ಕುಳುವ ನುಲಿಯ ಚಂದ್ರಯ್ಯ ಅವರ 916 ನೇ ಜಯಂತಿ ; ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ
ಬೆಂಗಳೂರು: ಕಾಯಕಯೋಗಿ ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ರಾಜ್ಯಮಟ್ಟದ
916ನೇ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೆಪಿಸಿಸಿ ಮುಖಂಡರು ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಿತಿ ರಾಜ್ಯ ಸಂಚಾಲಕರಾದ ಜಿ. ಪಲ್ಲವಿ ಮನವಿ ಮಾಡಿದ್ದಾರೆ.
ರಾಜ್ಯಾದ್ಯಾಂತ ಜಿಲ್ಲಾ, ತಾಲ್ಲೂಕು ಆಡಳಿತದ ಜೊತೆಗೂಡಿ ಜಯಂತಿ ಆಚರಿಸುತ್ತಿದ್ದು, ಇದನ್ನು ಅರ್ಥಪೂರ್ಣಗೊಳಿಸಬೇಕು.
12ನೇ ಶತಮಾನದ ಕಲ್ಯಾಣದ ವೈಚಾರಿಕ ಕಾಂತ್ರಿಯ ಹರಿಕಾರರಾದ ಬಸವಸಾಧಿ ಪ್ರಮಥರ ಸಮಾಕಾಲೀನರೂ, ಕಲ್ಯಾಣದ ಸ್ವತಃ ಕಾಯಕ ಮತ್ತು ದಾಸೋಹಕ್ಕೆ ಮಾದರಿಯಾದ ಶ್ರೇಷ್ಠ ಕಾಯಕ ಹಠಯೋಗಿ ಎಂದು ಜನ ಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಕೊರಮ-ಕೊರಚ ಸಮುದಾಯದ ಜನ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ನವಿಶೇಷ ಅಥಿತಿಯಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ನೂಲಿನ ಹುಣ್ಣಿಮೆ ದಿನದಂದು ರಾಜ್ಯಾದ್ಯಾಂತ 31 ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಕೇಂದ್ರಸ್ಥಾನದಲ್ಲಿ ಸರ್ಕಾರ ಆಯೋಜಿಸುವ ಜಯಂತಿ ಕಾರ್ಯಕ್ರಮದಲ್ಲಿ ಆಪಾರ ಸಂಖ್ಯೆಯಲ್ಲಿ ಭಕ್ತಿಪೂರ್ಪಕವಾಗಿ ಸಂಘದ ಎಲ್ಲಾ ಹಂತದ ಘಟಕಗಳ ಪಧಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಮಾಜದ ಹಿರಿಯರು, ಚಿಂತಕರು, ಮಹಿಳೆಯರು ಮತ್ತು ವಿದ್ಯಾರ್ಥಿ ಸಮೂಹ, ಬುದ್ದಿಜೀವಿಗಳು ಮತ್ತು ನೌಕರ ವರ್ಗದವರೊಂದಿಗೆ ಜೊತೆಗೂಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಗ್ಗಟ್ಟಾಗಿ ಜಯಂತಿಯನ್ನು ಆಚರಿಸಬೇಕು. ಜೊತೆಗೆ ಶ್ರೀ ಶರಣರ ಕಾಯಕ ತತ್ವಾದರ್ಶಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸಬೇಕು. ಜೊತೆಗೆ ಜಯಂತೋತ್ಸವವನ್ನು ರಾಜ್ಯಾದ್ಯಾಂತ ಸಡಗರದಿಂದ ಆಚರಿಸಿ ಸಮುದಾಯದ ಒಗ್ಗಟ್ಟು ಮತ್ತು ಧಾರ್ಮಿಕ ಆಸ್ಮಿತೆಯ ಬದ್ಧತೆಯನ್ನು ಎತ್ತಿಹಿಡಿಯುವ ಮೂಲಕ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿಯಾಗಬೇಕೆಂದು ಜಿ.ಪಲ್ಲವಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ