ಮೆದಿಕಿನಾಳ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಯಶಸ್ವಿ
ಮಸ್ಕಿ ತಾಲೂಕಿನ ಮೆದಿಕಿನಾಳ ವಲಯದ ಸರಕಾರಿ ಹಿರಿಯ ಹಾಗೂ ಪ್ರೌಡಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಯಶಸ್ವಿ ಜರುಗಿತು.
ಮೆದಿಕಿನಾಳ ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮವನ್ನು ಶಾಲಾ ಯೋಜನಾಧಿಕಾರಿಗಳಾದ ಶಾಲಿನಿ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡುತ್ತಾ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಆಗಿದ್ದು ,ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಬ್ಬ ಜವಾಬ್ದಾರಿ ವ್ಯಕ್ತಿ ಆಗಬೇಕು ಈ ನಿಟ್ಟಿನಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಜ್ಜನರ ಸಂಘದಲ್ಲಿ ಇದ್ದು ಜೀವನ ನಡೆಸಬೇಕೆಂದು ಯೋಜನೆಯಿಂದ ಶೈಕ್ಷಣಿಕ ,ಕ್ಷೇತ್ರಕ್ಕೆ ಇರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಕುರಿತು ಶಿವಪ್ಪ ಶಿಕ್ಷಕರು ಹಾಗೂ ಇತರ ಗಣ್ಯ ವ್ಯಕ್ತಿಗಳು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕಿರಿಯ ಸರಕಾರಿ ಶಾಲೆಯ ಶಿಕ್ಷಕರಾದ ಶಿವಪ್ಪ ,SDMC ಅಧ್ಯಕ್ಷರಾದ ಯಲ್ಲಪ್ಪ ,ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಸಿದ್ರಾಮೇಶ್, ಸಹ ಶಿಕ್ಷಕರಾದ ಹಾಲಪ್ಪ, ಕಮಲಮ್ಮ,ವಿಜಯಲಕ್ಷ್ಮಿ, ತಾಲ್ಲೂಕು ಕೃಷಿ ಮೇಲ್ವಿಚಾರಕರಾದ ಶಿವಾನಂದ , ವಲಯ ಮೇಲ್ವಿಚಾರಕರಾದ ಪ್ರಸನ್ನ, ಸೇವಾಪ್ರತಿನಿಧಿಯಾದ ಶರಣಮ್ಮ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ