗರ ಘಟಕಕ್ಕೆ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಬಳ್ಳಾರಿ:ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬಳ್ಳಾರಿ ಜಿಲ್ಲಾ ಘಟಕ ವತಿಯಿಂದ ಗುರುವಾರ ರಂದು ಶ್ರೀ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.
ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯ ಕಾರ್ಯಕ್ರಮವನ್ನು ಭಾವಚಿತ್ರದೊಂದಿಗೆ ಮುಖ್ಯ ರಸ್ತೆಗಳಲ್ಲಿ ಬ್ಯಾಂಡ್ ಸೆಟ್ ಡೋಲು ಕುಣಿತದೊಂದಿಗೆ ಮತ್ತು ಮಹಿಳೆಯರ ಪೇಟದೊಂದಿಗೆ ವಿಶೇಷವಾಗಿ ಕಾಣಿಸಿಕೊಂಡು ಮೆರವಣಿಗೆ ಮೆರುಗುತಂದರು ಸಮಸ್ತ ಕುಲಬಾಂಧವರು ಒಗ್ಗೂಡಿ ಅದ್ದೂರಿಯಾಗಿ ಆಚರಿಸಲಾಯಿತು.
12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಬಗ್ಗೆ ಸಮುದಾಯದ ಮುಖಂಡರಾದ ಅಖಿಲ ಕರ್ನಾಟಕ ಕುಳುವ ಮಹಾಸಂಗದ ಖಜಾಂಚಿ ರಮಣಪ್ಪ ಭಜಂತ್ರಿ, ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಸ್ತ ಕುಳುವ ಸಮುದಾಯದ ಹಿರಿಯ ಪ್ರಮುಖ ಮುಖಂಡರು ಯುವಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ