ಮನು ಕಂಡರೆ ಯಾಕಿಷ್ಟು ಸಿಟ್ಟು? ಅಂಬೇಡ್ಕರ್ ನೀಡುತ್ತಾರೆ ನೋಡಿ ವಿವರಣೆ
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
ಇಂದು ಬಹುತೇಕರು ಏನನ್ನೂ ಓದದೆಯೇ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬಂದದ್ದನ್ನೇ ನಂಬುವವರಿದ್ದಾರೆ. ಇದು ಧರ್ಮದ ವಿಷಯದಲ್ಲಂತೂ ವಿಪರೀತ ಅನುಸರಣೆ ಮಾಡಲಾಗತ್ತದೆ. ಹಿಂದು ಧರ್ಮದಧರ್ಮಶಾಸ್ತçಜ್ಞರಲ್ಲಿ ಪ್ರಮುಖರು ಮನು. ಮನುವಿನ ಕುರಿತು ಸಹ ಇಂತಹುದ್ದೇ ವಿಚಾರಧಾರೆ ಇವೆ.
ಅಂಬೇಡ್ಕರ್ ಅವರು ಇದನ್ನು ನಿವಾರಿಸುತ್ತಾರೆ. ಸ್ವತಃ ಮನುಸ್ಮೃತಿಯನ್ನು ಓದಿದ ಅಂಬೇಡ್ಕರ್ ಅದನ್ನು ಅಗತ್ಯಕ್ಕೆ ತಕ್ಕನಾಗಿ ವ್ಯಾಖ್ಯಾನ ಮಾಡುತ್ತಾರೆ.
ಮನು ಓರ್ವ ಸ್ಮೃತಿಕಾರ. ಹಿಂದು ಧರ್ಮದಲ್ಲಿ ವೇದ, ಉಪನಿಷತ್ತುಗಳ ನಂತತ ಇವುಗಳನ್ನು ವಿವರಿಸುವ ಸ್ಮೃತಿಗಳು ಬರುತ್ತವೆ. ನಾರದ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಮನು ಸ್ಮೃತಿ ಹೀಗೆ ಹಲವು ಸ್ಮೃತಿಗಳು ನಮ್ಮಲ್ಲಿವೆ. ಈ ಸ್ಮೃತಿಕಾರರ ಪೈಕಿ ಮನು ಪ್ರಮುಖರು. ಮನುವನ್ನು ಅಂಬೇಡ್ಕರ್ ಅತ್ಯಂತ ಕಟುವಾಗಿ ಟೀಕಿಸುತ್ತಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಇಲ್ಲಿ ಓದಿ.
ಮನು ತನ್ನ ಸ್ಮೃತಿಯಲ್ಲಿ ಎಲ್ಲಾ ಕಡೆ ಪುರೋಹಿತ ಅಥವಾ ಬ್ರಾಹ್ಮಣ ಕುಲವನ್ನೇ ಶ್ರೇಷ್ಠ ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದಾನೆ ಎಂಬುದನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದನ್ನು ನಾವು ಅಂಬೇಡ್ಕರ್ ಬದುಕು ಮತ್ತು ಬರಹಗಳ ಮೂರನೆಯ ಭಾಗದಲ್ಲಿ ಕಾಣಬಹುದು. ಪುಟ ಸಂಖ್ಯೆ ೩೪ರಿಂದ ಈ ಬರಹ ಕಾಣಬಹುದು. ಅದರ ಸ್ಥೂಲ ವಿವರಣೆಯನ್ನು ಇಲ್ಲಿ ಓದಿ.
ನಾವು ಸಾಮಾನ್ಯವಾಗಿ ಯಾವುದಾದರೂ ಅವ್ಯವಹಾರ ವಿಷಯಕ್ಕೆ ಜಗಳ ಆದರೆ, ದೇವರ ಮುಂದೆ ಗಂಟೆ ಹೊಡೆದು ಪ್ರಮಾಣ ಮಾಡಿ ಎಂದು ಸವಾಲು ಹಾಕುತ್ತೇವಲ್ಲವೇ? ಇದು ಮನು ಸ್ಮೃತಿಯಿಂದಲೇ ಬಂದದ್ದು. ಮನು ಸಾಕ್ಷ್ಯ ಹೇಳುವಾಗ ಯಾವ್ಯಾವ ಕುಲದವರು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸುತ್ತಾನೆ. ಇಲ್ಲೂ ಶೂದ್ರನನ್ನು ತುಚ್ಛವಾಗಿ ಕಾಣುತ್ತಾನೆ. ಅಷ್ಟೇ ಅಲ್ಲ ಸುಳ್ಳು ಸಾಕ್ಷ್ಯ ನುಡಿದಿದ್ದೇ ಆದಲ್ಲಿ ಕ್ಷತ್ರಿಯ, ವೈಶ್ಯ, ಶೂದ್ರನನ್ನು ಮೊದಲು ತಪ್ಪು ದಂಡ ವಿಧಿಸಿ, ಆನಂತರ ಸಮಾಜದಿಂದ ಬಹಿಷ್ಕರಿಸಬೇಕು ಎಂದು ಹೇಳುತ್ತಾನೆ. ಆದರೆ, ಬ್ರಾಹ್ಮರಿಗೆ ದಂಡ ವಿಧಿಸುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸುತ್ತಾನೆ ಮನು ಎಂದು ಅಂಬೇಡ್ಕರ್ ಹೇಳುತ್ತಾರೆ.
ದಂಡ ವಿಧಿಸುವ ವಿಷಯದಲ್ಲೂ ಮೇಲ್ವರ್ಗದ ಬ್ರಾಹ್ಮಣರಿಗೆ ವಿನಾಯಿತಿ ಕೊಡಬೇಕು. ಇಲ್ಲವೇ ಇತರರಿಗಿಂತ ಕಡಮೆ ದಂಡ ವಿಧಿಸಬೇಕೆಂಬ ಷರತ್ತನ್ನು ಸ್ಮೃತಿಯಲ್ಲಿ ವಿವರಿಸಿದ್ದಾನೆ.
ಮನುವಿನ ಶಿಕ್ಷೆ ಪದ್ಧತಿ ಕಣ್ಣಿಗೆ ಕಣ್ಣು, ಮೂಗಿಗೆ ಮೂಗು ಎನ್ನುವಂತೆ ಇದೆ. ಒಂದು ವೇಳೆ ಯಾರಾದರು ಕೆಳವರ್ಗದವರು ಮೇಲ್ವರ್ಗದವರ ಮೇಲೆ ಹಲ್ಲೆಮಾಡಿದರೆ ಅವರ ಅಂಗಾಂಗ ಸೀಳಿ ಹಾಕಬೇಕು. ಇಲ್ಲವೇ ಗಾಯಾಳುಗೆ ಆದಷ್ಟೇ ಗಾಯವನ್ನು ಹಲ್ಲೆಮಾಡಿದಾತನಿಗೆ ಮಾಡಬೇಕು. ಒಂದು ವೇಳೆ ಕೆಳವರ್ಗದವನು ಮೇಲ್ವರ್ಗದವರು ಕುಳಿತುಕೊಳ್ಳುವ ಜಾಗದಲ್ಲಿ ಕುಳಿತಿದ್ದೇ ಆದಲ್ಲಿ ಅಂತಹವನ ಹಿಂಭಾಗದಲ್ಲಿ ಗುರುತುಮಾಡಿ, ಗಡಿಪಾರು ಮಾಡಬೇಕು.
ಇನ್ನು ಮನು ಪ್ರೇಮ ವಿವಾಹ, ಮೇಲ್ವರ್ಗದ ಸ್ತ್ರೀಯರನ್ನು ಕೆಳ ವರ್ಗದವರು ಮದುವೆ ಆದರೆ ಯಾವೆಲ್ಲಾ ಅಮಾನುಷ ಶಿಕ್ಷೆ ವಿಧಿಸಬೇಕು ಎಂದು ಮನು ಪ್ರತಿಪಾದಿಸುತ್ತಾನೆ ಎಂಬುದನ್ನು ನಾಳಿನ ಸಂಚಿಕೆಯಲ್ಲಿ ಓದಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ