ಪಕ್ಷ ಟಿಕೇಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವೆ : ಸಿ.ವಿ ಚಂದ್ರಶೇಖರ್
ವರದಿ ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಆಗಸ್ಟ್ 23 : -ಜೆಡಿಎಸ್ ಪಕ್ಷವು ಸೂಚನೆ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡುಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಹಗಲಿರಳು ದುಡಿಯುತ್ತಿದ್ದಾರೆ. ಕುಮಾರಸ್ವಾಮಿ ಅವರು ಯಾವಾಗಲೂ ರೈತಪರವಾದ ಧ್ವನಿಯನ್ನೇ ಶಾಸನ ಸಭೆಯಲ್ಲೆತ್ತಾರೆ. ಈ ಹಿಂದೆ ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿಯವರೇ ಎಂದರು. 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಈಗಿನ ಸಂಸದರು ಬ್ಲ್ಯಾಕ್ ಮೇಲ್ ಮಾಡಿಕೊಂಡು ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ಪಡೆದುಕೊಂಡರು. ಮುಂದಿನ ಚುನಾವಣೆಯಲ್ಲಿಯೂ ಹಳೆಯ ತಂತ್ರ ಪ್ರಯೋಗಿಸುತ್ತಾರೆ ಎಂದರು.ಚುನಾವಣಾಗಳು ಇನ್ನೇನ್ ಆಗಮಿಸುವವು ಎನ್ನುವ ಸಮಯದಲ್ಲಿ ಟಿಕೆಟ್ ಸಲುವಾಗಿ ಬ್ಲಾಕ್ ಮೇಲ್ ತಂತ್ರಗಾರಿಕೆ ರೂಪಿಸುವವರಿಗೇ ಹೆಚ್ಚು ಬಿಜೆಪಿ ಟಿಕೇಟ್ ನೀಡುತ್ತದೆ, ಹೀಗಾಗಿ ಈ ಬಾರಿ ಸಹ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಹುದೇನೋ ಎಂದರು. ಸಂಸದ ಸಂಗಣ್ಣ ಕರಡಿ ಸೋಮವಾರ ಬಿಜೆಪಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದು ಕೊಡುವೆ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಸದರು ಹೇಳುವುದು ಒಂದು ಮಾಡುವುದು, ಇನ್ನೊಂದು ಎನ್ನುತ್ತಲೇ ತಿರುಗೇಟು ನೀಡಿದ ಚಂದ್ರಶೇಖರ್, ಸಂಸದರು ಟಿಕೆಟ್ ಸಲುವಾಗಿ ಬ್ಲ್ಯಾಕ್ ಮೇಲ್ ಮಾಡಿದಾಗ ಬಿಜೆಪಿ ರಾಜ್ಯದಲ್ಲಿ ಪ್ರಬಲವಾಗಿತ್ತು. ಆಗಲೇ ಸಂಸದರ ಬ್ಲಾಕ್ ಮೇಲ್ ತಂತ್ರಕ್ಕೆ ಪಕ್ಷ ಮಣಿದಿದೆ. ಚುನಾವಣೆ ಬಳಿಕ ಬಿಜೆಪಿ ದುರ್ಬಲವಾಗಿದ್ದು, ಈಗಲೂ ಅವರ ಮಾತಿಗೆ ಮಣೆ ಹಾಕಿದರೆ ಅಚ್ಚರಿಯೇನಿಲ್ಲ. ಕೊಪ್ಪಳ ಕ್ಷೇತ್ರದಲ್ಲಿ ಸಂಸದರ ಬ್ಲಾಕ್ ಮೇಲ್ ತಂತ್ರದಿಂದಾಗಿ ಕಾಂಗ್ರೆಸ್ ಪಕ್ಷದ ರಾಘವೇಂದ್ರ ಹಿಟ್ನಾಳ ಸತತ ಮೂರನೇ ಬಾರಿಗೆ ಶಾಸಕರಾದರು ಎಂದು ಹೇಳಿದರು. ಬಿಜೆಪಿ ಸ್ವಯಂಕೃತ ತಪ್ಪಿನಿಂದಾಗಿ ಚುನಾವಣೆಯಲ್ಲಿ ಮುಖಭಂಗ ಅನುಭವಿಸುವಂತೆ ಆಯಿತು. ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಯಿತು. ಹೀಗಾಗಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಎದೆಗುಂದಿಲ್ಲ. ಸದಾ ಸಂಘಟನಾ ಸಕ್ರಿಯರಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಮಹಾಂತಯ್ಯನಮಠ, ಮುಖಂಡರಾದ ಮೂರ್ತೆಪ್ಪ ಗಿಣಿಗೇರಿ ಹಿಟ್ನಾಳ, ಸಾಧಿಕ್ ಅತ್ತಾರ, ಡಾ.ಗೋವಿನಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ