ಎಸ್‌ಸಿ, ಎಸ್‌ಟಿಗಳ ಬಳಿ ಯಾಕೆ ಭೂಮಿ ಕಡಮೆ ಇರುತ್ತದೆ ಇಲ್ಲವೇ ಇರುವುದೇ ಇಲ್ಲ?

ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟುಅದರಾಚೆ ಅಂಬೇಡ್ಕರ್ ಇದ್ದಾರೆಅವರೊಬ್ಬ ಆರ್ಥಿಕ ತಜ್ಞಸಾಮಾಜಿಕ ಚಿಂತಕಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದುಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆಓದಿ ಇತರರಿಗೆ ಹಂಚಿ.

ಈ ಪ್ರಶ್ನೆಗೆ ಬಹುತೇಕರ ಬಳಿ ಉತ್ತರ ಇರುವುದಿಲ್ಲ. ಇದಕ್ಕೆ ಉತ್ತರ ಹುಡುಕುವ ಕೆಲಸವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಮಾಡಿದ್ದಾರೆ. 

ಹಿಂದು ಧರ್ಮದಲ್ಲಿ ಶೂದ್ರರಿಗೆ ಭೂಮಿ ಹಕ್ಕು ಹೊಂದಲು ಅವಕಾಶ ಇಲ್ಲ. ಬದಲಿಗೆ ಅವರು ಮೂರು ಮೇಲ್ವರ್ಣದವರ ಸೇವೆ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳಬೇಕು.

ಮನು ಸ್ಮೃತಿಯ ಅಧ್ಯಾಯ 10 ಶ್ಲೋಕ 124ರ ಪ್ರಕಾರ ಶೂದ್ರನಿಗೆ ಶಕ್ತಿ, ಸಾಮರ್ಥ್ಯಕ್ಕೆ ಅನುಸಾರವಾಗಿ ತನ್ನ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಶೂದ್ರನಿಗೆ ನೀಡಬೇಕು.

ಇನ್ನು ಇದೇ ಅಧ್ಯಾಯದ 125ನೇ ಶ್ಲೋಕದ ಪ್ರಕಾರ ಶೂದ್ರನಿಗೆ ಯಜಮಾನ ತಾನು ತಿಂದು ಬಿಟ್ಟದ್ದನ್ನು ಅಂದರೆ ಹಳಸಿದ್ದ ತಿನ್ನಲು ಕೊಡಬೇಕು. ಬಳಸಿದ ಬಟ್ಟೆ ಕೊಡಬೇಕು. ದವಸ ಧಾನ್ಯದ ವರ್ಜ್ಯ ಭಾಗವನ್ನು ನೀಡಬೇಕು. ಮನೆಯ ಹಳೆಯ ಮರ, ಮುಟ್ಟು ಕೊಟ್ಟು ಮನೆ ಕಟ್ಟಲು ಅವಕಾಶ ಕೊಡಬೇಕು ಎಂಬ ಕಟ್ಟಳೆ ಇದೆ.

ಶೂದ್ರ ಸಂಪತ್ತನ್ನು ಸಂಗ್ರಹಿಸುವAತೆ ಇಲ್ಲ. ಒಂದು ವೇಳೆ ಸಂಪತ್ತು ಸಂಗ್ರಹಿಸಿದರೆ ಆತ ಕೂಡಿಟ್ಟ ಸಂಪತ್ತು ಬ್ರಾಹ್ಮಣರ ದುಖಃಕ್ಕೆ ಕಾರಣ ಆಗುತ್ತದೆ. 

ಇನ್ನು ಆತನಿಗೆ ನೀಡುವ ಕೂಲಿ ಎಂದಿಗೂ ಆತನ ಆರ್ಥಿಕ ಭದ್ರತೆಗೆ ಕಾರಣ ಆಗುವಂತೆ ಇಲ್ಲ ಹಾಗೆ ಇರಬೇಕು ಎಂದು ಮನು ಕಟ್ಟಪ್ಪಣೆ ಮಾಡಿದ್ದಾನೆ.

ಒಟ್ಟಾರೆ ಹಿಂದು ಧರ್ಮದಲ್ಲಿ ಬಹುಸಂಖ್ಯರಾಗಿದ್ದ ಶೂದ್ರರು ಯಾವುದೇ ಕಾರಣಕ್ಕೂ ಸ್ವತಂತ್ರ ಗಳಿಸಿಕೊಂಡು ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿಲ್ಲ. ಆರ್ಥಿಕ, ಸಾಮಾಜಿಕ, ತಾರ್ಕಿಕ ವಿಷಯಗಳಲ್ಲಿ ಅವರು ಸದಾ ಗುಲಾಮರೇ.

ಇದೇ ಕಾರಣಕ್ಕೆ ಇಂದು ದಲಿತ ವರ್ಗದವರಲ್ಲಿ ಭೂಮಿ ಇಲ್ಲ. ಆಸ್ತಿಯಂತೂ ಅತಿ ಕಡಮೆ. ಸ್ವಾತಂತ್ರö್ಯ ಪೂರ್ವದಲ್ಲಿ ಬ್ರಿಟಿಷ್ ಸೇರಿದಂತೆ ಕೆಲ ರಾಜರುಗಳು ಈ ದಲಿತರಿಗೆ ಇನಾಮು ಭೂಮಿ ನೀಡಿದರು. ಅವೂ ಸಹ ಇಂದಿಗೂ ಅವರ ಸ್ವಂತ ಖಾತೆಗೆ ವರ್ಗಾವಣೆ ಆಗಿಲ್ಲ. 

ಸ್ವಂತ ಆಸ್ತಿ ಹೊಂದದ ಈ ಜನ ಅದು ಹೇಗೆ ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕು? ಎಂಬ ಪ್ರಶ್ನೆ ಸ್ವತಂತ್ರ ನಂಘರ ಹಲವರಲ್ಲಿ ಹುಟ್ಟುಕೊಂಡಿತು. ಇದರ ಫಲವೇ ಮೀಸಲಾತಿ ಜಾರಿಗೆ ಬಂದಿದ್ದು. ಮೀಸಲಾತಿ ಮೂಲಕ ಈ ಜನರಿಗೆ ವಿಶೇಷ ಸ್ಥಾನಮಾನ ಕೊಡಬೇಕು. ಆರ್ಥಿಕ ಸ್ವಾವಲಂಬಿಗಳು ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂಬ ಉದ್ದೇಶ ಇತ್ತು.

ಇನ್ನು ಈ ಹಿಂದೆ ಇಂದಿರಾ ಗಾಂಧಿ ಒಮ್ಮೆ ಭೂಮಿಯನ್ನು ಸಮಾನವಾಗಿ ಹಂಚುವ ಕೆಲಸಕ್ಕೆ ಕೈ ಹಾಕಿದರು. ಹೆಚ್ಚು ಭೂಮಿ ಇರುವವರಿಂದ ಭೂಮಿ ಪಡೆದು ಭೂಮಿ ಇರದವರಿಗೆ ನೀಡುವ ಯತ್ನ ಮಾಡಿದರು. ಆದರೆ, ಅದು ಫಲಿಸಲಿಲ್ಲ. ಕರ್ನಾಟಕದಲ್ಲಿ ದೇವರಾಜ ಅರಸು ಮಾಡಿದ ಭೂ ಸುಧಾರಣೆ ಇದೇ ಕಾರಣಕ್ಕೆ. ಉಳುವವನೇ ಒಡೆಯ ಕಾನೂನು ಇದಕ್ಕೆ ಅನುಕೂಲ ಆಯಿತು.

ಮೀಸಲಾತಿ ಕುರಿತು ಮಾತನಾಡುವ ಮುನ್ನ ಈ ವಿಷಯಗಳನ್ನು ಮನನ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಬರೆಹ ಮತ್ತು ಭಾಷಣಗಳು ಸರಣಿಯ 3ನೇ ಸಂಪುಟದ ಪುಟ ಸಂಖ್ಯೆ 65ರಿಂದ ಈ ವಿಷಯಗಳನ್ನು ಓದಬಹುದು. ಓದುವ ಆಸಕ್ತಿ ಇದ್ದವರು ಈ ಲಿಂಕ್ ಅನ್ನು ಒಮ್ಮೆ ಕ್ಲಿಕ್ ಮಾಡಬಹುದು.

https://kanaja.karnataka.gov.in/ebook/wp-content/uploads/2020/PDF/10.pdf

ಕಾಮೆಂಟ್‌ಗಳು

  1. Sir nija heli dudida duddanna hulstara satya heli nammuralli obba example kodtini avna buddivantike avna koti sampadisiddane

    ಪ್ರತ್ಯುತ್ತರಅಳಿಸಿ
  2. ಬುದ್ದಿವಂತಿಕೆಯಿಂದ ಕೋಟಿ ಸಂಪಾದಿಸಲು ಅಡಿ ಇಲ್ಲ. ಆದರೆ, ಮೊದಲು ಅಸಮಾನತೆ ಒಪ್ಪಿಕೊಳ್ಳುವ ಮನೋಭಾವ ಬೆಳೆಯಬೇಕು ಅಲ್ವಾ?

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ