ದಾವಣಗೆರೆ ಗಡಿಯಾರ ಕಂಬದ ಇತಿಹಾಸ ತಿಳಿಯಿರಿ
ಗಡಿಯಾರ ಕಂಬದ ಇತಿಹಾಸ ತಿಳಿದಿದೆಯೇ?
ದಾವಣಗೆರೆ:ಗಂಟೆಗೊಮ್ಮೆ ಎಷ್ಟು ಗಂಟೆ ಆಗಿದೆ ಎಂಬುದನ್ನು ಢನ್ ಢನ್ ಸದ್ದು ಮಾಡಿ ಸಾರುವ ನಮ್ಮ ನಗರದ ಹಳೆಯ ಭಾಗದಲ್ಲಿರುವ ಗಡಿಯಾರ ಕಂಬದ ಇತಿಹಾಸ ಬ್ರಿಟಿಷ್ ಕಾಲದಿಂದ ಆರಂಭ ಆಗುತ್ತದೆ.
ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್ ನವರ ಈ ಕಂಬದ ನಿಮನಕ್ಕೆ 1931ರಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಅಡಿಗಲ್ಲು ಹಾಕಿದ್ದರು.
1931ರಿಂದ 30 ವರ್ಷಗಳ ಕಾಮಗಾರಿ ನಡೆಯಿತು. 1961ರಲ್ಲಿ ಕಾಮಗಾರಿ ಪೂರ್ಣ ಆಗಿ ಉದ್ಘಾಟನೆ ನೆರವೇರಿತು.
ಅಂದಿನ ಸ್ಥಳೀಯ ಶಾಸಕರಾಗಿದ್ದ ಸುಬ್ರಮಣ್ಯ ಅವರು ಗಡಿಯಾರ ಕಂಬದ ಲೋಕಾರ್ಪಣೆ ನೆರವೇರಿಸಿದ್ದರು.
ಕಾಲ ನಂತರದಲ್ಲಿ ಏಕಾಏಕಿ ಗಡಿಯಾರ ಸದ್ದು ಮಾಡುವುದನ್ನು ನಿಲ್ಲಿಸಿ ಬಿಟ್ಟಿತು. ತುಂಬಾ ವರ್ಷಗಳ ಕಾಲ ಸದ್ದು ನಿಲ್ಲಿಸಿದ ಗಡಿಯಾರ ಕಂಬ ಮತ್ತೆ ಸದ್ದು ಮಾಡಲು ಎಸ್.ಎಸ್. ಮಲ್ಲಿಕಾರ್ಜುನ್ ಬರಬೇಕಾಯಿತು.
ಮತ್ತೆ ಅದಕ್ಕೆ ಸದ್ದು ಬಂದಿದ್ದು 2002 ರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮತ್ತೆ ಈ ಗಡಿಯಾರ ಕಂಬಕ್ಕೆ ಕಾಯಕಲ್ಪ ಸಿಕ್ಕಿತು.
ಎಚ್ ಎಂ ಟಿ ಸಹಾಯದೊಂದಿಗೆ ಹೊಸ ಗಡಿಯಾರವನ್ನು ಕಂಬಕ್ಕೆ ಅಳವಡಿಸಲಾಯಿತು. ಇದೀಗ ಗಡಿಯಾರ ಚೆನ್ನಾಗಿ ಕೆಲಸ ಮಾಡುತ್ತಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ