ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣ್ ಗುರು ಜಯಂತಿ ಆಚರಣೆ

 

ಕೂಡ್ಲಿಗಿ: ತಾಲೂಕಿನ ಕಾನ ಹೊಸಹಳ್ಳಿ ನಾಡ ಕಛೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣ್ ಗುರುಗಳ ಭಾವಚಿತ್ರಕ್ಕೆ ಪುಷ್ಪಗಳನ್ನ ಸಲ್ಲಿಸಿ ಸರಳವಾಗಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಕಚೇರಿ ಸಿಬ್ಬಂದಿ ಅನಿತಾ ಪೂಜಾರ್ 

ಗುರುಗಳ ಭಾವಚಿತ್ರಕ್ಕೆ ಪುಷ್ಪಗಳನ್ನ ಸಲ್ಲಿಸಿ ಮಾತನಾಡಿ ನಾರಾಯಣ ಗುರುಗಳ ತತ್ವ ಆದರ್ಶಗಳನ್ನ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ, ಆಗ ಮಾತ್ರ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರುವುದು ಸಮಾನತೆಯ ಹರಿಕಾರರಾಗಿ ಮೌಲ್ಯತೆ ಅಂಧಕಾರವನ್ನು ಅನಿಷ್ಠ ಪದ್ಧತಿಗಳನ್ನು ತೆಗೆದುಹಾಕುವಲ್ಲಿ ಅವರ ತತ್ವ ಸಿದ್ಧಾಂತ ಸರ್ವಕಾಲಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು. ಈ ವೇಳೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್ ವೀರೇಶ್ ಮಾತನಾಡಿ 12ನೇ ಶತಮಾನದ ಕಲ್ಯಾಣದ ವೈಚಾರಿಕ ಕಾಂತ್ರಿಯ ಹರಿಕಾರ ಬಸವಸಾಧಿ ಪ್ರಮಥರ ಸಮಾಕಾಲೀನರೂ, ಕಲ್ಯಾಣದ ಸ್ವತಃ ಕಾಯಕ ಮತ್ತು ದಾಸೋಹಕ್ಕೆ ಮಾದರಿಯಾದ ಶ್ರೇಷ್ಠ ಕಾಯಕ ಶಿವಶರಣ ಶ್ರೀ ನುಲಿಯ ಚಂದಯ್ಯನವರ ಗುರುತಿಸಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾಡಕಚೇರಿ ಸಿಬ್ಬಂದಿ ಸಿದ್ದೇಶ್, ಮಂಜುನಾಥ್, ಎಲ್ ಗೀತಾ, ಗ್ರಾಮ ಒನ್ ಕಚೇರಿಯ ಆಪರೇಟರ್ ಹೇಮಂತ್, ನಡಲು ಮನೆ ತಿಪ್ಪೇಸ್ವಾಮಿ, ಸತೀಶ್, ಫೋಟೋ ನಾಗರಾಜ್, ಕುಂಬಾರ್ ಹನುಮಂತಪ್ಪ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ