ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದ ಬಹುಕೋಟಿ ಹಗರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ.


ಕೊಪ್ಪಳ: ಆ. 29.ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 5000 ಮತ್ತು 3000 ಸಾವಿರ ರೂಪಾಯಿ ಕೋವಿಡ್ ಸಹಾಯ ಧನ. ಆಹಾರ ಕಿಟ್. ಬೂಸ್ಟರ್ ಕಿಟ್. ಮೇಷನ್ ಕಿಟ್. ಕಾರ್ಪೆಂಟರ್ ಕಿಟ್.ಪ್ಲಂಬರ್ ಕಿಟ್. ಪೇಂಟ್ ಕಿಟ್.ಬಾರ್ ಬೇಂಡರ್‌ ಕಿಟ್. ಕೌಸಲ್ಯ ಅಭಿವೃದ್ಧಿ ತರಬೇತಿ. ವೈದ್ಯಕೀಯ ಪರೀಕ್ಷೆ. 1 ರಿಂದ 12 ಸ್ಕೂಲ್ ಕಿಟ್ ವಿತರಣೆ ನೆಪದಲ್ಲಿ ಬಹು ಕೋಟಿ ಹಗರಣ ಕೇಳಿ ಬಂದಿದ್ದು ನ್ಯಾಯಾಂಗ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ (ರಿ)(ಎ.ಐ.ಟಿ.ಯು.ಸಿ.ಸಂಯೋಜಿತ) ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಭಾಗ್ಯನಗರ ಪಟ್ಟಣ ಪಂಚಾಯತ್ ಮುಂಭಾಗದಿಂದ ಪ್ರಾರಂಭಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಕಾರ್ಮಿಕ ವೃತ್ತ ದಿಂದ ಅಶೋಕ್ ವೃತ್ತ ಸೇರಿದಂತೆ ಬಸವೇಶ್ವರ ವೃತ್ತ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾ ಆಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯ ರಾಣಿ.ಕೆ.ವಿ. ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಅರ್ಪಿಸಲಾಯಿತು.


       ಮನವಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಥವಾ ಯಾವುದೇ ವಸತಿ ಯೋಜನೆಗಳಿಗೆ ಮಂಡಳಿಯಿಂದ ಇನ್ನೂ ಮುಂದೆ ಹಣ ಬಿಡುಗಡೆ ಮಾಡಬಾರದು. ಹಾಗೂ ಈಗಾಗಲೇ ಹಣ ಬಿಡುಗಡೆ ಮಾಡಿ ನಿರ್ಮಾಣವಾಗಿರುವ ಮತ್ತು ನಿರ್ಮಾಣವಾಗುತ್ತಿರುವ ಮನೆಗಳನ್ನು ನೈಜ ಕಟ್ಟಡ ಕಾರ್ಮಿಕರಿಗೆ ನೀಡಬೇಕು ಇನ್ನೂ ಮುಂದೆ ನಿವೇಶನ/ ವಸತಿ ನಿರ್ಮಾಣ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿವತಿಯಿಂದ ನೊಂದಾವಣೆ ಹಿರಿತನ ಆಧರಿಸಿ ಕನಿಷ್ಟ 5 ಲಕ್ಷ ರೂಪಾಯಿ ಸಹಾಯ ಧನ ನೀಡಬೇಕು. ಕೊಪ್ಪಳ ನಗರದಲ್ಲಿ 400ಕ್ಕೂ ಹೆಚ್ಚು ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳನ್ನು ಕಟ್ಟಿಸಿಕೊಳ್ಳಲು ಬರುವ ಫಲಾನುಭವಿಗಳಿಗೆ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಮಾಡಿಸಿಕೊಂಡು ಬರಲು ಹೇಳುವ ಮೂಲಕ ನಕಲಿ ಕಾರ್ಡುಗಳು ಸೃಷ್ಟಿಗೆ ಕಾರಣರಾಗಿದ್ದು. ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಮುಂಬರುವ ದಿನಗಳಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ನಗರ ಹಾಗು ಗ್ರಾಮೀಣ ಭಾಗದಲ್ಲಿ ವಸತಿ/ ನಿವೇಶನ ಶೇಕಡ 30% ರಷ್ಟು ಮೀಸಲಿಡಬೇಕು.

 1996 ಮೂಲ ಸೆಸ್ ಕಾಯ್ದೆ ಪ್ರಕಾರ ಈಗಿರುವ ಶೇಕಡ 1 ರಷ್ಟನ್ನು ಶೇಕಡ 2ಕ್ಕೆ ಹೆಚ್ಚಿಸಬೇಕು. ಮತ್ತು ಸೆಸ್‌ ವಸೂಲಾತಿಗೆ ಜಿಲ್ಲಾ ಮಟ್ಟದ ಪರಿವೀಕ್ಷಣಾ ಸಮಿತಿ ರಚಿಸಿ ಕಟ್ಟಿನಿಟ್ಟಾಗಿ ಸೆಸ್ ವಸೂಲಿ ಕ್ರಮ ಬಿಗಿಗೊಳಿಸಬೇಕು ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ 'ಕಲ್ಯಾಣ ಮಂಡಳಿಯನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಅಧೀನಕ್ಕೆ ಬಿಡಬಾರದು.

 2022-23 ರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ವಿಸ್ತರಣೆ ಮಾಡಬೇಕು ಹಾಗೂ 2015-16 ರಿಂದ ಇಲ್ಲಿಯವರೆಗೂ ಬಾಕಿ ಇರುವ ಶೈಕ್ಷಣಿಕ/ಇತರೆ ಸೌಲಭ್ಯಗಳ ಧನಸಹಾಯ ಅರ್ಜಿಗಳನ್ನು ಬೇಗ ಇತ್ಯರ್ಥಗೊಳಿಸಬೇಕು.

2023 ಜನವರಿಯ ಕಚೇರಿ ಆದೇಶವನ್ನು ಹಿಂಪಡೆದು ನಿವೃತ್ತಿ ಪಿಂಚಣಿಯನ್ನು 60 ವರ್ಷ ತುಂಬಿದ ನಂತರ ಯಾವಾಗಲಾದರೂ ಫಲಾನುಭವಿ ಅರ್ಜಿ ಸಲ್ಲಿಸಿದರೂ ಪಿಂಚಣಿ ನೀಡಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪಿಂಚಣಿಯನ್ನು 5000 ರೂಪಾಯಿಗೆ ಹೆಚ್ಚಿಸಬೇಕು.

 ಮದುವೆ ಧನ ಸಹಾಯವನ್ನು ರೂ.100000/-ಕ್ಕೆ ಹೆಚ್ಚಿಸಬೇಕು.1996 ರಿಂದ ನಿರಂತರವಾಗಿ ಎ.ಐ.ಟಿ.ಯು.ಸಿ. ನಡೆಸಿದ ಹೋರಾಟದ ಫಲವೇ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬರಲು ಕಾರಣವಾಗಿದೆ. ಹಾಗಾಗಿ ನಮ್ಮ ಸಂಘಟನೆಗೆ ಖಾಯಂ ಸದಸ್ಯತ್ವ ನೀಡಬೇಕು.ನಕಲಿ ಕಟ್ಟಡ ಕಾರ್ಮಿಕರ ಫಲಾನುಭವಿಗಳನ್ನು ತಡೆಯಲು ಸೇವಾಸಿಂಧು. ಸಿ.ಎಸ್.ಸಿ. ಗ್ರಾಮ್ ಒನ್ ಕೇಂದ್ರಗಳಿಗೆ ಅವಕಾಶ ನೀಡದೆ ಮಂಡಳಿ ಅಭಿವೃದ್ಧಿಪಡಿಸಿರುವ ದತ್ತಾಂಶದಲ್ಲಿ ಸೌಲಭ್ಯ ನವೀಕರಣ ಮತ್ತು ನೊಂದಾವಣೆಯನ್ನು ಮಂಡಳಿಯಿಂದಲೇ ನೀಡಬೇಕು ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಮಾತ್ರ ಕಟ್ಟಡ ಕಾರ್ಮಿಕ ನೊಂದಾವಣೆ. ನವೀಕರಣ ಹಾಗೂ ಇತರೆ ಸೌಲಭ್ಯಗಳ ಕೆಲಸ ಮಾಡುವ ಅವಕಾಶ ನೀಡಬೇಕು. ಹೊಸ ದತ್ತಾಂಶದಲ್ಲಿ ಗುರುತಿನ ಚೀಟಿ ನವೀಕರಣ ಮಾಡಲು ಒಂದು ವರ್ಷ ನಿಗದಿಯಾಗಿದೆ. ಹಾಗೂ ನಕಲಿ ಗುರುತಿನ ಚೀಟಿ. ಹೆಸರು ಬದಲಾವಣೆಗಳು ಇದ್ದರೂ ಸಹ ನವೀಕರಣ ಮಾಡಲಾಗುತ್ತಿಲ್ಲ. ಇದೆಲ್ಲ ಸರಿಪಡಿಸಿ ಈ ಹಿಂದೆ ಇದ್ದ ಹಾಗೆ ನವೀಕರಣ ಮಾಡಲು ಮೂರು ವರ್ಷಕ್ಕೊಮ್ಮೆ ಅವಕಾಶ ನೀಡಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಕಟ್ಟಡ ಕಾರ್ಮಿಕರನ್ನು ಸಂಘಟನೆ ರಚಿಸಿಕೊಂಡು ಕಲಬುರ್ಗಿಯಲ್ಲಿ ನೋಂದಾಯಿಸಲು ಸೂಚಿಸುತ್ತಿದ್ದರಿಂದ ಮುಗ್ಧ ಕಟ್ಟಡ ಕಾರ್ಮಿಕರ ಅನಾವಶ್ಯಕ ಹಣ ಪೋಲು ಮಾಡಿಸುತ್ತಿರುವ ಅಧಿಕಾರಿಗಳ. ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂತಾದ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಕಟ್ಟಡ ಕಾರ್ಮಿಕರ ಮಂಡಳಿಯ ಅಧಿಕಾರಿಗಳ ಸಭೆ ಕರೆದು ನೈಜ ಕಟ್ಟಡ ಕಾರ್ಮಿಕರ ಬೆವರಿನಿಂದ ಕ್ರೋಢಿಕರಿಸಿದ ಕಲ್ಯಾಣ ಮಂಡಳಿಯನ್ನು ಉಳಿಸಿ ಬೆಳೆಸಲು ದಿಟ್ಟತನದ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ (ರಿ)(ಎ.ಐ.ಟಿ.ಯು.ಸಿ.ಸಂಯೋಜಿತ)ದ ಗೌರವಾಧ್ಯಕ್ಷ ಎಚ್. ಗೌಡರು.ಅಧ್ಯಕ್ಷ ಮೌಲಾ ಸಾಬ್ ಕಪಾಲಿ.ಉಪಾಧ್ಯಕ್ಷ ತುಕಾರಾಂ ಪಾತ್ರೋಟಿ. ಕಾರ್ಯದರ್ಶಿ ಮಾರುತಿ ಚಿನ್ನೂರ್. ಖಜಾಂಚಿ ಅಶೋಕ್ ಭಾವಿಮಾನಿ. ಸಹ ಖಜಾಂಚಿ ಗೈಬು ಸಾಬ್ ಮಾಳೆಕೊಪ್ಪ ಮೇಸ್ತ್ರಿ. ಸಹ ಕಾರ್ಯದರ್ಶಿ ಹನಮಂತ ವಡ್ಡರ್. ಹಿರಿಯ ಸಲಹೆಗಾರ ಫಾದರ್ ಚೆನ್ನಬಸಪ್ಪ ಜಾಲಿಹಾಳ. ಪ್ರಕಾಶ್ ದೇವರಮನಿ. ಅಮೀರ್ ಬಾಷಾ. ಜಗದೀಶ್ ಕಟ್ಟಿಮನಿ. ಮಂಜು ವಡ್ಡರ್. ದೇವಪ್ಪ ಕಟ್ಟಿಮನಿ. ರವಿ ಬಂಗಾಳಿಮರ. ನಾಗರಾಜ್ ಮುಂಡರಗಿ. ಧರ್ಮಣ್ಣ ಬೊಮ್ಮನಾಳ.ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ರಾಜ್ಯ ಸದಸ್ಯ ಹುಲುಗಪ್ಪ ಅಕ್ಕಿ ರೊಟ್ಟಿ. ತಾಲ್ಲೂಕಾ ಸಂಚಾಲಕ ನೂರ್ ಸಾಬ್ ಹೊಸಮನಿ. ನಗರ ಸಂಚಾಲಕ ಜಾಫರ್ ಕುರಿ. ದಿಡ್ಡಿಕೇರಾ ಬಡಾವಣೆ ಘಟಕದ ಅಧ್ಯಕ್ಷ ಸಾದಿಕ್ ಅಲಿ ದಫೆದಾರ್ ಪೈಲ್ವಾನ್. ವಸಂತ್ ಬಿಜಕಲ್. ಮಿಟ್ಟಿಕೇರಾ ಬಡಾವಣೆ ಘಟಕದ ಅಧ್ಯಕ್ಷ ಶಿವಪ್ಪ ದನಕಾರ್. ಉಪಾಧ್ಯಕ್ಷ ಲಕ್ಷ್ಮಣ ಎಮ್ಮಿ.

  ಹಾಲಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಪೀರ್ ಸಾಬ್ ವಾಲಿಕಾರ್. ಉಮೇಶ್ ಭಾವಿ. ಶೌಕತ್ ಅಲಿ ಹುಂಚಿಗಿಡ. ಸಿದ್ದಪ್ಪ ಬೆಣ್ಣಿ. ಮುಸ್ತಫಾ ಹುಂಚಿಗಿಡ.    

ಲಕಮಾಪುರ ಗ್ರಾಮ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಬಿ. ಅಲಸಿನ ಮಠದ. ಮೆಹಬೂಬ್ ಕೊಪ್ಪಳ ಆನಂದ ಸಸಿ ಶೇಖರಪ್ಪ ಮುದ್ಲಾಪುರ. ಖಾಸಿಮ್ ಸಾಬ್ ನದಾಫ್. ಶರಣಯ್ಯ ಸಸಿ. ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಣ್ಣ ಚೌಹಾಣ್.ಕಾರ್ಡ್ ದರ್ಪಣದ ಸಂಯೋಜಕಿ ಸೌಭಾಗ್ಯ. ಸಹ ಸಂಯೋಜಕ ಗವಿಸಿದ್ದಪ್ಪ ಹಲಗಿ ಕುಣಿಕೇರಿ. ಮುಂತಾದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ