ನಾವು ಎಂತೆಂಥವರಿಗೋ ಭಯ ಬಿದ್ದಿಲ್ಲ, ಇವನ್ಯಾರೋ ಬಂದ್ರೆ ಭಯ ಬೀಳ್ತೀವಾ?



ಬಳ್ಳಾರಿ:ನಾವು ಎಂತೆಂತವರಿಗೋ ಭಯ ಬಿದ್ದಿಲ್ಲ, ಇವನ್ಯಾರೋ ಬಂದ್ರೆ ಭಯ ಬೀಳ್ತೀವಾ? ಹೀಗೆ ಖಡಕ್ ಆಗಿ ಜನಾರ್ಧನ ರೆಡ್ಡಿಗೆ ಬಳ್ಳಾರಿ ನಗರ ಶಾಸಕ ನಾ.ರಾ.ಭರತ್ ರೆಡ್ಡಿ ತಿರುಗೇಟು ನೀಡಿದ್ದಾರೆ.

ಜನಾರ್ಧನ ರೆಡ್ಡಿ ಬಳ್ಳಾರಿ ಶಾಸಕರಿಗೆ ವಾರ್ನಿಂಗ್ ಕೊಟ್ಟ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿನಿಮೀಯ ಸ್ಟೈಲ್ ನಲ್ಲಿ ಉತ್ತರ ನೀಡಿದ ಅವರು, ಜನಾರ್ದನ ರೆಡ್ಡಿಗೆ ಏಕವಚನದಲ್ಲೇ ರಿಪ್ಲೇ ಕೊಟ್ಟರು.

ಬಳ್ಳಾರಿ ಶಾಸಕರಿಂದ ಕೆಆರ್ ಪಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ಎಂದು ಜನಾರ್ಧನ ರೆಡ್ಡಿ ಆರೋಪ ಮಾಡಿದ್ದರು.   ಕೆ ಆರ್ ಪಿ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಆದ್ರೆ ನಾನ್ ಸುಮ್ಮನಿರಲ್ಲ ಎಂದರು.

ಬಳ್ಳಾರಿಯಿಂದ 60 ಕಿಲೋಮೀಟರ್ ದೂರದಲ್ಲಿದ್ದೇನೆ ಎಚ್ಚರ ಎಂದಿದ್ದ ಜನಾರ್ದನ ರೆಡ್ಡಿಗೆ ಭರ್ಜರಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಜನಪರ ಕೆಲಸ ಮಾಡ್ತಿರೋದನ್ನ ನೋಡಿ ಜನಾರ್ದನ ರೆಡ್ಡಿ ಹತಾಶರಾಗಿದ್ದಾರೆ.

ಇಡೀ ರಾಜ್ಯದಲ್ಲಿ ಅವರ ಪಾರ್ಟಿ ಸ್ಪರ್ಧೆ ಮಾಡಿದ್ದು 40 ಕ್ಷೇತ್ರದಲ್ಲಿ, ಆದ್ರೆ ಅವರ ಪಾರ್ಟಿ ಪಡದ ಮತ 2 ಲಕ್ಷ 40 ಸಾವಿರ ಅಷ್ಟೇ. ನಾನ್ ರಾಜ್ಯ ನಾಯಕ ಅಂತಾರೆ, 2 ಲಕ್ಷ 40 ಸಾವಿರ ವೋಟ್ ತಗೊಂಡಾರೆ ಈ ರಾಜ್ಯ ನಾಯಕರು. ಇಂತ ಸೋಲು ಕಂಡವರು ನಮ್ಮ ಕೆಲಸ ಸಹಿಸಿಕೊಳ್ಳದೇ ಇಂತಹ ಮಾತಾಡ್ತಾರೆ ಎಂದು ಕುಟುಕಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*