ಹೊಸಹಳ್ಳಿ ನಾಡ ಕಚೇರಿಯಲ್ಲಿ ಅರಸು ಅವರ 108ನೇ ಜನ್ಮದಿನಾಚರಣೆ

 


ಕಾನ ಹೊಸಹಳ್ಳಿ: ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆಯನ್ನ ಸರಳವಾಗಿ ಆಚರಣೆ ಮಾಡಲಾಯಿತು. ಇಲ್ಲಿನ ನಾಡ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಉಳುವವನೆ ಭೂಮಿ ಒಡಯ ಕಾಯ್ದೆಯ ಅನುಷ್ಠಾನ ಹಾಗೂ ಎಲ್‌.ಜಿ.ಹಾವನೂರು ವರದಿಯನ್ನು ಜಾರಿ ಮಾಡುವುದರ ಮೂಲಕ ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರೆನಿಸಿಕೊಂಡರು ಎಂದು ಕಂದಾಯ ಪರಿವೀಕ್ಷಕ ತಿಪ್ಪೇಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯ, ಶ್ರೀನಿವಾಸ ಕೊಂಡಿ ಮತ್ತು ಗ್ರಾಮದ ಮುಖಂಡರಾದ ನಾಗರಾಜ್. ಹನುಮಂತಪ್ಪ ಸೇರಿದಂತೆ ಇತರರು ಸಾರ್ವಜನಿಕ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*