*ನನ್ನ ಮಣ್ಣು ನನ್ನ ದೇಶ*ಅಭಿಯಾನಕ್ಕೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳಿಂದ ಮಣ್ಣನ್ನು ಸಂಗ್ರಹ

ಕೊಟ್ಟೂರು ತಾಲೂಕು ಪಂಚಾಯಿತಿ ವತಿಯಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಭಾಗವಾಗಿ ತಾಲೂಕಿನ 14 ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಳಸದ ಮೂಲಕ ತಾಲೂಕು ಪಂಚಾಯಿತಿಯ ಮಾನ್ಯ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಸರ್ ಅವರು ನೆಹರು ಯುವ ಕೇಂದ್ರದ ಪ್ರತಿ ನಿಧಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಗಸ್ಟ್ 15 ರ ಪ್ರಯುಕ್ತ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಆಚರಿಸಲಾಗಿದೆ. ಇದರ ಪ್ರಯುಕ್ತವಾಗಿ ಪಂಚಪ್ರಾಣ ಪ್ರತಿಜ್ಞೆ,  ಅಮೃತ ವನ, ಸಸಿನಾಟಿ, ಯೋಧರಿಗೆ ನಮನ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣನ್ನು ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾ ಪುಷ್ಪಲತಾ, ವಿಷಯ ಪಾಲಕರಾದ ರೂಪಾ, ಚಂದ್ರಶೇಖರ್, ಪ್ರಭಾಕರ್, ನೇತ್ರಾವತಿ,  ತಾಂತ್ರಿಕ ಸಂಯೋಜಕರಾ ಶ್ರೀಕಾಂತ್, ಐಇಸಿ ಸಂಯೋಜಕರಾದ ಪ್ರಭು ಕುಮಾರ್, ಎಂಐಎಸ್ ಸಂಯೋಜಕರಾದ ನೇತ್ರಾವತಿ, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ವೀರೇಶ್, ಮೆಹಬೂಬ್, ರಾಮಮೂರ್ತಿ, ನಾಗಣ್ಣ, ನಂದೀಶ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ