ಆ.26 ರಂದು ನಗರಕ್ಕೆ ಮಾಲಾಶ್ರೀ - ಜೂನಿಯರ್ ಅಪ್ಪು



ಬಳ್ಳಾರಿ:ಕನಸಿನ ರಾಣಿ ಮಾಲಾಶ್ರೀ ಅಭಿನಯದ ಮಾರಕಾಸ್ತ್ರ ಚಿತ್ರ ಸೆ.15ರಂದು ತೆರೆ ಕಾಣಲಿದ್ದು, ಚಿತ್ರದ ಪ್ರಚಾರಕ್ಕೆಂದು ಮಾಲಾಶ್ರೀ ಮತ್ತು ಚಿತ್ರ ತಂಡ ನಗರಕ್ಕೆ ಆಗಮಿಸಲಿದೆ.
ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಜೂನಿಯರ್ ಅಪ್ಪು ವಿಶೇಷ ಆಕರ್ಷಣೆ ಅಗಲಿದ್ದಾರೆ.
ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ನಮ್ಮದೇ ಜಿಲ್ಲೆಯ ಹೊಸ ದರೋಜಿ ಗ್ರಾಮದವರು. ಈ ಮೊದಲು ಶಾರ್ಟ್ ಮೂವಿ ಮಾಡಿದ್ದರು. ಇದೀಗ ಬೆಳ್ಳಿ ತೆರೆಯ ಮೇಲೆ ಮೊಟ್ಟ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಅರ್ಧ ಭಾಗ ಬಳ್ಳಾರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ, ದರೋಜಿ, ಕಮಲಾಪುರ ಕೆರೆ, ಸಂಡೂರು ಭಾಗಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ.
ಚಿತ್ರದ ಹಿಂದಿ ಸ್ಯಾಟಲೈಟ್ ಹಕ್ಕುಗಳು ಆಗಲೇ 1.5 ಕೋಟಿ ರು.ಗೆ ಮಾರಾಟ ಆಗುವೆ. ಚಿತ್ರದ ಟೀಸರ್ 28 ಲಕ್ಷ ವೀಕ್ಷಣೆ ಗಳಿಸಿದೆ. ಮಾಲಾಶ್ರೀ ಅವರು ತೆರೆಯ ಮೇಲೆ ಮತ್ತಷ್ಟು ಆಂಗ್ರಿ ಲುಕ್ಕಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕತೆ ಬಳ್ಳಾರಿ ವಿಷಯ ಆಧರಿಸಿದೆ. ಇದೆ ಕಾರಣಕ್ಕೆ ಬಹುತೇಕ ಚಿತ್ರವನ್ನು ಬಳ್ಳಾರಿಯಲ್ಲಿ ಶೂಟಿಂಗ್ ಮಾಡಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*