ಸಿ.ಎಸ್.ಪುರ ಮಳೆಗಾಗಿ ಪ್ರಾರ್ಥಿಸಿ ವಿಶಿಷ್ಟ ಗುಲುಕಮ್ಮ( ಗುರ್ಚಿ) ಆಚರಣೆ
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಚಂದ್ರಶೇಖರ ಪುರ ಗ್ರಾಮದಲ್ಲಿ ಗುಲುಕಮ್ಮ ಗುಲುಕಮ್ಮ ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ, ಹಳ್ಳ ಕೊಳ್ಳ ತಿರಗ್ಯಾಡಿ ಬಂದಿ, ಕಾರ್ ಮಳಿಯೇ ಕಪಾಟ ಮಳಿಯೇ, ಬೇಗನ ಬಾರ ಸುರಿಯೇ ಮಳಿಯೇ..!
ಹೀಗೆ ಜನಪದ ದಾಟಿಯಲ್ಲೇ ಹಾಡುತ್ತಾ ಗ್ರಾಮದ ವಿವಿಧ ಓಣಿಯಲ್ಲಿ ಸುತ್ತಾಡಿ ವಿಶಿಷ್ಟ ಗುಲುಕಮ್ಮನ(ಗುರ್ಚಿ )ಪೂಜೆ ಆಚರಣೆ ಮಾಡಿ ಮಳೆಗಾಗಿ ಮಕ್ಕಳು ಮಹಿಳೆಯರು, ಯುವಕರು ಪ್ರಾರ್ಥಿಸಿ ಪೂಜಿಸಿದರು.
*ಏನಿದು ಗುರ್ಚಿ ಪೂಜೆ:* ಓರ್ವ ಬಾಲಕ ಅಥವಾ ಬಾಲಕಿಯ ತಲೆ ಮೇಲೆ ತೆವಿ (ರೊಟ್ಟಿ ಮಾಡು ಹಂಚು) ಜಲ್ಡೀ ಯನ್ನು (ಡಬ್ಬ) ಹಾಕಿಕೊಂಡು ಆ ತೆವಿ ಮೇಲೆ ಮಣ್ಣಿನ ಮುದ್ದೆ ಇಟ್ಟುಕೊಂಡು, ಹಸಿ ಮಣ್ಣಿಯ ಮುದ್ದೆಯ ಮೇಲೆ ಕರಿಕೆ ಹುಲ್ಲು ಹಾಕಿ, ಮನೆಯ ಮನೆಯ ಮುಂದೆ ಹೋಗಿ ಹಾಡು ಹಾಡುತ್ತಾರೆ. ಈ ವೇಳೆ ಮಹಿಳೆಯರು ಮಕ್ಕಳು ಗುಲುಕಮ್ಮನ (ಗುರ್ಚಿ) ಮೇಲೆ ನೀರು ಸುರಿಯುತ್ತಾರೆ. ಆಗ ಗುರ್ಚಿಯು ತಂಪಾಗಿ ಮಳೆ ಬರುತ್ತದೆ ಎಂದು ರೈತರ ಹಾಗೂ ಜಾನಪದರ ನಂಬಿಕೆಯಿದೆ.
ಗ್ರಾಮದ ಚಪ್ಪರದಳ್ಳಿ ಚಂದ್ರಪ್ಪ, ತಲೆಯ ಮೇಲೆ ಗುಲುಕಮ್ಮನನ್ನು ( ಗುರ್ಚಿ) ಹೊತ್ತು, ಮಹಿಳೆಯರು ಇಂತಹ ಗುರ್ಚಿಯನ್ನು ಮಾಡಿ ಓಣಿಯಯಲ್ಲಿ ಮನೆ ಮನೆ ಮುಂದೆ ಬಂದಾಗ ಮನೆಯವರು ತಂಬಿಗೆ, ಸಣ್ಣ ಪಾತ್ರೆಯ ತುಂಬಾ ನೀರು ತಂದು ಗುರ್ಚಿಯ ಮೇಲೆ ಸುರಿಯಲಾರಂಭಿಸುತ್ತಾರೆ.
ಗುಲುಕಮ್ಮ (ಗುರ್ಚಿ) ಹೊತ್ತ ಬಾಲಕ ಓಣಿಯಲ್ಲಿ ತಿರುಗಾಡಿ ಗುರ್ಚಿ ಮೇಲೆಯ ನೀರನ್ನು ಹಾಕಿಸಿಕೊಂಡು ಆ ಮನೆಯವರಿಂದ ದವಸ ಧಾನ್ಯ ನೀಡಿದ್ದನ್ನು ಪ್ರಸಾದವಾಗಿ ತಯಾರಿಸಿ ಮನೆ ಮಂದಿಗೆ ಕೊಡುವ ವಿಶಿಷ್ಟ ಗುರ್ಚಿ ಪೂಜೆ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ