ಅಂಬೇಡ್ಕರ್ ಬದುಕು ಮತ್ತು ಬರಹ- ಬ್ರಾಹ್ಮಣ ವಧೆ ಎಂದೂ ಸಲ್ಲ:ಮನು
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
ನಿನ್ನೆಯ ಸಂಚಿಕೆಯಲ್ಲಿ ಒಬ್ಬ ಮನುಷ್ಯ ತಪ್ಪು ಮಾಡಿದಾಗ ಶಿಕ್ಷೆ ವಿಧಿಸುವ ವಿಚಾರದಲ್ಲಿ ಮನು ಅದು ಹೇಗೆ ತನ್ನ ಸ್ಮೃತಿಯಲ್ಲಿ ಬ್ರಾಹ್ಮಣರನ್ನು ಮೇಲೆ ಇಟ್ಟು ಉಳಿದ ಮೂರು ವರ್ಣಗಳನ್ನು ಕೀಳಾಗಿ ಶಿಕ್ಷಿಸಿದ ಎಂಬುದರ ಕುರಿತು ಓದಿದೆವು. ಇಂದು ಸ್ತ್ರೀ-ಪುರುಷ ನೈತಿಕ, ಅನೈತಿಕ ಸಂಬಂಧ ಕುರಿತು ಮನುವಿನ ಸ್ಮೃತಿಯಲ್ಲಿ ಏನು ಇದೆ ಎಂಬುದನ್ನು ಅಂಬೇಡ್ಕರ್ ವಿಶ್ಲೇಷಿಸಿದ್ದಾರೆ; ಅದನ್ನು ಓದೋಣ.
ಮೊದಲನೆಯದಾಗಿ ಭಾಗ 8, ಶ್ಲೋಕ ಸಂಖ್ಯೆ 359ರ ಪ್ರಕಾರ
``ಕೆಳವರ್ಣದ ಒಬ್ಬ ಮನುಷ್ಯ ಮೇಲು ಜಾತಿಯ ಹುಡುಗಿಯನ್ನು ಪೀತಿಸಿದಾಗ ಅವನಿಗೆ ಕಠಿಣ ಶಿಕ್ಷೆ ವಿದಿಸಬೇಕು" ತನಗೆ ಸರಿಸಮಾನ ವರ್ಣದ ಹುಡುಗಿಯಾದರೆ ಸೂಕ್ತ ವಧು ದಕ್ಷಿಣೆಯಿಂದ ಅವಳ ತಂದೆಯನ್ನು ಒಪ್ಪಿಸಿ ಮದುವೆಯಾಗಬಹುದು''ಎನ್ನುತ್ತಾನೆ ಮನು.
ಭಾಗ 8 ಶ್ಲೋಕ 374ರ ಪ್ರಕಾರ
``ಒಬ್ಬ ಕಾರ್ಮಿಕ ಅಥವಾ ಸೇವಕ ವರ್ಗಕ್ಕೆ ಸೇರಿದವನು ಬಾಹ್ಮಣ ಹೆಣ್ಣಿನ ಜೊತೆ ಅನೈತಿಕ ಸಂಬಂಧವಿರಿಸಿಕೊಂಡಿದ್ದರೆ, ಮನೆಯಲ್ಲಿ ಆಕೆಗೆ ರಕ್ಷಣೆಯಿರಲಿ, ಇಲ್ಲದಿರಲಿ, ಅವನಿಗೆ ವಿದಿಸಬೇಕಾದ ಶಿಕ್ಷೆ ಹೀಗಿದೆ: ಆಕೆಗೆ ರಕ್ಷಣೆ ಇಲ್ಲದಿದ್ದರೆ ಅನೈತಿಕ ಕೃತ್ಯವೆಸಗಿದ ಅವನು ನಿರ್ದಿಷ್ಟ ಅಂಗವನ್ನು ಅಥವಾ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ರಕ್ಷಿತಳಾಗಿದ್ದು ಆಕೆ ಪೂಜಾರಿಣಿಯಾಗಿದ್ದರೆ, ಅವನು ಜೀವವನ್ನು ಸೇರಿದಂತೆ ಎಲ್ಲವನ್ನೂ ಕಳೆದು ಕೊಳ್ಳುತ್ತಾನೆ.'' ಅಂದರೆ ಬಹಿಷ್ಕಾರ ಇಲ್ಲವೇ ವಧೆ ಒಂದೇ ಶಿಕ್ಷೆ.
"ಶ್ಲೋಕ 375 ಪ್ರಕಾರ ಪೂಜಾರಿಣಿ ಜೊತೆ ವೇಶ್ಯ ಸಂಬಂಧ ಬೆಳೆಸಿದರೆ ಆತನ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ"
"ಶ್ಲೋಕ 376ರ ಪ್ರಕಾರ ಕ್ಷತ್ರಿಯ, ವೇಶ್ಯ ವರ್ಣದವರು ಬ್ರಾಹ್ಮಣ ಸ್ತ್ರೀ ಜೊತೆ ಅನೈತಿಕ ಸಂಬAಧ ಇಟ್ಟುಕೊಂಡರೆ ಒಣಹುಲ್ಲು, ಸೌದೆ ಹಾಕಿ ಸುಡಬೇಕು"
"ಶ್ಲೋಕ 383 ಪ್ರಕಾರ ಒಬ್ಬ ಬಾಹ್ಮಣ ಏನಾದರೂ ಸೈನಿಕ ಮತ್ತು ವ್ಯಾಪಾರಿ ವರ್ಗದ ರಕ್ಷಿತ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡಿದರೆ ಒಂದು ಸಾವಿರ ಪಣವನ್ನು ದಂಡ ಹಾಕಬಹುದು. ಸೇವಕ ವರ್ಗದ ರಕ್ಷಿತ ಸ್ತ್ರೀ ಒಬ್ಬಳ ಜೀವಹಾನಿಗೆ ಕಾರಣವಾದ ಸೈನಿಕ ಅಥವಾ ವ್ಯಾಪಾರಿಗೂ ಸಾವಿರ ಪಣಗಳ ದಂಡ ಹಾಕಬಹುದು"
ಮೇಲಿನ ಶ್ಲೋಕದಲ್ಲಿ ಸ್ತ್ರೀಗೆ ಇರುವ ಸ್ಥಾನಮಾನ ಗಮನಿಸಿ.
"ಶ್ಲೋಕ 380ರ ಪ್ರಕಾರ ಎಂತಹ ಅಪರಾದ ಮಾಡಿದ್ದರೂ ಒಬ್ಬ ಬ್ರಾಹ್ಮಣನನ್ನು ರಾಜನು ಎಂದೂ ವದಿಸಕೂಡದು. ಬೇಕಾದರೆ ತನ್ನ ರಾಜ್ಯದಿಂದ ಗಡಿಪಾರು ಮಾಡಬಹುದು. ಅವನ ದೇಹಕ್ಕೆ ಯಾವ ನೋವನ್ನೂ ಉಂಟುಮಾಡದೆ, ಆಸ್ತಿಪಾಸ್ತಿಗಳನ್ನು ಕಿತ್ತುಕೊಳ್ಳದೇ ಗಡಿಪಾರು ಮಾಡಬಹುದು''
ಇಂತಹ ಶಿಕ್ಷೆ, ಅಪರಾಧ ಗುರುತಿಸುವ ಪದ್ಧತಿ ಮನು ಸ್ಮೃತಿಯಲ್ಲಿ ಇರುವುದನ್ನು ಅಂಬೇಡ್ಕರ್ ವಿಶ್ಲೇಷಣೆ ಮಾಡುತ್ತಾರೆ. ಅಂಬೆಡ್ಕರ್ ವಿಶ್ಲೇಷಣೆ ಮಾಡುವಾಗ ಪ್ರತಿ ಶ್ಲೋಕದ ಅರ್ಥ ಬಿಡಿಸಿ ತಿಳಿಸಿದ್ದಾರೆ. ನಾಳೆಯ ಸಂಚಿಕೆಯಲ್ಲಿ ಗಾಯತ್ರಿ ಮಂತ್ರ ಪಠಣ, ಜನಿವಾರ ಧಾರಣೆ ಕುರಿತು ತಿಳಿದುಕೊಳ್ಳಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ