ತುಂಗಾ ಭದ್ರಾ ಒಳ ಹರಿವು ಹೆಚ್ಚಳ

ಬಳ್ಳಾರಿ:ಕಳೆದ ಎರಡು ಮೂರು ದಿನಗಳ ಹಿಂದೆ ಮಲೆನಾಡು ಮಧ್ಯ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆ ಆದ ಹಿನ್ನೆಲೆಯಲ್ಲಿ ತುಂಗಾ ಭದ್ರ ಒಳ ಹರಿವು ಹೆಚ್ಚಳ ಆಗಿದೆ.

ನಿನ್ನೆ 1606 ಕ್ಯೂಸೆಕ್ ಇದ್ದ ಒಳ ಹರಿವು ಇಂದು 2032 ಕ್ಯೂಸೆಕ್ ಗೆ ಏರಿದೆ.

ಹೊರ ಹರಿವಿನ ಪ್ರಮಾಣ 10ಸಾವಿರ ಕ್ಯೂಸೆಕ್ ಗೂ ಅಧಿಕ ಇರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ 81.3 ಟಿಎಂಸಿ ಗೆ ಇಳಿದಿದೆ.

1633 ಅಡಿ ಎತ್ತರ 105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಕಳೆದ ವರ್ಷ ಇಷ್ಟೊತ್ತಿಗೆ ಆಗಲೇ ಎರಡು ಬಾರಿ ತುಂಬಿ ಹರಿದಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಒಳ ಹರಿವು 29 ಸಾವಿರ ಕ್ಯೂಸೆಕ್ ಇತ್ತು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ